ತೆಲಂಗಾಣ ಚುನಾವಣೆ: ₹700 ಕೋಟಿ ಮೌಲ್ಯದ ನಗದು, ಮದ್ಯ, ಇತರ ಉಚಿತ ವಸ್ತು ವಶ

ನವೆಂಬರ್ 25ರಂದೇ ಜಾರಿ ಸಂಸ್ಥೆಗಳು ಸುಮಾರು 10 ಕೋಟಿ ರೂ ವಶ ಪಡಿಸಿಕೊಂಡಿವೆ.ಅಕ್ಟೋಬರ್ 9 ಮತ್ತು ನವೆಂಬರ್ 25 ರ ನಡುವೆ ಲೆಕ್ಕಕ್ಕೆ ಸಿಗದ ನಗದು 282.75 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಶನಿವಾರ 39 ಕೋಟಿ ರೂಪಾಯಿ ಮೌಲ್ಯದ 5,117 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳಲ್ಲಿ ವಶಪಡಿಸಿಕೊಂಡ ಒಟ್ಟು ಮದ್ಯದ ಮೌಲ್ಯ 117 ಕೋಟಿ ರೂ. ಆಗಿದೆ.

ತೆಲಂಗಾಣ ಚುನಾವಣೆ: ₹700 ಕೋಟಿ ಮೌಲ್ಯದ  ನಗದು, ಮದ್ಯ, ಇತರ ಉಚಿತ ವಸ್ತು ವಶ
ತೆಲಂಗಾಣದಲ್ಲಿ ವಶಪಡಿಸಿಕೊಂಡ ನಗದು
Follow us
ರಶ್ಮಿ ಕಲ್ಲಕಟ್ಟ
|

Updated on: Nov 27, 2023 | 2:34 PM

ಹೈದರಾಬಾದ್ ನವೆಂಬರ್ 27: ಅಕ್ಟೋಬರ್ 9 ರಂದು ಮಾದರಿ ನೀತಿ ಸಂಹಿತೆ (model code of conduct) ಜಾರಿಯಾದಾಗಿನಿಂದ ಇಲ್ಲಿಯವರೆಗೆ ತೆಲಂಗಾಣ ರಾಜ್ಯದಲ್ಲಿ (Telangana polls)  ಚುನಾವಣಾ ಸಂಬಂಧಿತ ವಶಪಡಿಸಿಕೊಂಡ ಪ್ರಕರಣಗಳಲ್ಲಿ ಕನಿಷ್ಠ 700 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ, ಚಿನ್ನ ಮತ್ತು ಇತರ ಉಚಿತ ವಸ್ತುಗಳನ್ನು(freebies) ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ನವೆಂಬರ್ 25ರಂದೇ ಜಾರಿ ಸಂಸ್ಥೆಗಳು ಸುಮಾರು 10 ಕೋಟಿ ರೂ ವಶ ಪಡಿಸಿಕೊಂಡಿವೆ.ಅಕ್ಟೋಬರ್ 9 ಮತ್ತು ನವೆಂಬರ್ 25 ರ ನಡುವೆ ಲೆಕ್ಕಕ್ಕೆ ಸಿಗದ ನಗದು 282.75 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಶನಿವಾರ 39 ಕೋಟಿ ರೂಪಾಯಿ ಮೌಲ್ಯದ 5,117 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳಲ್ಲಿ ವಶಪಡಿಸಿಕೊಂಡ ಒಟ್ಟು ಮದ್ಯದ ಮೌಲ್ಯ 117 ಕೋಟಿ ರೂ.

ಶನಿವಾರ 1.60 ಕೋಟಿ ಮೌಲ್ಯದ 639.5 ಕೆಜಿ ಗಾಂಜಾ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಳೆದ ತಿಂಗಳ ಒಟ್ಟು ಮಾದಕವಸ್ತುಗಳ ಮೌಲ್ಯ 39.48 ಕೋಟಿ ಎಂದು ಅಂದಾಜಿಸಲಾಗಿದೆ.ಅಕ್ಟೋಬರ್ 9 ರಿಂದ ಇಲ್ಲಿಯವರೆಗೆ 186 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರದಂತಹ ಅಮೂಲ್ಯ ಲೋಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸಿಐ ಹೇಳಿಕೆ ತಿಳಿಸಿದೆ.

ಸೀರೆ, ಅಕ್ಕಿ, ಪ್ರೆಶರ್ ಕುಕ್ಕರ್‌ಗಳು, ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಮತಕ್ಕಾಗಿ ಹಣ

ಅಂದಾಜಿನ ಪ್ರಕಾರ, ಐದು ರಾಜ್ಯಗಳ ಈ ಸುತ್ತಿನ ವಿಧಾನಸಭಾ ಚುನಾವಣೆಯಲ್ಲಿ 15,000-20,000 ಕೋಟಿ ರೂ. ಖರ್ಚು ಮಾಡಲಾಗಿದೆ. ಎಷ್ಟೇ ತಪಾಸಣೆ ನಡೆಸಿದರೂ ಮತದಾರರನ್ನು ಖರೀದಿಸಲು ಬೇಕಾದ ಹಣವು ರಾಜಕಾರಣಿಗಳ ವಿವಿಧ ಜಾಲಗಳ ಮೂಲಕ ಅವರ ಸ್ಥಳಗಳಿಗೆ ಈಗಾಗಲೇ ತಲುಪಿದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ತೆಲಂಗಾಣ: ಟವರ್​ ಹತ್ತಬೇಡಿ, ನೀವು ಬಿದ್ದರೆ ನನಗೆ ನೋವಾಗುತ್ತೆ, ದಯವಿಟ್ಟು ಕೆಳಗೆ ಬನ್ನಿ ಎಂದ ಪ್ರಧಾನಿ ಮೋದಿ

ಚುನಾವಣೆಯಲ್ಲಿ ಹಣದ ಹೊಳೆ ತಡೆಯಬೇಕಿದ್ದ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಫೋರಂ ಫಾರ್ ಗುಡ್ ಗವರ್ನೆನ್ಸ್ ಪ್ರತಿನಿಧಿ ಪದ್ಮನಾಭ ರೆಡ್ಡಿ ಅಭಿಪ್ರಾಯಪಟ್ಟರು. ನವೆಂಬರ್ 28 ರಂದು ಪ್ರಚಾರ ಕೊನೆಗೊಳ್ಳಲಿದ್ದು, ನವೆಂಬರ್ 30 ರಂದು ಮತದಾನ ನಡೆಯಲಿದೆ. ಐದು ರಾಜ್ಯಗಳ ಚುನಾವಣೆಯ ಫಲಿತಾಂಶಗಳು ಡಿಸೆಂಬರ್ 3 ರಂದು ಪ್ರಕಟವಾಗಲಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ