Exit Poll Result 2023: ಪಂಚರಾಜ್ಯಗಳ ಮತಗಟ್ಟೆ ಸಮೀಕ್ಷೆ ಇಂದು ಪ್ರಕಟ; ಎಲ್ಲಿ ವೀಕ್ಷಿಸಬಹುದು?

|

Updated on: Nov 30, 2023 | 3:01 PM

Exit Poll Result 2023 Today Time: ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂನಲ್ಲಿನ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಅದಕ್ಕಿಂತ ಮೊದಲು ಮತಗಟ್ಟೆ ಸಮೀಕ್ಷೆ ಇಂದು (ಗುರುವಾರ) ಸಂಜೆ 6 ಗಂಟೆಗೆ ಪ್ರಕಟವಾಗಲಿದೆ. ಎಕ್ಸಿಟ್ ಪೋಲ್ ಎಲ್ಲಿ ವೀಕ್ಷಿಸಬಹುದು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Exit Poll Result 2023: ಪಂಚರಾಜ್ಯಗಳ ಮತಗಟ್ಟೆ ಸಮೀಕ್ಷೆ ಇಂದು ಪ್ರಕಟ; ಎಲ್ಲಿ ವೀಕ್ಷಿಸಬಹುದು?
ಎಕ್ಸಿಟ್ ಪೋಲ್
Follow us on

ದೆಹಲಿ ನವೆಂಬರ್ 29 : 2023 ರ ಇತ್ತೀಚಿನ ವಿಧಾನಸಭಾ ಚುನಾವಣೆಗಳು (Assembly Elections 2023) ಮುಕ್ತಾಯಗೊಂಡಿವೆ, ತೆಲಂಗಾಣ ಚುನಾವಣೆ (Telangana Polls) ಇಂದು ನವೆಂಬರ್ 30 ರಂದು ನಡೆಯಲಿದ್ದು ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶವನ್ನು ನಿರೀಕ್ಷಿಸುತ್ತಿರುವ ಜನರು ಪಂಚರಾಜ್ಯಗಳ ಅಂದರೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ ಮತ್ತು ಮಿಜೋರಾಂನ ಮತಗಟ್ಟೆ (Exit Poll) ಫಲಿತಾಂಶಗಳನ್ನು ತಿಳಿಯಲು ಉತ್ಸುಕರಾಗಿದ್ದಾರೆ. ನವೆಂಬರ್ 23 ರಂದು ರಾಜಸ್ಥಾನದ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಮಧ್ಯಪ್ರದೇಶದಲ್ಲಿ ನವೆಂಬರ್ 17,  ಛತ್ತೀಸ್​​ಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿದೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಳ್ಳಲು ನೋಡುತ್ತಿದೆ, ಆದರೆ ಬಿಜೆಪಿ ಮಧ್ಯಪ್ರದೇಶದಲ್ಲಿ ಮತ್ತೊಂದು ಅವಧಿಯ ಮೇಲೆ ಕಣ್ಣಿಟ್ಟಿದೆ.ತೆಲಂಗಾಣದಲ್ಲಿ, ಕೆ ಚಂದ್ರಶೇಖರ ರಾವ್ ನೇತೃತ್ವದ ಪ್ರಸ್ತುತ ಭಾರತ್ ರಾಷ್ಟ್ರ ಸಮಿತಿ ಸರ್ಕಾರವನ್ನು ಪದಚ್ಯುತಗೊಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಆಶಿಸುತ್ತಿವೆ. ಏತನ್ಮಧ್ಯೆ, ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್, ಕಾಂಗ್ರೆಸ್ ಮತ್ತು ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಎರಡರಿಂದಲೂ ಸವಾಲು ಎದುರಿಸುತ್ತಿದೆ.

ಮತಗಟ್ಟೆ ಸಮೀಕ್ಷೆ

ಸುದ್ದಿ ಸಂಸ್ಥೆಗಳು ಮತ್ತು ವಿವಿಧ ಏಜೆನ್ಸಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಗಳು ನಿರ್ದಿಷ್ಟ ಪ್ರದೇಶಗಳ ಮತದಾನದ ಮಾದರಿಗಳ ಒಳನೋಟಗಳನ್ನು ಸಂಗ್ರಹಿಸಲು ಮತದಾರರ ಸಮೀಕ್ಷೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಸಮೀಕ್ಷೆಗಳು ಮತಗಳನ್ನು ಹೇಗೆ ಚಲಾಯಿಸಲಾಗಿದೆ ಎಂಬುದರ ನೋಟವನ್ನು ನೀಡುತ್ತವೆ. ಅದೇ ವೇಳೆ ಸಂಭಾವ್ಯ ವಿಜೇತರನ್ನು ಊಹಿಸಲು ಸಹಾಯ ಮಾಡುತ್ತವೆ. ಎಕ್ಸಿಟ್ ಪೋಲ್ ಫಲಿತಾಂಶಗಳು ಸಂಪೂರ್ಣವಾಗಿ ಫೂಲ್‌ಫ್ರೂಫ್ ಆಗಿಲ್ಲವಾದರೂ, ಅವು ವಿವಿಧ ಚುನಾವಣಾ ಅಂಶಗಳ ಸ್ಥೂಲ ಅಂದಾಜನ್ನು ನೀಡುತ್ತವೆ.

ಮತಗಟ್ಟೆ ಸಮೀಕ್ಷೆ ಯಾವಾಗ ನಡೆಯುತ್ತವೆ?

ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂನಲ್ಲಿನ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಇಂದು (ಗುರುವಾರ) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ಎಕ್ಸಿಟ್ ಪೋಲ್ ಯಾವಾಗ ಮತ್ತು ಎಲ್ಲಿ ನೋಡಬಹುದು?

2023 ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ವಿವಿಧ ಸುದ್ದಿ ಮಾಧ್ಯಮಗಳು ಪ್ರಸಾರ ಮಾಡುತ್ತವೆ. ಟಿವಿ9 ವಾಹಿನಿಯಲ್ಲಿ 5 ಗಂಟೆಗೆ ಎಕ್ಸಿಟ್ ಪೋಲ್ ಇಲ್ಲಿ ವೀಕ್ಷಿಸಿ. ABP ನೆಟ್‌ವರ್ಕ್, ಟೈಮ್ಸ್ ನೌ, ಇಂಡಿಯಾ ಟುಡೆ, ಆಜ್ ತಕ್, ಝೀ ನ್ಯೂಸ್, TV9 ಭಾರತ್ ವರ್ಷ್ ಇಲ್ಲಿಯೂ ಎಕ್ಸಿಟ್ ಪೋಲ್ ವೀಕ್ಷಿಸಬಹುದು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Wed, 29 November 23