ತೆಲಂಗಾಣ: ಟವರ್ ಹತ್ತಬೇಡಿ, ನೀವು ಬಿದ್ದರೆ ನನಗೆ ನೋವಾಗುತ್ತೆ, ದಯವಿಟ್ಟು ಕೆಳಗೆ ಬನ್ನಿ ಎಂದ ಪ್ರಧಾನಿ ಮೋದಿ
ಟವರ್ ಹತ್ತಬೇಡಿ ನೀವು ಬಿದ್ದರೆ ನನಗೆ ನೋವಾಗುತ್ತದೆ ದಯವಿಟ್ಟು ಕೆಳಗಿಳಿಯಿರಿ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನರಲ್ಲಿ ಮನವಿ ಮಾಡಿದರು. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಭಾನುವಾರ ತೆಲಂಗಾಣದ ನಿರ್ಮಲ್‌ನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಯಲ್ಲಿ ಕೆಲವರು ಟವರ್ಗಳನ್ನು ಏರಿದ್ದರು. ಇದನ್ನು ಕಂಡ ಪ್ರಧಾನಿ ಕೂಡಲೇ ಕೆಳಗಿಳಿಯುವಂತೆ ಮನವಿ ಮಾಡಿದರು
ಟವರ್ ಹತ್ತಬೇಡಿ ನೀವು ಬಿದ್ದರೆ ನನಗೆ ನೋವಾಗುತ್ತದೆ ದಯವಿಟ್ಟು ಕೆಳಗಿಳಿಯಿರಿ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಜನರಲ್ಲಿ ಮನವಿ ಮಾಡಿದರು. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಭಾನುವಾರ ತೆಲಂಗಾಣದ ನಿರ್ಮಲ್‌ನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಯಲ್ಲಿ ಕೆಲವರು ಟವರ್ಗಳನ್ನು ಏರಿದ್ದರು. ಇದನ್ನು ಕಂಡ ಪ್ರಧಾನಿ ಕೂಡಲೇ ಕೆಳಗಿಳಿಯುವಂತೆ ಮನವಿ ಮಾಡಿದರು.
ಈ ಮೋದಿ ಮನೆ ಬಿಟ್ಟಿರುವುದು ಸ್ವಂತ ಮನೆ ಕಟ್ಟಲು ಅಲ್ಲ, ಬಡವರಿಗೆ ಮನೆ ಕಟ್ಟಲು, ತುಂಬಾ ಜನಸಂದಣಿ ಇದೆ ಎಂದರೆ ನೀವು ನನ್ನನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ನನಗೆ ತಿಳಿದಿದೆ, ಆದರೆ ಯಾರಾದರೂ ಬಿದ್ದರೆ ನನಗೆ ತುಂಬಾ ದುಃಖವಾಗುತ್ತದೆ, ದಯವಿಟ್ಟು ಕೆಳಗೆ ಬನ್ನಿ ಸ್ನೇಹಿತರೇ, ನಿಮ್ಮ ಪ್ರೀತಿ ನನ್ನ ಕಣ್ಣುಗಳಲ್ಲಿದೆ.
#WATCH | Prime Minister Narendra Modi requests people who climbed the towers to come down during his speech at a public rally in Nirmal, Telangana. pic.twitter.com/GOeDFTo6sp
— ANI (@ANI) November 26, 2023
ನೀವು ನನ್ನನ್ನು ನೋಡಲು ಸಾಧ್ಯವಾಗದಿರಬಹುದು, ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದರು. ರ್ಯಾಲಿಯ ಸಂದರ್ಭದಲ್ಲಿ ಬಾಲಕಿಯೊಬ್ಬಳು ಭಾರತದ ಭಾವುಟವನ್ನು ಬೀಸುತ್ತಿದ್ದಳು, ಅದನ್ನು ನೋಡಿದ ಪ್ರಧಾನಿ ಮೋದಿ ಭಾರತಾಂಬೆಯೇ ಇಲ್ಲಿಗೆ ಬಂದಿದ್ದಾಳೆ ಎಂದರು.ಈ ಬಾಲಕಿ ಪ್ರತಿಯೊಬ್ಬ ಯುವಕರಿಗೂ ಸ್ಫೂರ್ತಿ ಎಂದರು.
ಬಿಆರ್‌ಎಸ್ ನಿಮಗೆ ದ್ರೋಹವನ್ನು ಬಿಟ್ಟರೆ ಬೇರೇನೂ ನೀಡಿಲ್ಲ. ಇಂದು ತೆಲಂಗಾಣ ಸಾವಿರಾರು ಕೋಟಿ ಸಾಲದಲ್ಲಿ ಮುಳುಗಿದೆ. ನಮ್ಮ ತೆಲಂಗಾಣದಲ್ಲಿ ಬಡವರ ಬಗ್ಗೆ ಕಾಳಜಿಯಿಲ್ಲದ ಸರ್ಕಾರವಿದೆ ಎಂದರು. ತೆಲಂಗಾಣದಲ್ಲಿ ನವೆಂಬರ್ 30ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು ಡಿಸೆಂಬರ್ 3 ರಂದು ಫಲಿತಾಂಶ ಹೊರಬರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Mon, 27 November 23