Telangana Assembly Polls 2023: ವೋಟು ಮಾಡಲು ಮತಗಟ್ಟೆಯೊಂದರ ಬಳಿ ಸಾಮಾನ್ಯನಂತೆ ಕ್ಯೂನಲ್ಲಿ ನಿಂತ ಜ್ಯೂ. ಎನ್ ಟಿ ಆರ್
Telangana Assembly Polls 2023: ಚುನಾವಣಾ ಅಯೋಗದ ಮಾಹಿತಿಯ ಪ್ರಕಾರ ತೆಲಂಗಾಣ ರಾಜ್ಯದಲ್ಲಿ ಒಟ್ಟು 3.17 ಕೋಟಿ ಮತದಾರರಿದ್ದಾರೆ. ಈ ಬಾರಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ 103 ಜನ ಹಾಲಿ ಶಾಸಕರಾಗಿದ್ದು ಪುನರಾಯ್ಕೆ ಬಯಸಿದ್ದಾರೆ. ಇವರಲ್ಲಿ ಹೆಚ್ಚಿನವರು ಆಡಳಿತರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಹೈದರಾಬಾದ್: ತೆಲಂಗಾಂಣದಲ್ಲಿ ಮತದಾನ ಜೋರು ಹಿಡಿದಿದ್ದು ಅರ್ಹ ಮತದಾರರು ಮನೆಗಳಿಂದ ಹೊರಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದು ರಾಜ್ಯದ ಸೆಲಿಬ್ರಿಟಿಗಳು ಸಹ ಮತಗಟ್ಟೆಗಳಿಗೆ ಬಂದು ವೋಟು ಮಾಡುತ್ತಿದ್ದಾರೆ. ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರದ (Hyderabad) ಪೋಲಿಂಗ್ ಬೂತೊಂದರಲ್ಲಿ ಜನಪ್ರಿಯ ನಟ ಜ್ಯೂನಿಯರ್ ಎನ್ ಟಿ ಅರ್ (Jr NTR) ತಮ್ಮ ಕುಟುಂಬದೊಂದಿಗೆ ಬಂದು ಸರತಿ ಸಾಲಲ್ಲಿ ನಿಲ್ಲುವುದನ್ನು ದೃಶ್ಯಗಳಲ್ಲಿ ನೋಡಬಹುದು. ರಾಜ್ಯದ ಎಲ್ಲ 119 ವಿಧಾನಸಭಾ ಕ್ಷೇತ್ರಗಳಿಗೆ (Assembly constituencies) ಇಂದು ಏಕಕಾಲಕ್ಕೆ ಮತದಾನ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಗೆ ಶುರುವಾಗಿದ್ದು ಸಾಯಂಕಾಲ 6 ಗಂಟೆಗೆ ಕೊನೆಗೊಳ್ಳಲಿದೆ. ತೆಲಂಗಾಣದ ಮತದಾರರು 2,290 ಅಭ್ಯರ್ಥಿಗಳ ಹಣೆಬರಹವನ್ನು ಇವತ್ತು ನಿರ್ಧರಿಸಲಿದ್ದಾರೆ. ಅಭ್ಯರ್ಥಿಗಳ ಪೈಕಿ ಒಬ್ಬ ತೃತೀಯ ಲಿಂಗಿ ಇರೋದು ವಿಶೇಷ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 30, 2023 10:45 AM
Latest Videos