Karnataka Assembly Election: 18-19 ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಏರಿಕೆ: ಶೇ 36ರಷ್ಟು ಹೊಸ ನೊಂದಣಿ

|

Updated on: Apr 03, 2023 | 3:36 PM

ಪ್ರತಿ ಚುನಾವಣೆಯಲ್ಲೂ ಯುವ ಮತದಾರರಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪ್ರತಿ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಚುನಾವಣಾ ಆಯೋಗ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಮತಪಟ್ಟಿಗೆ ಸೇರ್ಪಡೆಯಾಗಲು ಹುರಿದುಂಬಿಸುತ್ತದೆ. ಹೀಗಾಗಿ ಈ ಬಾರಿ ಯುವಕರು ಮತದಾನ ಪ್ರಕ್ರಿಯೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಇಲ್ಲಿದೆ ಅಂಕಿ ಅಂಶ

Karnataka Assembly Election: 18-19 ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಏರಿಕೆ: ಶೇ 36ರಷ್ಟು ಹೊಸ ನೊಂದಣಿ
ಯುವ ಮತದಾರರು
Follow us on

ಪ್ರತಿ ಚುನಾವಣೆಯಲ್ಲೂ (Karnataka Assembly Election) ಯುವ ಮತದಾರರಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪ್ರತಿ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತದಾನದಲ್ಲಿ (Young Voters) ಪಾಲ್ಗೊಳ್ಳಬೇಕೆಂದು ಚುನಾವಣಾ ಆಯೋಗ (Election Commission) ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಮತಪಟ್ಟಿಗೆ ಸೇರ್ಪಡೆಯಾಗಲು ಹುರಿದುಂಬಿಸುತ್ತದೆ. ಇದರ ಪರಿಣಾಮವಾಗಿ ಈ ಬಾರಿ ರಾಜ್ಯದಲ್ಲಿ 18 ರಿಂದ 19 ವರ್ಷ ವಯಸ್ಸಿನ ಶೇ 36 ರಷ್ಟು ಯುವಕರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ನೇತೃತ್ವದ ಬೇಸ್‌ಲೈನ್ ಅಧ್ಯಯನವು ತಿಳಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ.

ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ISEC) ಮುಖ್ಯಸ್ಥ ಎಸ್ ಮಾದೇಶ್ವರನ್ ನೇತೃತ್ವದ ಅಧ್ಯಯನವು ರಾಜ್ಯದ 23 ಜಿಲ್ಲೆಗಳಲ್ಲಿನ 45 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ಕೈಗೊಂಡಾಗ ಹೆಚ್ಚಿನ ಮತದಾದರರು ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಹೇಳಿದರು. ಮತ್ತು ಅವರಲ್ಲಿ ಸುಮಾರು ಶೇ 94 ರಷ್ಟು ಜನರು 2018 ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಇನ್ನು ಕೆಲವರು ಶೇ 64.7 ರಷ್ಟು ಜನರು ಚುನಾವಣಾ ಗುರುತಿನ ಚೀಟಿ ಹೊಂದಿಲ್ಲ ಮತ್ತು ಇನ್ನಿತರೆ ಕಾರಣಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶೇ. 49 ರಷ್ಟು ಯುವ ಮತದಾರರ ಸಂಖ್ಯೆ ಹೆಚ್ಚಳ

ಯುವಕರು “ಮತದಾನಕ್ಕೆ ಕಡಿಮೆ ಪ್ರಾಮುಖ್ಯತೆಯನ್ನು ನೀಡುತ್ತಾರೆ” ಎಂದು ಅಧ್ಯಯನ ಹೇಳಿದೆ. ಕಳೆದ ಚುನಾವಣೆಯಲ್ಲಿ ಬೆಳಗಾವಿ, ಬೆಂಗಳೂರು, ಕಲಬುರಗಿ ಮತ್ತು ಮೈಸೂರಿನಲ್ಲಿ ಮತದಾದರ ಸಂಖ್ಯೆಯನ್ನು ಶೇಕಡಾವಾರು ಪ್ರಕಾರ ನೋಡುವುದಾರೆ ಶೇ 70.1 ರಷ್ಟು, ಶೇ 73.5 ರಷ್ಟು, ಶೇ 69 ರಷ್ಟು ಮತ್ತು ಶೇ 71.7 ರಷ್ಟು ರಷ್ಟಿತ್ತು. ಈ ನಾಲ್ಕು ಜಿಲ್ಲೆಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಶೇ 53 ರಿಂದ 63.6 ರಷ್ಟಿತ್ತು.

ಅರ್ಹ ಮತದಾರರು ಹೊರಗುಳಿದಿದ್ದಾರೆ

2023 ರಲ್ಲಿ ರಾಜ್ಯದ ಜನಸಂಖ್ಯೆಯು ಸುಮಾರು 6.8 ಕೋಟಿ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಆದರೆ ಅಂತಿಮ ಮತದಾರರ ಪಟ್ಟಿಗೆ ಅರ್ಹ ಮತದಾರರನ್ನು ಇನ್ನೂ ಸೇರ್ಪಡೆಯಾಗಿಲ್ಲ. ಆದರೆ 2008ರ ವಿಧಾನಸಭೆ ಚುನಾವಣೆಯಲ್ಲಿ ಆದ ಮತದಾನಕ್ಕೆ ಹೋಲಿಸುವುದಾದರೆ ಸ್ಪಲ್ಪ ಮಟ್ಟಿಗೆ ಏರಿಕೆಯಾಗಿದೆ.

ಆದರೆ 2018 ರ ಚುನಾವಣೆಯಲ್ಲಿ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮತದಾನ ಮಾಡಿದ ಮಹಿಳೆಯರ ಸಂಖ್ಯೆ ಕಡಿಮೆ ಇದೆ. 2018ರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಹೊರತುಪಡಿಸಿದರೆ ಮತ ಚಲಾಯಿಸುವ ಮಹಿಳೆಯರ ಸಂಖ್ಯೆ ಪುರುಷ ಪುರುಷನಿಗಿಂತ ಕಡಿಮೆ ಎಂದು ವಿಶ್ಲೇಷಿಸಲಾಗಿದೆ.

ಹಾವೇರಿ ಕೊನೆಯ ಸ್ಥಾನದಲ್ಲಿದ್ದು, ಪ್ರತಿ 1,000 ಪುರುಷರಿಗೆ 898 ಮಹಿಳೆಯರು ಮಾತ್ರ ಮತದಾನ ಮಾಡಿದ್ದಾರೆ. ಅದರ ನಂತರ ಧಾರವಾಡ (901), ಬೀದರ್ (918), ವಿಜಯಪುರ (918) ಮತ್ತು ಕಲಬುರಗಿ (935). ಪ್ರತಿ 1,000 ಪುರುಷ ಮತದಾರರಿಗೆ ಕೇವಲ 950 ಮಹಿಳಾ ಮತದಾರರನ್ನು ಹೊಂದಿರುವ ಬೆಂಗಳೂರು ನಗರ, ಬೀದರ್, ವಿಜಯಪುರ ಮತ್ತು ಹಾವೇರಿಯಲ್ಲಿ ನೋಂದಾಯಿತ ಮತದಾರರಲ್ಲಿ ಲಿಂಗ ಅಂತರವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Mon, 3 April 23