AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಪಾಕಿಸ್ತಾನ ಪರ ಘೋಷಣೆ: ಸ್ವಯಂಪ್ರೇರಿತ ದೂರು ದಾಖಲು

ಮೇ 13 ಮತ ಎಣಿಕೆ ದಿನದಂದು ಬೆಳಗಾವಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಳಕವಾಡಿ ಪೊಲೀಸ್ ಠಾಣೆ ಸಿಪಿಐ ದಯಾನಂದ ಶೇಗುಣಸಿ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಪಾಕಿಸ್ತಾನ ಪರ ಘೋಷಣೆ: ಸ್ವಯಂಪ್ರೇರಿತ ದೂರು ದಾಖಲು
ಪಾಕಿಸ್ತಾನ ಪರ ಘೋಷಣೆ ಕೂಗಿದ ಕಿಡಿಗೇಡಿಗಳು
ವಿವೇಕ ಬಿರಾದಾರ
|

Updated on: May 15, 2023 | 10:07 AM

Share

ಬೆಳಗಾವಿ: ಮೇ 13 ಮತ ಎಣಿಕೆ ದಿನದಂದು ಬೆಳಗಾವಿಯಲ್ಲಿ (Belagavi) ಪಾಕಿಸ್ತಾನ ಪರ ಘೋಷಣೆ (Pakistan slogan) ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಳಕವಾಡಿ ಪೊಲೀಸ್ ಠಾಣೆ (Tilakavadi Police Station) ಸಿಪಿಐ ದಯಾನಂದ ಶೇಗುಣಸಿ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಡಿ ಐಪಿಸಿ ಕಲಂ 153, 153(ಬಿ)ರಡಿ ಪ್ರಕರಣ ದಾಖಲಾಗಿದ್ದು, “ಕಾಂಗ್ರೆಸ್ (Congress) ಪಕ್ಷದ ಸುಮಾರು ಮುಸ್ಲಿಂ ಬೆಂಬಲಿಗರು ಘೋಷಣೆ” ಕೂಗಿದ್ದಾರೆಂದು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಕಾಂಗ್ರೆಸ್‌ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕ್​ ಪರ ಘೋಷಣೆ

ಶನಿವಾರ (ಮೇ.13) ರಂದು ನಗರದ ರಾಣಿ ಪಾರ್ವತಿದೇವಿ ಕಾಲೇಜಿನ ಮತ ಎಣಿಕೆ ಕೇಂದ್ರದ ಹೊರಗೆ ಮಧ್ಯಾಹ್ನ 2.30ರ ಸುಮಾರಿಗೆ ಆಸೀಫ್ ಸೇ‌ಠ್​​ ಗೆಲುವು ಖಾತ್ರಿ ಆಗುತ್ತಿದ್ದಂತೆಯೇ ಅಪಾರ ಸಂಖ್ಯೆಯ ಯುವಕರು ಸುತ್ತ ಸೇರಿದ್ದರು. ಬಣ್ಣಗಳನ್ನು ಎರಚಿ, ಸಂಗೀತ ಹಾಕಿಕೊಂಡು ಕುಣಿದಿದ್ದರು. ಈ ವೇಳೆ ಕಾಂಗ್ರೆಸ್‌ ಧ್ವಜ ಹಿಡಿದು ಬಂದ ಕೆಲವರು ಜಿಂದಾಬಾದ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಎಂದು ಮೂರು ಬಾರಿ ಘೋಷಣೆ ಮೊಳಗಿಸಿದ್ದರು. ಹತ್ತಿರದಲ್ಲೇ ಇದ್ದ ಕೆಲವು ಪೊಲೀಸರು ಯುವಕರ ಬಳಿ ಹೋಗಿ ತಾಕೀತು ಮಾಡಿದ್ದರು. ಈ ರೀತಿ ಬೇರೆ ಮಾತು ತೆಗೆದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಬಹುಮತ; ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಮುಸ್ಲಿಂ ಯುವಕರು

ವೈರಲ್ ಆದ ವಿಡಿಯೋ ಫೇಕ್ ಎಂದಿದ್ದ ಕಾಂಗ್ರೆಸ್‌ ಶಾಸಕ ಆಸಿಫ್ ಸೇಠ್

ಈ ಬಗ್ಗೆ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಆಸಿಫ್ ಸೇಠ್ ನಿನ್ನೆ (ಮೇ.14) ರಂದು ಬೆಳಗಾವಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ “ಆ ವಿಡಿಯೋ ಫೇಕ್, ಬಿಜೆಪಿಯ ಕೆಲವರು ಇಂತಹ ಕೆಲಸ ಮಾಡ್ತಿದ್ದಾರೆ. ಚುನಾವಣೆ ಸಂದರ್ಭದಲ್ಲೂ ಬಿಜೆಪಿಯವರು ಇದನ್ನೇ ಮಾಡಿದ್ರು, ಈ ವಿಷಯ ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಚರ್ಚಿಸುವೆ. ಮಾನನಷ್ಟ ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ