Exit Polls: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು, ಮೇಘಾಲಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ; ಎಕ್ಸಿಟ್ ಪೋಲ್‌ ಭವಿಷ್ಯ ನುಡಿ

|

Updated on: Feb 27, 2023 | 9:24 PM

Tripura, Meghalaya, and Nagaland Elections Exit Polls ಇಂಡಿಯಾ ಟುಡೇ ಪ್ರಕಾರ ಬಿಜೆಪಿ ತ್ರಿಪುರಾದಲ್ಲಿ 36 ರಿಂದ 45 ಸ್ಥಾನಗಳನ್ನು ಗೆಲ್ಲಲಿದೆ. ಝೀ ನ್ಯೂಸ್-ಮ್ಯಾಟ್ರಿಜ್ ಬಿಜೆಪಿಯು 29-36 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ

Exit Polls: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು, ಮೇಘಾಲಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ; ಎಕ್ಸಿಟ್ ಪೋಲ್‌ ಭವಿಷ್ಯ ನುಡಿ
ಬಿಜೆಪಿ
Follow us on

ತ್ರಿಪುರಾದಲ್ಲಿ ಬಿಜೆಪಿ ಸುಲಭವಾಗಿ ಬಹುಮತ ಪಡೆಯಲಿದೆ ಮತ್ತು ನಾಗಾಲ್ಯಾಂಡ್‌ನಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಮೇಘಾಲಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದ್ದು ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ಏಕೈಕ ಬೃಹತ್ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಒಟ್ಟು ಎರಡು ಎಕ್ಸಿಟ್ ಪೋಲ್‌ಗಳು ಬಿಜೆಪಿ 35 ಸ್ಥಾನಗಳನ್ನು ಪಡೆಯಬಹುದು ಎಂದು ಸೂಚಿಸುತ್ತದೆ.  60 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಕ್ಕಿಂತ ಹೆಚ್ಚಿನ ಸೀಟು ಬೇಕು. 30 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಆಳಿದ ಎಡಪಕ್ಷಗಳು ಕೇವಲ 12 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೀಟುಗಳು ಸಿಗುವುದಿಲ್ಲ.

ಗ್ರೇಟರ್ ಟಿಪ್ರಾಲ್ಯಾಂಡ್‌ನ ಪ್ರಮುಖ ಬೇಡಿಕೆಯೊಂದಿಗೆ ಹಿಂದಿನ ರಾಜಮನೆತನದ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ಅವರ ಹೊಸ ಪಕ್ಷವಾದ ತಿಪ್ರಾ ಮೋಥಾ 12 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಇಂಡಿಯಾ ಟುಡೇ ಪ್ರಕಾರ ಬಿಜೆಪಿ ತ್ರಿಪುರಾದಲ್ಲಿ 36 ರಿಂದ 45 ಸ್ಥಾನಗಳನ್ನು ಗೆಲ್ಲಲಿದೆ. ಝೀ ನ್ಯೂಸ್-ಮ್ಯಾಟ್ರಿಜ್ ಬಿಜೆಪಿಯು 29-36 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ.ಎಡರಂಗ 13-21 ಸ್ಥಾನಗಳು ಗಳಿಸಲಿದೆ.

ನಾಗಾಲ್ಯಾಂಡ್‌ನ 60 ಸ್ಥಾನಗಳಲ್ಲಿ ಬಿಜೆಪಿ-ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) ಮೈತ್ರಿಕೂಟವು 35-43 ಸ್ಥಾನಗಳನ್ನು ಗೆಲ್ಲುತ್ತದೆ ಎಂದು Zee News-Matrize ಭವಿಷ್ಯ ನುಡಿದಿದೆ.

ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಅವರ NPP 21-26 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು Zee News-Matrize ಭವಿಷ್ಯ ನುಡಿದಿದೆ. 2018ರಲ್ಲಿ ರಾಜ್ಯದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 6-11 ಸ್ಥಾನಗಳನ್ನು ಪಡೆಯಲಿದ್ದು ಹೊಸದಾಗಿ ಕಣಕ್ಕಿಳಿದ ತೃಣಮೂಲ ಕಾಂಗ್ರೆಸ್ 8-13 ಸ್ಥಾನಗಳೊಂದಿಗೆ ತನ್ನ ಖಾತೆ ತೆರೆಯಲಿದೆ.

ಮೂರೂ ರಾಜ್ಯಗಳ ಮತ ಎಣಿಕೆ ಗುರುವಾರ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Mon, 27 February 23