ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳೇ ಯಾಕೆ ಫಸ್ಟ್ ಬರುವುದು? ಇಲ್ಲಿದೆ ನೋಡಿ ಕಾರಣ

ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖವಾದದ್ದು. ಆದರಲ್ಲಿಯೂ ಈ ಎಸ್ ಎಸ್ ಎಲ್ ಸಿ ಪಿಯುಸಿ ಪರೀಕ್ಷೆಯೆಂದರೆ ಸಾಕು, ಮಕ್ಕಳಿಗಿಂತ ಹೆತ್ತವರೇ ಹೆಚ್ಚು ಭಯಪಡುತ್ತಾರೆ. ಈಗಾಗಲೇ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವು ಬಂದಾಗಿದೆ. ಹೌದು, 2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಈ ಬಾರಿಯೂ ಪ್ರತಿವರ್ಷದಂತೆ ಬಾಲಕಿಯರೇ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಭಾರಿಯೂ ಹುಡುಗಿಯರೇ ಫಸ್ಟ್ ಬರೋದು ಯಾಕೆ ಎಂದು ಗೊತ್ತಾ? ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳೇ ಯಾಕೆ ಫಸ್ಟ್ ಬರುವುದು? ಇಲ್ಲಿದೆ ನೋಡಿ ಕಾರಣ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 02, 2025 | 5:53 PM

ಪರೀಕ್ಷೆ (exam) ಹೆಸರು ಕೇಳಿದಾಗ ಕೂಡಲೇ ಹಸಿವು ನಿದ್ದೆ ಎಲ್ಲವು ದೂರ ಓಡುತ್ತದೆ. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಈ ಅನುಭವವಾಗಿರಬಹುದು. ಹೌದು, ಇಂದು ಹತ್ತನೇ ತರಗತಿ ಫಲಿತಾಂಶ (SSLC Result) ಪ್ರಕಟಗೊಂಡಿದೆ. ಈ ವರ್ಷ ಶೇಕಡವಾರು ಫಲಿತಾಂಶ 62% ರಷ್ಟು ಬಂದಿದೆ. ರಾಜ್ಯದಲ್ಲಿ ಶೇಕಡ 74.00% ಹೆಣ್ಣು ಮಕ್ಕಳು ಪಾಸ್​ ಆಗಿದ್ದಾರೆ. ಇನ್ನು, ಪಾಸ್ ಆಗಿರುವ ಗಂಡು ಮಕ್ಕಳು ಶೇಕಡಾ 58.07% ರಷ್ಟು ಇದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಉತ್ತಮ ಫಲಿತಾಂಶದೊಂದಿಗೆ ಹುಡುಗರನ್ನು ಹುಡುಗಿಯರೇ ಹಿಂದಿಕ್ಕಿದ್ದಾರೆ. ಇದನ್ನೆಲ್ಲವನ್ನು ನೋಡುವಾಗ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚು ತಯಾರಿ ನಡೆಸಿ ಉತ್ತಮ ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದಂತೂ ನಿಜ.

ಹೌದು, ಎಲ್ಲರಿಗೂ ತಿಳಿದಿರುವಂತೆ ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳಿಗೆ ಕೊಡುವ ಪ್ರಶ್ನೆ ಪತ್ರಿಕೆ ಹಾಗೂ ಸಮಯವಕಾಶವು ಒಂದೇ ಆಗಿದ್ದರೂ ಕೂಡ ಪರೀಕ್ಷೆಯ ಫಲಿತಾಂಶದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುವುದು ಯಾಕೆ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಳ್ಳಬಹುದು. ಹೆಣ್ಣು ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಫಲಿತಾಂಶದಲ್ಲಿ ಗಂಡು ಮಕ್ಕಳನ್ನು ಹಿಂದಿಕ್ಕಲು ಈ ಕಾರಣಗಳು ಸೇರಿವೆ.

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಚೆನ್ನಾಗಿ ಓದುತ್ತಾರೆ. ತಮ್ಮ ಹೆಚ್ಚಿನ ಸಮಯವನ್ನು ಅಧ್ಯಯನಕ್ಕೆಂದೆ ಮೀಸಲಿಡುತ್ತಾರೆ. ಅದರಲ್ಲಿಯೂ ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದಂತೆ ತಮ್ಮ ಪೂರ್ಣ ಗಮನ ಓದುವಿಕೆಯ ಮೇಲೆಯೇ ಇರುತ್ತದೆ. ಹೆಣ್ಣು ಮಕ್ಕಳಲ್ಲಿ ಕಡಿಮೆ ಅಂಕ ಗಳಿಸಿದರೆ ಅಥವಾ ಫೇಲ್ ಆದರೆ ತನ್ನ ಬಗ್ಗೆ ಯಾರು ಏನು ಅಂದುಕೊಳ್ಳುತ್ತಾರೆ ಎನ್ನುವ ಆತಂಕವಿರುತ್ತದೆ.

ಇದನ್ನೂ ಓದಿ
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
SSLC Result 2025: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆ ಸ್ಥಾನ
SSLC ಫಲಿತಾಂಶ: 22 ವಿದ್ಯಾರ್ಥಿಗಳಿಗೆ ಔಟ್​ ಆಫ್ ಔಟ್​
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಫಲಿತಾಂಶ ಯಾವ ಸೈಟ್ ಗಳಲ್ಲಿ ಲಭ್ಯ?

ಇದನ್ನೂ ಓದಿ :ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್ ಮಿಥುನ್

ತಾನು ಚೆನ್ನಾಗಿ ಓದಿ ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆನ್ನುವ ಆಸೆಯಿರುವ ಕಾರಣ ಎಷ್ಟೇ ಕಷ್ಟವಾದರೂ ಸರಿಯೇ ಉತ್ತಮವಾಗಿ ಅಭ್ಯಾಸ ನಡೆಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಮೇಲುಗೈ ಸಾಧಿಸುತ್ತಾರೆ. ಇನ್ನೊಂದೆಡೆ ತಂದೆ ತಾಯಿಯೂ ತನ್ನ ಮೇಲೆ ಇಟ್ಟ ನಂಬಿಕೆಯನ್ನು ಹುಸಿ ಮಾಡಬಾರದು ಎನ್ನುವ ಭಾವನೆಯೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಹೆಚ್ಚಿರುತ್ತದೆ. ಒಂದು ವೇಳೆ ಅಂಕ ಕಡಿಮೆ ಬಂದರೆ ತನ್ನ ಪೋಷಕರು ಕೂಡ ಎಲ್ಲರೂ ಕೇಳುವ ಪ್ರಶ್ನೆಗೆ ಉತ್ತರ ಕೊಡಬೇಕಾಗುತ್ತದೆ. ಈ ಎಲ್ಲಾ ಕಾರಣದಿಂದಲೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಓದಿನಲ್ಲಿ ಮುಂದೆ ಇರುವುದು.

ಇನ್ನಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Fri, 2 May 25