ಕರ್ನಾಟಕ ಚುನಾವಣೆ: ಶೇ. 99 ರಷ್ಟು ಕಾಂಗ್ರೆಸ್ ಶಾಸಕರು ಕೋಟ್ಯಾಧಿಪತಿಗಳು! ಬಿಜೆಪಿಯಲ್ಲಿ ಎಷ್ಟು?

|

Updated on: May 15, 2023 | 10:32 PM

ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಗೆದ್ದ ಕಾಂಗ್ರೆಸ್ ಶಾಸಕರ ಪೈಕಿ ಶೇ 99ರಷ್ಟು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಹಾಗಿದ್ದರೆ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳಲ್ಲಿ ಎಷ್ಟು ಮಂದಿ ಇದ್ದಾರೆ? ಇಲ್ಲಿದೆ ಮಾಹಿತಿ

ಕರ್ನಾಟಕ ಚುನಾವಣೆ: ಶೇ. 99 ರಷ್ಟು ಕಾಂಗ್ರೆಸ್ ಶಾಸಕರು ಕೋಟ್ಯಾಧಿಪತಿಗಳು! ಬಿಜೆಪಿಯಲ್ಲಿ ಎಷ್ಟು?
ಕಾಂಗ್ರೆಸ್​ನ ಶೇ 99ರಷ್ಟು ಶಾಸಕರು ಕೋಟ್ಯಾಧಿಪತಿಗಳು
Follow us on

Karnataka Assembly Election Results 2023: ಕರ್ನಾಟಕ ವಿಧಾನಸಭೆ ಚುನಾವಣೆ 2023 ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ (Congress) ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದೆ. ಚುನಾವಣೆಯಲ್ಲಿ 135 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡರೆ, 65 ಸ್ಥಾನಗಳನ್ನು ಬಿಜೆಪಿ, ಜೆಡಿಎಸ್ 19 ಸ್ಥಾನಗಳನ್ನು ಪಡೆದುಕೊಂಡರೆ ಉಳಿದ ಸ್ಥಾನಗಳನ್ನು ಪಕ್ಷೇತರ ಅಭ್ಯರ್ಥಿಗಳು ಹಾಗೂ ಇತರೆ ಪಕ್ಷಗಳು ಪಡೆದುಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್​ನಲ್ಲಿ ಗೆದ್ದ ಶಾಸಕರ ಪೈಕಿ ಶೇ 99ರಷ್ಟು ಶಾಸಕರು ಕೋಟ್ಯಾಧಿಪತಿಗಳು (Crorepatis) ಎಂದು ತಿಳಿದುಬಂದಿದೆ. ಹಾಗಿದ್ದರೆ ಬಿಜೆಪಿ (BJP) ಸೇರಿದಂತೆ ಇತರರ ಕಥೆ ಏನು? ಇಲ್ಲಿದೆ ಮಾಹಿತಿ.

ಕರ್ನಾಟಕ ಚುನಾವಣೆಯಲ್ಲಿ ಗೆದ್ದ ಶಾಸಕರ ಹಿನ್ನೆಲೆಯನ್ನು ವಿಶ್ಲೇಷಣೆ ನಡೆಸಿದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ವಿಶ್ಲೇಷನೆ ಪ್ರಕಾರ, ಕಾಂಗ್ರೆಸ್ ಪಕ್ಷದ ಶೇಕಡಾ 99ರಷ್ಟು ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಶೇ. 96ರಷ್ಟು ಬಿಜೆಪಿ ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಸರ್ವೋದ ಕರ್ನಾಟಕ ಪಕ್ಷ ಹಾಗೂ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಎಲ್ಲಾ ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ.

ಹಾಗಿದ್ದರೆ ಗೆದ್ದ ಶಾಸಕ ಅಪರಾಧ ಹಿನ್ನೆಲೆ ಹೇಗಿದೆ?

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿಶ್ಲೇಷಣೆ ಪ್ರಕಾರ, ಕಾಂಗ್ರೆಸ್​ ಪಕ್ಷದಿಂದ ಗೆದ್ದ ಶೇ 58ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣವನ್ನು ಹೊಂದಿದ್ದು, ಶೇ 30ರಷ್ಟು ಮಂದಿ ಗಂಭೀರ ಅಪರಾಧ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅದೇ ರೀತಿ ಬಿಜೆಪಿಯಲ್ಲಿ ಶೇ 52ರಷ್ಟು ಶಾಸಕರು ಅಪರಾಧ ಪ್ರಕರಣವನ್ನು ಎದುರಿಸುತ್ತಿದ್ದು, ಶೇ 35ರಷ್ಟು ಮಂದಿ ಗಂಭೀರ ಅಪರಾಧ ಪ್ರಕರಣವನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಬೆಂಬಲಿಗರ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಪಾಕ್ ಪರ ಬರಹ: ವೀರೇಶ ಪರಯ್ಯ ಅರೆಸ್ಟ್

ಇನ್ನು, ಜೆಡಿಎಸ್ ಪಕ್ಷದಲ್ಲಿ ಶೇ 47ರಷ್ಟು ಶಾಸಕರು ಅಪರಾಧ ಪ್ರಕರಣ ಎದುರಿಸುತ್ತಿದ್ದು, ಶೇ 37ರಷ್ಟು ಶಾಸಕರು ಗಂಭೀರ ಅಪರಾಧ ಪ್ರಕಣ ಎದುರಿಸುತ್ತಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಎಲ್ಲಾ ಶಾಸಕರು ಅಪರಾಧ ಹಾಗೂ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಒಟ್ಟಾರೆಯಾಗಿ ನೋಡುವುದಾದರೆ, ಪ್ರಸಕ್ತ ಚುನಾವಣೆಯಲ್ಲಿ 122 (ಶೇ 55) ಶಾಸಕರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದು, 71 (ಶೇ 32) ಶಾಸಕರು ಗಂಭೀರ ಅಪರಾಧ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅದೇ ರೀತಿ, 224 ಶಾಸಕರ ಪೈಕಿ 217 (ಶೇ 97) ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಗೆದ್ದ ಎಲ್ಲಾ ಶಾಸಕರ ಒಟ್ಟು ಆಸ್ತಿ 64.39 ಕೋಟಿಯಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ