ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಅನುಭವ ಹಂಚಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಕೇವಲ ಆಲ್ಪಾವಧಿಯ ಭೇಟಿಗಾಗಿ ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಲ್ಲಿಂದ ನೇರವಾಗಿ ತೆಲಂಗಾಣಕ್ಕೆ ತೆರಳಿದರು. ನೆರೆ ರಾಜ್ಯದ ವಿಧಾನ ಸಭಾ ಚುನಾವಣೆಗಾಗಿ ನವೆಂಬರ್ 30 ರಂದು ಮತದಾನ ನಡೆಯಲಿದ್ದು ಪ್ರಧಾನಿ ಮೋದಿ ಇವತ್ತು ಮತ್ತು ನಾಳೆ ಹೈದರಾಬಾದ್ ನಲ್ಲಿ ಪ್ರಚಾರ ನಡೆಸಲಿದ್ದಾರೆ.

ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಅನುಭವ ಹಂಚಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ
|

Updated on: Nov 25, 2023 | 3:16 PM

ಬೆಂಗಳೂರು: ರಾಷ್ಟ್ರದ ಹೆಮ್ಮೆಯ ಸಂಸ್ಥೆಯೆನಿಸಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ (HAL) ಇಂದು ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಲ್ಲಿನ ತಯಾರಿಕಾ ಘಟಕದಲ್ಲಿ ಜರುಗುತ್ತಿರುವ ಕೆಲಸಗಳನ್ನು ಪರಿಶೀಲಿಸಿದರು. ನಂತರ ಪ್ರಧಾನಿ ಮೋದಿ ತೇಜಸ್ ಯುದ್ದ ವಿಮಾನದಲ್ಲಿ ಯಶಸ್ವೀಯಾಗಿ ಹಾರಾಟ (sortie) ನಡೆಸಿದರು. ಅವರ ಭೇಟಿಯ ಹಿನ್ನೆಲೆಯಲ್ಲಿ ತೇಜಸ್ ಹಾರಾಟವನ್ನು ಏರ್ಪಾಟು ಮಾಡಲಾಗಿತ್ತು. ಇಲ್ಲಿನ ಪೋಟೋಗಳಲ್ಲಿ ಅವರು ತೇಜಸ್ ವಿಮಾನದಲ್ಲಿ ಕುಳಿತಿರುವುದನ್ನು, ಅಲ್ಲಿಂದ ಥಮ್ ಅಪ್ ಮಾಡಿರುವುದನ್ನು ಮತ್ತು ಹಾರಾಟ ಕೊನೆಗೊಂಡ ಬಳಿಕ ಹೆಲ್ಮೆಟ್ ಎಡಮಗ್ಗುಲಲ್ಲಿ ಹಿಡಿದು ಬರುತ್ತಿರುವುದನ್ನು ನೋಡಬಹುದು. ಫೋಟೋಗಳನ್ನು ಖುದ್ದು ಮೋದಿಯವರೇ ತಮ್ಮ X ಹ್ಯಾಂಡಲ್ ನಲ್ಲಿ ಶೇರ್ ಮಾಡಿ ಅನುಭವ ಹಂಚಿಕೊಂಡಿದ್ದಾರೆ.

 

‘ತೇಜಸ್ ಯುದ್ಧ ವಿಮಾನದಲ್ಲಿ ಯಶಸ್ವೀಯಾಗಿ ಹಾರಾಟ ನಡೆಸಿದೆ, ಅನುಭವ ಅಮೋಘವಾಗಿತ್ತು, ನಮ್ಮ ದೇಶದ ಸಾಮರ್ಥ್ಯದ ಬಗ್ಗೆ ನನ್ನಲಿದ್ದ ನಂಬಿಕೆಯನ್ನು ಅದು ಇಮ್ಮಡಿಗೊಳಿಸಿದ್ದು ರಾಷ್ಟ್ರದ ಕ್ಷಮತೆ ಬಗ್ಗೆ ನನಗಿರುವ ಅಭಿಮಾನ ಮತ್ತು ವಿಶ್ವಾಸವನ್ನು ಉಜ್ಜೀವನಗೊಳಿಸಿದೆ,’ ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us