ಡಿಕೆ ಶಿವಕುಮಾರ್ ಪರ ಆದಿಚುಂಚನಗಿರಿ ಶಾಖಾಮಠದ ಶ್ರೀಗಳು ಬ್ಯಾಟ್ ಬೀಸಿದ್ರೆ ಸಿದ್ದರಾಮಯ್ಯ ಪರ ನಿಂತ ಕುರುಬ ಸಮುದಾಯದ ಸ್ವಾಮೀಜಿ

|

Updated on: May 15, 2023 | 3:57 PM

ಡಿಕೆ ಶಿವಕುಮಾರ್ ಪರ ನಿಂತಿದ್ದಾರೆ. ಕಾಂಗ್ರೆಸ್ 135 ಸ್ಥಾನ ಪಡೆದಿರುವ ಹಿಂದೆ ಡಿಕೆಶಿ ಶ್ರಮ ಹೆಚ್ಚಿದೆ. ಹೀಗಾಗಿ ಅವರಿಗೆ ಸಿಎಂ ಸ್ಥಾನ ನೀಡಿ ಎಂದು ಆದಿಚುಂಚನಗಿರಿ ಶಾಖಾಮಠದ ಸೋಮನಾಥೇಶ್ವರಶ್ರೀ ಆಗ್ರಹಿಸಿದ್ದಾರೆ.

ಡಿಕೆ ಶಿವಕುಮಾರ್ ಪರ ಆದಿಚುಂಚನಗಿರಿ ಶಾಖಾಮಠದ ಶ್ರೀಗಳು ಬ್ಯಾಟ್ ಬೀಸಿದ್ರೆ ಸಿದ್ದರಾಮಯ್ಯ ಪರ ನಿಂತ ಕುರುಬ ಸಮುದಾಯದ ಸ್ವಾಮೀಜಿ
ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​
Follow us on

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 13ರಂದು(Karnataka Assembly Elections 2023 Result) ಹೊರ ಬಿದ್ದಿದ್ದು ಬಹುಮತದಿಂದ ಕಾಂಗ್ರೆಸ್ ಗೆದ್ದುಬೀಗಿದೆ. ಸದ್ಯ ಯಾರ ಹಂಗೂ ಇಲ್ಲದೆ ಸರ್ಕಾರ ರಚನೆಗೆ ಸಜ್ಜಾಗಿರೋ ಕಾಂಗ್ರೆಸ್​ನಲ್ಲಿ ಸಿಎಂ ಸೀಟು ದೊಡ್ಡ ತಲೆನೋವಾಗಿದೆ. ಸಿಎಂ ಸೀಟಿಗಾಗಿ ಭಾರೀ ಪೈಪೋಟಿ ನಡೆಯುತ್ತಿದ್ದು ಸಿದ್ದರಾಮಯ್ಯ(Siddaramaiah) ಹಾಘೂ ಡಿಕೆ ಶಿವಕಮಾರ್(DK Shivakumar) ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಮತ್ತೊಂದೆಡೆ ಸಿದ್ದರಾಮಯ್ಯರಿಗೆ ಕೆಲವರು ಬೆಂಬಲ ಸೂಚಿಸಿದ್ರೆ ಮತ್ತೊಂದಷ್ಟು ಜನ ಡಿಕೆ ಶಿವಕುಮಾರ್ ಪರ ನಿಂತಿದ್ದಾರೆ. ಕಾಂಗ್ರೆಸ್ 135 ಸ್ಥಾನ ಪಡೆದಿರುವ ಹಿಂದೆ ಡಿಕೆಶಿ ಶ್ರಮ ಹೆಚ್ಚಿದೆ. ಹೀಗಾಗಿ ಅವರಿಗೆ ಸಿಎಂ ಸ್ಥಾನ ನೀಡಿ ಎಂದು ಆದಿಚುಂಚನಗಿರಿ ಶಾಖಾಮಠದ ಸೋಮನಾಥೇಶ್ವರಶ್ರೀ ಆಗ್ರಹಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​​ಗೆ ಸಿಎಂ ಸ್ಥಾನ ನೀಡಬೇಕು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ನಂತರ ಪಕ್ಷವನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ 135 ಸ್ಥಾನ ಪಡೆದಿರುವ ಹಿಂದೆ ಡಿಕೆಶಿ ಶ್ರಮ ಹೆಚ್ಚಿದೆ ಎಂದು ಮೈಸೂರಿನಲ್ಲಿ ಆದಿಚುಂಚನಗಿರಿ ಶಾಖಾಮಠದ ಸೋಮನಾಥೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಸಮಾಜಕ್ಕೆ ಒಳ್ಳೆಯ ಹೆಸರು ತರಲು ಡಿಕೆಶಿ ಶ್ರಮ ವಹಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿ ಘಟಾನುಘಟಿ ನಾಯಕರು ಸಿಎಂ ರೇಸ್‌ನಲ್ಲಿ‌ ಇದ್ದಾರೆ. ಅವರಿಗೆಲ್ಲ ಆಸೆ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷರು ಸಿಎಂ ಆಗುವುದು ಮೊದಲಿಂದ ನಡೆದುಕೊಂಡು ಬಂದಿದೆ. ಡಿಕೆಶಿ ಶ್ರಮ ಪರಿಗಣಿಸಿ. ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ಶ್ರಮ ವಹಿಸಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಒಕ್ಕಲಿಗ ಸಮಾಜ ಡಿಕೆಶಿಯವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯ ಮಾಡುತ್ತಿದೆ. ಇದನ್ನ ಗಮನದಲ್ಲಿ ಇಟ್ಟುಕೊಂಡು ಪಕ್ಷ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದರು.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ಕಾಂಗ್ರೆಸ್​ನ ​ಹಿಂಸಾ ಸ್ಕೀಮ್ ಸಹಿಸಲ್ಲ ಎಂದ ನಳಿನ್ ಕುಮಾರ್ ಕಟೀಲ್

ಸಿದ್ದರಾಮಯ್ಯ ಪರ ನಿಂತ ಕುರುಬ ಸಮುದಾಯದ ಸ್ವಾಮೀಜಿ

ಪರೋಕ್ಷವಾಗಿ ಡಿಕೆಶಿ ಸಿಎಂ ಹಾದಿ ವಿರುದ್ಧ ಕುರುಬ ಸಮುದಾಯದ ಶ್ರೀಗಳಾದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಕಿಡಿಕಾರಿದ್ದಾರೆ. ಕೆಲ ಮಠಾಧೀಶರು ತಮ್ಮ ಜಾತಿಯವರು ಸಿಎಂ ಆಗಲೆಂದು ಒತ್ತಡ ತರುತ್ತಾರೆ. ಇದು ಧಾರ್ಮಿಕ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕಮಯವಾದದ್ದು ರಾಜ್ಯದ ಜನರು ತೀವ್ರ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಭ್ರಷ್ಟ ಹಾಗೂ ಕೋಮುವಾದ ಸರ್ಕಾರವನ್ನು ಜನ ತಿರಸ್ಕರಿಸಿದ್ದಾರೆ. ಬಹುಮತದ ಸರ್ಕಾರ ರಚನೆಗೆ ಜನರು ಅವಕಾಶ ನೀಡಿದ್ದಾರೆ. ರಾಜ್ಯದ ಘನತೆ ಮೇಲೆತ್ತುವಂತಹ ವ್ಯಕ್ತಿ ಮುಖ್ಯಮಂತ್ರಿ ಆಗಬೇಕು. ಕಳಂಕ ಹೊತ್ತಿರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವುದು ಬೇಡ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಕುರುಬ ಸ್ವಾಮೀಜಿ ಗುಡುಗಿದ್ದಾರೆ. ಇನ್ನು ರಾಜೀನಾಮೆ ನೀಡುವ ಸ್ಥಿತಿ ಇರುವವರು ಸಿಎಂ ಆಗುವುದು ಬೇಡ. ಇದು ರಾಜ್ಯದ ಜನರ ಭಾವನೆ. ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಈ ವಿಚಾರ ಗಮನದಲ್ಲಿ ಇರಲಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಸಿದ್ದರಾಮಾನಂದಪುರಿ ಸ್ವಾಮೀಜಿಗಳು ತಿಳಿಸಿದ್ದಾರೆ.

ಇನ್ನು ಮತ್ತೊಂದೆಡೆ ಚಿತ್ರದುರ್ಗದಲ್ಲಿ ಚಲವಾದಿ ಮಠದ ಬಸವ ನಾಗಿದೇವಿ ಶ್ರೀಗಳು ಡಾ.ಜಿ.ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಡಾ.ಜಿ.ಪರಮೇಶ್ವರ್ ಗೆ ಸಿಎಂ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಸಲಹೆ ನೀಡಿದ್ದಾರೆ. ಈವರೆಗೆ ಪರಿಶಿಷ್ಟ ಸಮುದಾಯದವರು ಸಿಎಂ ಆಗಿಲ್ಲ. ಡಾ.ಜಿ.ಪರಮೇಶ್ವರ್ ಒಮ್ಮೆ ಸಿಎಂ ಸ್ಥಾನದಿಂದ ವಂಚಿತರಾಗಿದ್ದಾರೆ. ಡಾ.ಜಿ.ಪರಮೇಶ್ವರ ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿ. ಕಾನೂನು ಸುವ್ಯವಸ್ಥೆ, ದಕ್ಷ ಆಡಳಿತ ನೀಡಬಲ್ಲ ವ್ಯಕ್ತಿತ್ವ ಇದೆ ಎಂದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ