Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನು ವಿವಾದದಿಂದ ಕಚೇರಿ ಕೋರ್ಟ್ ಸುತ್ತಾಡಿ ಬೇಸತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವ 60ರ ವೃದ್ದೆ!

ಜಮೀನು ವಿವಾದ ವಿಚಾರದಲ್ಲಿ ಕೋರ್ಟ್, ಕಚೇರಿ ಅಂತ ಅಲೆದಾಡಿ ಬೇಸತ್ತ 60 ವರ್ಷದ ವೃದ್ಧೆಯೊಬ್ಬರು ಇಂತಹ ಸಮಸ್ಯೆ ಎದುರಿಸುತ್ತಿರುವವರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ವರದಿ ಇಲ್ಲಿದೆ.

ಜಮೀನು ವಿವಾದದಿಂದ ಕಚೇರಿ ಕೋರ್ಟ್ ಸುತ್ತಾಡಿ ಬೇಸತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವ 60ರ ವೃದ್ದೆ!
ಚುನಾವಣೆಗೆ ಸ್ಪರ್ಧಿಸುತ್ತಿರುವ 60 ವರ್ಷದ ವೃದ್ಧೆ ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದ್ದಾರೆ
Follow us
Rakesh Nayak Manchi
|

Updated on:Apr 18, 2023 | 7:26 PM

ಕೋಲಾರ: ಹಣವಂತರು ಅಧಿಕಾರಕ್ಕಾಗಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಚುನಾವಣೆಯಲ್ಲಿ (Karnataka Assembly Elections 2023) ಸ್ಪರ್ಧೆ ಮಾಡಲು ಬಯಸುತ್ತಾರೆ ಅನ್ನೋದು ಸದ್ಯದ ಪರಿಸ್ಥಿತಿಯಲ್ಲಿ ನಾವು ಕೇಳಿ ಬರುತ್ತಿರುವ ವಿಷಯ. ಆದರೆ ಕೋಲಾರದಲ್ಲಿ (Kolar) ವೃದ್ಧೆಯೊಬ್ಬರು ತನ್ನ 60ನೇ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಅವರು ತಾನು ಚುನಾವಣೆಗೆ ಸ್ಪರ್ಧೆ ಮಾಡಲು ನೀಡಿರುವ ಕಾರಣ ನಿಜಕ್ಕೂ ವಿಭಿನ್ನ ಹಾಗೂ ವಿಶೇಷವಾಗಿದೆ. ಅಷ್ಟಕ್ಕೂ ಚುನಾವಣೆಗೆ ಸ್ಪರ್ಧೆ ಮಾಡುವ ದೈರ್ಯ ಮಾಡಿರುವ ಆ ವೃದ್ಧೆ ಯಾರು? ಆ ವೃದ್ಧೆ ನೀಡಿರುವ ನಿಜವಾದ ಕಾರಣವಾದರೂ ಏನು? ಇಲ್ಲಿದೆ ಡೀಟೇಲ್ಸ್​.

ಏಪ್ರಿಲ್​-20ರ ವರೆಗೆ 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ, ಸಾಕಷ್ಟು ಜನ ಅಭ್ಯರ್ಥಿಗಳು ಬಂದು ತಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಕೆಲವು ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳಿಂದ ನಾಮಪತ್ರ ಸಲ್ಲಿಸಿದರೆ, ಕೆಲವರು ಪ್ರಾದೇಶಿಕ ಪಕ್ಷಗಳಿಂದ ನಾಮಪತ್ರ ಸಲ್ಲಿಸುತ್ತಿದ್ದಾರೆ. ಅವರ ಶಕ್ತಿಗೆ ತಕ್ಕಂತೆ ಕೆಲವರು ನಾಮಪತ್ರ ಸಲ್ಲಿಸಲು ಬರುವಾಗ ತಮ್ಮ ಶಕ್ತಿ ಪ್ರದರ್ಶನ ಮಾಡಲು ಸಾವಿರಾರು ಜನರನ್ನು ಸೇರಿಸಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇಷ್ಟೆಲ್ಲಾ ಅಬ್ಬರಗಳ ನಡುವೆಯೂ ಅದೊಂದು ನಾಮಪತ್ರ ಮಾತ್ರ ಬಹಳ ವಿಭಿನ್ನವಾಗಿ ಎಲ್ಲರ ಗಮನ ಸೆಳೆಯಿತು.

ಹೌದು, ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಲೂರು ತಾಲ್ಲೂಕು ನಂಬಿಗಾನಹಳ್ಳಿ ಗ್ರಾಮದ 60 ವರ್ಷದ ನಾರಾಯಣಮ್ಮ ಎಂಬುವರ ಮಾಲೂರು ತಾಲ್ಲೂಕು ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದಿದ್ದರು. ನಂಬಿಗಾನಹಳ್ಳಿ ಗ್ರಾಮದ ಚಿಕ್ಕಮರಿಯಪ್ಪ ಎಂಬುವರ ಪತ್ನಿ ನಾರಾಯಣಮ್ಮ ನಾಮಪತ್ರ ಸಲ್ಲಿಸಲು ವಿಭಿನ್ನವಾಗಿ ತಮಟೆ ವಾದ್ಯಗಳ ಮೂಲಕ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಬಂದಿದ್ದರು. ನಾರಾಯಣಮ್ಮ ಅವರನ್ನು ನೋಡಿದ ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದರು. 60 ವರ್ಷದ ವಯಸ್ಸಿನಲ್ಲಿ ಇವರಿಗೇನು ಶೋಕಿ ಎಂದು ಕೆಲವು ನಕ್ಕರೆ, ಕೆಲವರು ಆಕೆಯ ಉತ್ಸಾಹವನ್ನು ಕಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆದರೆ ಆಕೆ ಈ ವಯಸ್ಸಿನಲ್ಲಿ ಇಂಥಾದೊಂದು ನಿರ್ಧಾರ ಮಾಡಲು ಬಲವಾದ ಕಾರಣವೊಂದಿತ್ತು.

ಇದನ್ನೂ ಓದಿ: ರಾಹುಲ್ ಗಾಂಧಿ ಭಾಷಣ ಮಾಡಿದ ಕಡೆ ಕಾಂಗ್ರೆಸ್ ಗೆದ್ದಿಲ್ಲ: ಹೀಗಾಗಿ ಕೋಲಾರದಲ್ಲಿ ಗೆಲ್ಲುತ್ತೇನೆಂದ ವರ್ತೂರ್ ಪ್ರಕಾಶ್

ನಾರಾಯಣಮ್ಮ ಅವರು ತಮ್ಮ 60ನೇ ವಯಸ್ಸಿನಲ್ಲಿ ಮಕ್ಕಳು ಮೊಮ್ಮಕ್ಕಳನ್ನು ಆಡಿಸಿಕೊಂಡು ಖುಷಿಯಾಗಿ ಮನೆಯಲ್ಲಿರಬಹುದಿತ್ತು. ಆದರೆ ಆಕೆ ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಹಟಕ್ಕೆ ಬಿದ್ದು ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿಗೆ ಬಂದಿದ್ದರು. ಅಷ್ಟಕ್ಕೂ ನಾರಾಯಣಮ್ಮ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಕಾರಣವಾದರೂ ಏನು ಅನ್ನೋದನ್ನ ನೋಡುವುದಾದರೆ, ಅವರ ಜಮೀನು ವಿವಾದ. ಅಧಿಕಾರಿಗಳು ಹಾಗೂ ಕೆಲವು ಸಂಬಂಧಿಕರಿಂದ ಅವರ ಜಮೀನು ವಿವಾದಕ್ಕೆ ಬಿದ್ದಿದೆ. ವಿವಾದ ಬಗೆಹರಿಸಿಕೊಳ್ಳಲು 2004 ರಿಂದ ಅಂದರೆ ಸತತವಾಗಿ 19 ವರ್ಷಗಳಿಂದ ಕೋರ್ಟ್ ಕಚೇರಿ ಅಂತ ಸುತ್ತಾಡಿದ್ದಾರೆ. ಆದರೆ ವಿವಾದ ಮಾತ್ರ ಬಗೆಹರಿದಿಲ್ಲ.

ಇದರಿಂದ ರೋಸಿಹೋಗಿರುವ ನಾರಾಯಣಮ್ಮ ತಾನು ಚುನಾವಣೆಗೆ ನಿಂತು ಗೆದ್ದು ಅಧಿಕಾರ ಸಿಕ್ಕರೆ ಆಗ ಅಧಿಕಾರಿಗಳು ನಮ್ಮ ಜಮೀನು ವಿವಾದವನ್ನು ಬಗೆಹರಿಸಿಕೊಡ್ತಾರೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಅಷ್ಟೇ ಅಲ್ಲದೆ ನನ್ನಂತ ಅದೆಷ್ಟೋ ಸಾವಿರಾರು ಜನ ಹೀಗೆ ತಮ್ಮ ಜಮೀನು ವಿವಾದಗಳನ್ನು ಬಗೆಹರಿಸಿಕೊಳ್ಳಲು ನಿತ್ಯ ಅಲೆದಾಡುತ್ತಿದ್ದಾರೆ. ಅಂತಹವರ ಕಷ್ಟಕ್ಕೆ ಸ್ಪಂದಿಸಲು ತಾನು ಚುನಾವಣೆ ಸ್ಪರ್ಧೆ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ನಾರಾಯಣಮ್ಮ ಟಿವಿ9 ಜೊತೆಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಅದೇ ಕಾರಣದಿಂದ ನಾರಾಯಣಮ್ಮ ಅವರು ಕಳೆದೊಂದು ತಿಂಗಳಿಂದ ಚುನಾವಣೆಗೆ ಸ್ಪರ್ಧೆ ಮಾಡುವ ವಿಧಿ ವಿಧಾನಗಳನ್ನು ತಿಳಿದುಕೊಂಡಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಲು ಬೇಕಾದ ದಾಖಲಾತಿಗಳನ್ನು ಕಲೆಹಾಕಿದ್ದಾರೆ. ನಂತರ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ತಾನು ಒಂದಷ್ಟು ಜನರನ್ನು ಸೇರಿಸಿಕೊಂಡು ತಮಟೆ ವಾದ್ಯಗಳೊಂದಿಗೆ, ಅಲಂಕಾರ ಮಾಡಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕವೇ ಮಾಲೂರು ತಾಲ್ಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡುವವರು ಕೇವಲ ಹಣವಂತರಲ್ಲ ಅಧಿಕಾರಿಗಳು ಹಾಗೂ ಇಲ್ಲಿನ ವ್ಯವಸ್ಥೆಯಿಂದ ಕಂಗೆಟ್ಟು ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದವರೂ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿರುವುದು ವಿಶೇಷ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:26 pm, Tue, 18 April 23

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ