ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಹಿಂಸೆ, ಹೊಡೆದಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಲ್ಲೀಗ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 6ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಮತದಾನಕ್ಕೆ ಇನ್ನೊಂದೇ ದಿನ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿ ಪಾಯಲ್ ಸರ್ಕಾರ್ ಅವರ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬೆಹಾಲಾದ ಠಾಕೂರ್ಪುರದಲ್ಲಿ ಘಟನೆ ನಡೆದಿದ್ದು, ಪಾಯಲ್ ಅವರು ಪ್ರಚಾರದಲ್ಲಿ ತೊಡಗಿಕೊಂಡಿದ್ದರು.
ಮತ ಪ್ರಚಾರದಲ್ಲಿ ತೊಡಗಿದ್ದ ಪಾಯಲ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಳಿ ನಡೆದ ಸ್ಥಳದ ಫೋಟೋಗಳೂ ಕೂಡ ವೈರಲ್ ಆಗುತ್ತಿವೆ. ಬಿಜೆಪಿ ಇದುವರೆಗೆ ಈ ಬಗ್ಗೆ ಯಾವುದೇ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ.
ನಟಿ ಪಾಯಲ್ ಸರ್ಕಾರ್ ಅವರು ಫೆಬ್ರವರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇದೆ. ಆದರೆ ನಾನು ಸಕ್ರಿಯವಾಗಿರಲಿಲ್ಲ. ಆದರೆ ಬಿಜೆಪಿ ಸಿದ್ಧಾಂತ ನನಗೆ ಹೆಚ್ಚು ಆಪ್ತ ಎನಿಸುವ ಕಾರಣ ನಾನು ಆ ಪಕ್ಷ ಸೇರುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಪಾಯಲ್ಗೆ ಕೇಂದ್ರ ಸರ್ಕಾರ Y ಶ್ರೇಣಿಯ ಭದ್ರತೆಯನ್ನು ನೀಡಿತ್ತು. ಅದಾದ ಬಳಿಕ ಮಾರ್ಚ್ನಲ್ಲಿ ಪಾಯಲ್ ಸೇರಿ ಒಟ್ಟು ಐವರು ಮುಖಂಡರಿಗೆ ಸಿಐಎಸ್ಎಫ್ ಶ್ರೇಣಿಯ ಭದ್ರತೆಯನ್ನು ನೀಡಲಾಗಿತ್ತು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಾಯಲ್ ಪೂರ್ವ ಬೆಹಾಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ತೃಣಮೂಲ ಕಾಂಗ್ರೆಸ್ನ ರತ್ನಾ ಚಟರ್ಜಿ ಕಣಕ್ಕೆ ಇಳಿದಿದ್ದಾರೆ.
Today the good people of Behala East has stood beside me to fight against this hooliganism of TMC. 2nd May, Bengal will stand against it.#NoMoreTMC #NoMoreHooligans#EbarHobeAsolPoriborton #EbarSonarBanglaEbarBJP @narendramodi @AmitShah @DilipGhoshBJP @SuvenduWB @JPNadda . pic.twitter.com/mJ1SBKsErL
— Paayel Sarkar (@Paayel_12353) April 4, 2021
ಇದನ್ನೂ ಓದಿ: Body Shaming; ಸುಮ್ಮನಿರುವುದು ಹೇಗೆ? : ಕಪ್ಪು ರೇಷಿಮೆ ಸೀರೆಯನ್ನೇ ಆರತಕ್ಷತೆಗೆ ಆಯ್ಕೆ ಮಾಡಿಕೊಂಡಿದ್ದೆ
Published On - 4:00 pm, Sun, 4 April 21