ಕಾಂಗ್ರೆಸ್​ ಬೆಂಬಲಿಗರ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಪಾಕ್ ಪರ ಬರಹ: ವೀರೇಶ ಪರಯ್ಯ ಅರೆಸ್ಟ್

ಯುವಕನೊಬ್ಬ ವಾಟ್ಸಾಪ್ ನಲ್ಲಿ ಪಾಕಿಸ್ತಾನದ ಪರ ಬರಹ ಬರೆದ ಕಾರಣ ಜೈಲು ಸೇರಿದ ಘಟನೆ ವಿಜಯಪುರ ಜಿಲ್ಲೆ‌ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆದಿದೆ.

ಕಾಂಗ್ರೆಸ್​ ಬೆಂಬಲಿಗರ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಪಾಕ್ ಪರ ಬರಹ: ವೀರೇಶ ಪರಯ್ಯ ಅರೆಸ್ಟ್
ವಾಟ್ಸ್​ಆ್ಯಪ್​ನಲ್ಲಿ ಪಾಕ್ ಪರ ಬರಹ ಬರೆದು ಬಂಧಿತನಾದ ವೀರೇಶ ಪರಯ್ಯ
Follow us
Rakesh Nayak Manchi
|

Updated on:May 15, 2023 | 9:26 PM

ವಿಜಯಪುರ: ಯುವಕನೊಬ್ಬ ವಾಟ್ಸಾಪ್ ನಲ್ಲಿ ಪಾಕಿಸ್ತಾನದ ಪರ ಬರಹ (Pro-Pakistan post) ಬರೆದ ಕಾರಣ ಜೈಲು ಸೇರಿದ ಘಟನೆ ಜಿಲ್ಲೆಯ‌ ಮುದ್ದೇಬಿಹಾಳ (Muddebihal) ತಾಲೂಕಿನ ನಾಲತವಾಡದಲ್ಲಿ ನಡೆದಿದೆ. ನಾಲತವಾಡ ಪಟ್ಟಣದ ಕಾನಬಾವಿ ಓಣಿಯ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ (31) ಬಂಧಿತ ವ್ಯಕ್ತಿ. ಸದ್ಯ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೋರ್ಟ್ ಆದೇಶದಂತೆ ವೀರೇಶನನ್ನು ವಿಜಯಪುರ ನಗರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿರಿಸಿ ವಿಚಾರಣೆ ಆರಂಭಿಸಲಾಗಿದೆ.

ಮುದ್ದೇಬಿಹಾಳ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಅಪ್ಪಾಜಿ ನಾಡಗೌಡ ಹೆಸರಿನ ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಈ ಯುವಕ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಬರಹವನ್ನು ಪೋಸ್ಟ್ ಮತ್ತು ಶೇರ್ ಮಾಡಿದ್ದ. ಇದನ್ನು ನೋಡಿದ ಆ ಗ್ರೂಪ್​ನಲ್ಲಿನ ಸದಸ್ಯರು ಯುವಕನನ್ನು ನಾಲತವಾಡ ಪಟ್ಟಣದಲ್ಲಿರುವ ಪೊಲೀಸ್ ಔಟ್ಪೋಸ್ಟ್ ಗೆ ಕರೆತಂದು ಪೊಲೀಸರು ವಶಕ್ಕೆ ಒಪ್ಪಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಇದನ್ನೂ ಓದಿ: ಯಾದಗಿರಿ: ಜಗಳ ಬಿಡಿಸಲು ಹೋಗಿ ಕೊಲೆಯಾದ ಬಡಪಾಯಿ

ಈ ಕುರಿತು ವಿಚಾರಣೆ ನಡೆಸಿದ ಪೊಲೀಸರು ವೀರೇಶ ಪರಯ್ಯ ಕರ್ಪೂರಮಠ ತಪ್ಪು ಮಾಡಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಅವನನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದ್ದರು. ಸದ್ಯ ಆರೋಪಿಯ ವಿರುದ್ಧ ಐಪಿಸಿ ಕಲಂ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಕೇವಲ ಪ್ರಚೋದನೆ ನೀಡುವುದು), 153 (ಎ) (ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿ ಸೌಹಾರ್ದತೆ ಕದಡಲು ಯತ್ನಿಸುವುದು) ಮತ್ತು 153 (ಬಿ) (ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತ ಆರೋಪ, ಸಮರ್ಥನೆ) ಅಡಿ ಪ್ರಕರಣ ದಾಖಲಿಸಲಾಗಿದೆ.

ಕ್ರೈಂ ನ್ಯೂಸ್ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:24 pm, Mon, 15 May 23