AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್​ ಮನವಿ ಮೇರೆಗೆ ಹೋರಾಟ ಕೈ ಬಿಟ್ಟ ಒಕ್ಕಲಿಗರ ಸಂಘ: ಜಾಥಾ ಮಾಡೇ ಮಾಡುತ್ತೇವೆ ಎಂದ ಅಧ್ಯಕ್ಷ ಉಮಾಪತಿ

ಡಿಕೆ ಶಿವಕುಮಾರ್​ ಸಿಎಂ ಆಗಬೇಕು ಎಂಬ ಉದ್ಧೆಶದಿಂದ ನಾಳೆ ಒಕ್ಕಲಿಗರ ಸಂಘದಿಂದ ಫ್ರೀಡಂ ಪಾರ್ಕ್​ ವರೆಗೂ ಹಮ್ಮಿಕೊಂಡಿದ್ದ ಜಾಥಾವನ್ನು ರದ್ದು ಮಾಡಲಾಗಿದೆ ಎಂದು ಕಿಮ್ಸ್ ಹಾಸ್ಪಿಟಲ್ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷ ಉಮಾಪತಿ ತಿಳಿಸಿದರು.

ಡಿಕೆ ಶಿವಕುಮಾರ್​ ಮನವಿ ಮೇರೆಗೆ ಹೋರಾಟ ಕೈ ಬಿಟ್ಟ ಒಕ್ಕಲಿಗರ ಸಂಘ: ಜಾಥಾ ಮಾಡೇ ಮಾಡುತ್ತೇವೆ ಎಂದ ಅಧ್ಯಕ್ಷ ಉಮಾಪತಿ
ಡಿಕೆ ಶಿವಕುಮಾರ್
ಗಂಗಾಧರ​ ಬ. ಸಾಬೋಜಿ
|

Updated on: May 15, 2023 | 4:54 PM

Share

ಬೆಂಗಳೂರು: ಡಿಕೆ ಶಿವಕುಮಾರ್​ ಸಿಎಂ ಆಗಬೇಕು ಎಂಬ ಉದ್ಧೆಶದಿಂದ ನಾಳೆ ಒಕ್ಕಲಿಗರ ಸಂಘದಿಂದ (Vokkaliga Association) ಫ್ರೀಡಂ ಪಾರ್ಕ್​ ವರೆಗೂ ಹಮ್ಮಿಕೊಂಡಿದ್ದ ಜಾಥಾವನ್ನು ರದ್ದು ಮಾಡಲಾಗಿದೆ ಎಂದು ಕಿಮ್ಸ್ ಹಾಸ್ಪಿಟಲ್ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷ ಉಮಾಪತಿ ತಿಳಿಸಿದರು. ಡಿಕೆ ಶಿವಕುಮಾರ್​​ ಅವರು ಈ ರೀತಿ ಮಾಡಬಾರದು. ಇದು ಪಕ್ಷ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ರಿಕ್ವೆಸ್ಟ್ ಮಾಡಿದ್ದಾರೆ. ನನ್ನ ಗಮನಕ್ಕೆ ಬಾರದೆ ಯಾವುದೇ ಹೋರಾಟ ಮಾಡಬಾರದು. ಪಕ್ಷದಲ್ಲಿ ನಮ್ಮದೇ ಆದಂತಹ ತತ್ವ ಸಿದ್ದಾಂತಗಳು ಇರುತ್ತವೆ. ಅದಕ್ಕೆ ವಿರುದ್ದವಾಗಿ ನಡೆಯೋಕೆ ಸಾಧ್ಯ ಇಲ್ಲ ಅಂತ ಒಕ್ಕಲಿಗರ ಸಂಘಕ್ಕೆ ಡಿಕೆ‌ ಶಿವಕುಮಾರ್​ ಮನವಿ ಮಾಡಿದ್ದಾರೆ ಎಂದರು.

ಹೋರಾಟ ಕೈ ಬಿಟ್ಟ ಒಕ್ಕಲಿಗರ ಸಂಘ 

ಈ ಹಿನ್ನೆಲೆ ಹೋರಾಟ ರೂಪು ರೇಷೆಗಳನ್ನ ಒಕ್ಕಲಿಗರ ಸಂಘ ಕೈ ಬಿಟ್ಟಿದೆ. ಆದರೆ ನಿರ್ಮಾಲಾನಂದ ಹಾಗೂ ನಂಜಾವಧೂತ ಸ್ವಾಮೀಜಿಗಳ ತೀರ್ಮಾನದಂತೆ ಮಾಡುತ್ತೇವೆ. ಜಾಥಾ ಕೈ ಬಿಟ್ಟಿಲ್ಲ, ಆದರೆ ಮುಂದೂಡಿದ್ದೇವೆ ಅಷ್ಟೇ. ಮಾಡಬೇಡಿ ಅಂದ್ರು, ನಾವು ಮಾಡೇ ಮಾಡುತ್ತೇವೆ. ಸ್ವಾಮೀಜಿ ಹೇಳಲಿ ಅಂತ ಕಾಯುತ್ತಿದ್ದೇವೆ. ಅವರು ಹೇಳಿದ ಹಾಗೇ ನಾವು ಜಾಥಾ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಮುಂದುವರಿದ ಸಿಎಂ ಫೈಟ್; ನನ್ನ ಬಳಿ 135 ಶಾಸಕರು ಇದ್ದಾರೆಂದ ಡಿಕೆ ಶಿವಕುಮಾರ್

ಜಾಥಾ ಮಾಡೆ ಮಾಡುತ್ತೇವೆ: ಉಮಾಪತಿ

ಇವತ್ತು ಸಂಜೆ ನಾವು ಸ್ವಾಮಿಜಿಗಳೊಂದಿಗೆ ಚರ್ಚೆ ನಡೆಸಲಿದ್ದೇವೆ. ನಾಳೆ ಸಂಜೆ ಅಥವಾ ನಾಡಿದ್ದು ಜಾಥಾ ನಡೆಸೆ ನಡೆಸುತ್ತೇವೆ. ಸಮಯದ ಬಗ್ಗೆ ತಿಳಿಸುತ್ತೇವೆ ಎಂದರು. ಫ್ರೀಡಂ ಪಾರ್ಕ್ ಬಳಿ ಸಮಾವೇಶ ಮಾಡಲು ಈ ಮುಂಚೆ ತಿರ್ಮಾನಿಸಲಾಗಿತ್ತು. ಜಾಥಾ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಭಾಗಿ ಆಗುತ್ತಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಬಿಜೆಪಿ ಸೋಲಿಗೆ ಕಟೀಲ್, ಬಿಎಲ್​ ಸಂತೋಷ್ ಹೊಣೆಗಾರರಲ್ಲ: ಬಿವೈ ವಿಜಯೇಂದ್ರ

ಸಿದ್ದರಾಮಯ್ಯ ಕೊಡುಗೆ ದೊಡ್ಡದಿದೆ. ಅವಗರಿಗೆ ಅವಕಾಶ ಸಿಕ್ಕಿದೆ ಡಿಕೆ ಶಿವಕುಮಾರ್​ ಅವರಿಗೆ ಸಿಗಲಿ. ನಮ್ಮ ಸಂಘದಿಂದ ಡಿಕೆ ಶಿವಕುಮಾರ್​ ಪರ ಧ್ವನಿ ಎತ್ತುತ್ತೇವೆ. ಇವತ್ತು ಡಿಕೆ ಶಿವಕುಮಾರ್​ ಇಡಿ ಬಲೆಯಲ್ಲಿ ಸಿಲುಕಿದ್ದಾರೆ, ತುಂಬಾ ಕಷ್ಟ ಪಟ್ಟಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ