ಜಗದೀಶ್ ಶೆಟ್ಟರ್​ ಸೋಲಿಸಲು ಚಾಣಕ್ಯನ ರಣತಂತ್ರ: ಪ್ರಮುಖ ಸಭೆಯಲ್ಲಿ ಅಮಿತ್ ಶಾ ಕಟ್ಟಪ್ಪಣೆ ಏನು ಗೊತ್ತಾ?

|

Updated on: Apr 25, 2023 | 12:05 PM

ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್​ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಟಾರ್ಗೆಟ್ ಮಾಡಲಾಗಿದೆ. ಅದರಲ್ಲೂ ಖುದ್ದು ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ಖುದ್ದು ಕೇಂದ್ರದ ನಾಯಕರೇ ರೂಪರೇಷೆgಳನ್ನು ಮಾಡುತ್ತಿದ್ದಾರೆ.

ಜಗದೀಶ್ ಶೆಟ್ಟರ್​ ಸೋಲಿಸಲು ಚಾಣಕ್ಯನ ರಣತಂತ್ರ: ಪ್ರಮುಖ ಸಭೆಯಲ್ಲಿ ಅಮಿತ್ ಶಾ ಕಟ್ಟಪ್ಪಣೆ ಏನು ಗೊತ್ತಾ?
ಅಮಿತ್ ಶಾ, ಜಗದೀಶ್ ಶೆಟ್ಟರ್
Follow us on

ಧಾರವಾಡ: ಈ ಬಾರಿಯ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ವಿಧಾನಸಭಾ ಕ್ಷೇತ್ರ ಭಾರೀ ಸದ್ದು ಮಾಡುತ್ತಿದೆ.  ಕೆಲ ಪ್ರಮುಖ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿರುವ  ಜಗದೀಶ್​​ ಶೆಟ್ಟರ್ (Jagadish Shettar)​ ಅವರನ್ನು ಸೋಲಿಸಲು ಬಿಜೆಪಿ (BJP) ರಣತಂತ್ರಗಳನ್ನು ಹೆಣೆಯುತ್ತಿದೆ. ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡಿ ಎರಡು ಜನಪ್ರಿಯ ಲಿಂಗಾಯತ ಮಠಗಳಿಗೆ ತೆರಳಿ ಪೂಜೆ ಸಲ್ಲಿಸಿ ಸಮುದಾಯವನ್ನು ಓಲೈಸುವ ತಂತ್ರಗಾರಿಕೆ ಅನುಸರಿಸಿದ್ದರು. ಇದರ ಜತೆಗೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರ ಗೆಲುವಿಗಾಗಿ ಮುಖಂಡ ಜೊತೆ ಚರ್ಚಿಸಿ ಮಹತ್ವದ ಸೂಚನೆಗಳನ್ನು ನೀಡಿ ಹೋಗಿದ್ದರು. ಇದೀಗ ಖುದ್ದು ಚುನಾವಣಾ ಚಾಣಕ್ಯ ಅಮಿತ್ ಶಾ ಕೂಡ ಹುಬ್ಬಳ್ಳಿಗೆ ಭೇಟಿ ನೀಡಿದ್ದು, ಪ್ರಮುಖ ನಾಯಕರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಲ್ಲದೇ ಜಗದೀಶ್ ಶೆಟ್ಟರ್​ ಅವರನ್ನು ಮಣಿಸಲು ಅನೇಕ ತಂತ್ರಗಳನ್ನು ರೂಪಿಸಿದ್ದಾರೆ. ಇನ್ನು ಅಮಿತ್ ಶಾ ಪ್ರಮುಖರು, ಮಂಡಳ ಅಧಕ್ಷರ ಸಭೆಯಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ಇನ್​ಸೈಡ್​ ಡಿಟೇಲ್ಸ್​ ಇಲ್ಲಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ, ಆರ್​​ಎಸ್​ಎಸ್ ಮಾಸ್ಟರ್ ಪ್ಲ್ಯಾನ್; ಹೀಗಿದೆ ರಣತಂತ್ರ

ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಅಮಿತ್ ಶಾ ಅವರು ಗದಗ, ಹಾವೇರಿ, ಧಾರವಾಡ ಜಿಲ್ಲೆಯ ಪ್ರಮುಖರು, ಮಂಡಳ ಅಧ್ಯಕ್ಷರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅಮಿತ್ ಶಾ ಜಗದೀಶ್ ಶೆಟ್ಟರ್​ ವಿರುದ್ಧ ಗುಡುಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸಬೇಡಿ ಎಂದು ಕರೆ ಕೊಟ್ಟಿದ್ದು, ಜಗದೀಶ್ ಶೆಟ್ಟರ್​ಗೆ ನಾವು ಎಲ್ಲವನ್ನೂ ಕೊಟ್ಟಿದ್ದೇವೆ. ಆದರೂ ಅವರು ಸೈದ್ದಾಂತಿಕವಾಗಿ ಕಾಂಗ್ರೆಸ್​ಗೆ ಹೋಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದರೆ ಕ್ಷಮಿಸಬಹುದಿತ್ತು. ಆದ್ರೆ, ಕಾಂಗ್ರೆಸ್​​ನಿಂದ ಸ್ಪರ್ಧೆ ಮಾಡಿದ್ದಾರೆ. ಹಾಗಾಗಿ ಅವರನ್ನು ಕ್ಷಮಿಸಬಾರದು. ಯಾರೂ ಹೆದರಬೇಡಿ ನಾವಿದ್ದೇವೆ ಎಂದು ಸ್ಥಳೀಯ ಮುಖಂಡರಿಗೆ ಉತ್ಸಹದ ಮಾತುಳಿಂದಲೇ ಖಡಕ್ ಸೂಚನೆಗಳನ್ನು ನೀಡಿದರು.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ‌ ಮಹೇಶ್ ಟೆಂಗಿನಕಾಯಿ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳುವುದರ ಜೊತೆಗೆ ಜಗದೀಶ್ ಶೆಟ್ಟರ್​ ಹಿಂದೆ ಹೋಗಲು ತೀರ್ಮಾನಿಸಿ ಕೊನೆಗೆ ನಿರ್ಧಾರ ಕೈಬಿಟ್ಟಿದ ಪಾಲಿಕೆ ಸದಸ್ಯರುಗಳಿಗೆ ಅಭಿನಂದನೆ ತಿಳಿಸಿದರು. ಜಗದೀಶ್ ಶೆಟ್ಟರ್​ಗಾಗಿ ಪಾಲಿಕೆ ಸದಸ್ಯರು ರಾಜೀನಾಮೆ ಕೊಡಲು ಮುಂದಾಗಿದ್ದರು. ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲು ನೇತೃತ್ವದಲ್ಲಿ ಪಾಲಿಕೆ ಸದಸ್ಯರ ಸಂಧಾನ ಮಾಡಲಾಗಿತ್ತು. ಹೀಗಾಗಿ ಪಾಲಿಕೆ ಸದಸ್ಯರು ರಾಜೀನಾಮೆ ಹಿಂಪಡೆದಿದ್ದರು. ಈ ಸಭೆಯಲ್ಲಿ ಅವರಿಗೂ ಅಮಿತ್ ಶಾ ಅಭಿನಂದನೆಗಳನ್ನು ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಗೆ ನಾವು ಅನ್ಯಾಯ ಮಾಡಿಲ್ಲ. ಅವರೇ ನಮಗೆ ಅನ್ಯಾಯ ಮಾಡಿದ್ದು, ಅವರ ಜಾಗಕ್ಕೆ ಲಿಂಗಾಯತ ಯುವ ನಾಯಕನಿಗೆ ಸ್ಥಾನ ನೀಡಲಾಗಿದೆ. ಇದನ್ನು ಪ್ರತಿಯೊಬ್ಬರಿಗೂ ತಿಳಸಬೇಕು. ಮೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಚರ್ಚೆಯಾಗಿರುವುದೇ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ. ಸೈದ್ದಾಂತಿಕವಾಗಿ ವಿರೋಧಿಯಾಗಿರೋ ಶೆಟ್ಟರ್ ಗೆಲ್ಲಲೇಬಾರದು ಎಂದು ಶಾ ಶಪಥ ಮಾಡಿದರು.

ಪಕ್ಷದ ವೀಕ್ಷಕರಿಂದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ‌ಮೂರು ಜಿಲ್ಲೆಯ ಪ್ರತಿಯೊಂದು ಕ್ಷೇತ್ರದ ಮಾಹಿತಿ‌ ಪಡೆದುಕೊಂಡ ಅಮಿತ್ ಶಾ, ಮೂರು‌ ಜಿಲ್ಲೆಯ ಯಾವ ಕ್ಷೇತ್ರಗಳಲ್ಲಿ ಒನ್ ಟು ಒನ್ ಪೈಟ್, ತ್ರಿಕೋಣ ಸ್ಪರ್ಧೆ ಇದೆ ಎನ್ನುವುದನ್ನು ವಿವರವಾಗಿ ಮಾಹಿತಿ ಕಲೆಹಾಕಿದರು. ಅಲ್ಲದೇ ಉತ್ತರ ಕರ್ನಾಟಕದಲ್ಲಿ ನಾವೇ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂದು ಕಟ್ಟಪ್ಪಣೆ ಹೊರಡಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ