ಯುಪಿ ಬೋರ್ಡ್ ಫಲಿತಾಂಶ 2022 ಇನ್ನೂ ಏನನ್ನೂ ದೃಢೀಕರಿಸದಿದ್ದರೂ ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್ (UPMSP) ಯುಪಿ ಬೋರ್ಡ್ 10ನೇ ತರಗತಿ, 12ನೇ ಫಲಿತಾಂಶವನ್ನು ಜೂನ್ 15ರ ಒಳಗೆ ಬಿಡುಗಡೆ ಮಾಡಬಹುದು ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ನಡುವೆ ಯುಪಿಎಂಎಸ್‌ಪಿ 10 ನೇ ತರಗತಿ, 12 ನೇ ತರಗತಿ ಫಲಿತಾಂಶಗಳನ್ನು ಜೂನ್ 10 ರೊಳಗೆ ಪ್ರಕಟಿಸಲಾಗುವುದು ಎಂಬ ನಕಲಿ ಸುದ್ದಿಗೆ ಪ್ರತಿಕ್ರಿಯಿಸಿದ ಮಾಧ್ಯಮಿಕ ಶಿಕ್ಷಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆರಾಧನಾ ಶುಕ್ಲಾ, ”ಯುಪಿ ಬೋರ್ಡ್ ಫಲಿತಾಂಶದ ದಿನಾಂಕ ಮತ್ತು ಸಮಯ ಅಧಿಕೃತವಾಗಿ ಘೋಷಣೆ ಆಗಿಲ್ಲ. ಮಂಡಳಿಯು ಫಲಿತಾಂಶದ ದಿನಾಂಕ ಮತ್ತು ಸಮಯವನ್ನು ಅಧಿಕೃತ ವೆಬ್‌ಸೈಟ್ upresults.nic.in, upmsp.edu.in ನಲ್ಲಿ ಘೋಷಿಸುತ್ತದೆ” ಎಂದು ಹೇಳಿದ್ದಾರೆ.
ಯುಪಿಎಂಎಸ್‌ಪಿ ಅಧಿಕಾರಿಗಳು ಫಲಿತಾಂಶದ ದಿನಾಂಕ ಮತ್ತು ಸಮಯದ ಕುರಿತು ಇನ್ನೂ ಘೋಷಣೆ ಮಾಡಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಯುಪಿ ಬೋರ್ಡ್ ಫಲಿತಾಂಶ 2022 ಮುಂದಿನ ವಾರ ಜೂನ್ 15 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: National Education Policy: ಕೇಂದ್ರೀಯ ವಿ.ವಿ. ನೇಮಕಾತಿಯಲ್ಲಿ ಬದಲಾವಣೆ; ವೃತ್ತಿಪರರು, ಕೈಗಾರಿಕೆ ಪರಿಣತರಿಂದಲೂ ಪಾಠ
ಈ ವರ್ಷ ಒಟ್ಟು 51,92,689 ವಿದ್ಯಾರ್ಥಿಗಳು ಯುಪಿ ಬೋರ್ಡ್ 10, 12 ನೇ ತರಗತಿ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 47,75,749 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶ ಪ್ರಕಟಗೊಂಡರೆ ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ಮತ್ತು ಮಧ್ಯಂತರ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ಗಳಾದ upmsp.edu.in, upresults.nic.in ಮತ್ತು upmspresults.up.nic.in ನಲ್ಲಿ ಪರಿಶೀಲಿಸಬಹುದು.
ಫಲಿತಾಂಶ ನೋಡುವುದು ಹೇಗೆ?
ಅಧಿಕೃತ ವೆಬ್‌ಸೈಟ್ https://upmsp.edu.in/ ಗೆ ಭೇಟಿ ನೀಡಿ, ‘UP ಬೋರ್ಡ್ 10 ನೇ ಫಲಿತಾಂಶ 2022’ ಅಥವಾ ‘UP ಬೋರ್ಡ್ 12 ನೇ ಫಲಿತಾಂಶ 2022’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ ರೋಲ್ ಸಂಖ್ಯೆ, ಶಾಲೆಯ ಕೋಡ್ ಅನ್ನು ನಮೂದಿಸಿ ಕ್ಲಿಕ್ ಮಾಡಿ. ಈ ವೇಳೆ ನಿಮ್ಮ ಫಲಿತಾಂಶ ಪರದೆಯ ಮೇಲೆ ಬರಲಿದೆ. ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Fri, 10 June 22