Voter ID Scam: ಚಿಲುಮೆ ಸಂಸ್ಥೆಯಂತೆ ಮತ್ತೊಂದು ಅಕ್ರಮ ಬಯಲು; 25 ಸಾವಿರ ಕೊಟ್ರೆ ಸಾಕು ಮತದಾರರ ದತ್ತಾಂಶ ಸಿಗುತ್ತೆ

|

Updated on: Apr 27, 2023 | 12:12 PM

ಹಣ ಪಡೆದು ಮತದಾರರ ಮಾಹಿತಿ ಮಾರಾಟ ಮಾಡುತ್ತಿದ್ದ ಕಂಪನಿಯೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಕಂಪನಿಯ ಹೆಸರನ್ನು ಬಹಿರಂಗ ಪಡೆಸದೆ ಗೌಪತ್ಯೆ ಕಾಪಾಡಲಾಗಿದೆ.

Voter ID Scam: ಚಿಲುಮೆ ಸಂಸ್ಥೆಯಂತೆ ಮತ್ತೊಂದು ಅಕ್ರಮ ಬಯಲು; 25 ಸಾವಿರ ಕೊಟ್ರೆ ಸಾಕು ಮತದಾರರ ದತ್ತಾಂಶ ಸಿಗುತ್ತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ದಿನದಿಂದ ದಿನಕ್ಕೆ ರಾಜಕೀಯ ಕಣ ರಂಗೇರುತ್ತಿದೆ, ಇದರ ಜೊತೆಗೆ ಅಕ್ರಮಗಳು ಕೂಡ ಹೆಚ್ಚಾಗಿದ್ದು ಚಿಲುಮೆ ಸಂಸ್ಥೆಯ ರೀತಿಯಲ್ಲೇ ಅಕ್ರಮ ಎಸಗುತ್ತಿದ್ದ ಮತ್ತೊಂದು ಕಂಪನಿಯ ಬಣ್ಣ ಬಯಲಾಗಿದೆ. ಮತದಾರರ ಮಾಹಿತಿ ಸಂಗ್ರಹ ಮತ್ತು ಗುರುತಿನ ಚೀಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿಅಕ್ರಮ ನಡೆದಿರುವ ಆರೋಪ ಚಿಲುಮೆ ಸಂಸ್ಥೆ ವಿರುದ್ಧ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅನೇಕ ಅಧಿಕಾರಿಗಳು ಜೈಲು ಸೇರಿದ್ದರು. ಸದ್ಯ ಈಗ ಇದೇ ರೀತಿ ಆರೋಪ ಮತ್ತೊಂದು ಕಂಪನಿಯ ವಿರುದ್ಧ ಕೇಳಿ ಬಂದಿದೆ. ಇಲ್ಲಿ 25 ಸಾವಿರಕ್ಕೆ ಮತದಾರರ ದತ್ತಾಂಶ ಮಾರಾಟ ಮಾಡಲಾಗುತ್ತೆ.

25 ಸಾವಿರ ಕೊಟ್ರೆ ಸಾಕು ಮತದಾರರ ದತ್ತಾಂಶ ಮಾರಾಟ?

ಹೌದು ಹಣ ಪಡೆದು ಮತದಾರರ ಮಾಹಿತಿ ಮಾರಾಟ ಮಾಡುತ್ತಿದ್ದ ಕಂಪನಿಯೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಕಂಪನಿಯ ಹೆಸರನ್ನು ಬಹಿರಂಗ ಪಡೆಸದೆ ಗೌಪತ್ಯೆ ಕಾಪಾಡಲಾಗಿದೆ. ಚಿಲುಮೆ ಸಂಸ್ಥೆಯ ರೀತಿಯಲ್ಲೇ ಈ ಕಂಪನಿಯು ಸಹ‌ ಕೆಲಸ ಮಾಡುತ್ತಿತ್ತು. ಮತದಾರರ ಸಂಪೂರ್ಣ ವಿವರವನ್ನು ಸಂಸ್ಥೆ ಸಂಗ್ರಹಿಸುತ್ತಿತ್ತು. ಪ್ರತ್ಯೇಕ ಆ್ಯಪ್ ಬಳಸಿ ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮತದಾರರು ಕಳೆದ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಿದ್ದರು, ಈ ಬಾರಿ ಯಾವ‌ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂಬ ಎಲ್ಲಾ ಮಾಹಿತಿಯನ್ನು ಆ್ಯಪ್​ನಲ್ಲಿ ಹಾಕಲಾಗುತ್ತಿತ್ತು. ಕಂಪನಿ ತನ್ನ ವೆಬ್ ಸೈಟ್‌ನಲ್ಲಿ ಮತದಾರರ ಮೊಬೈಲ್ ಸಂಖ್ಯೆ ಹಾಕುತ್ತಿತ್ತು, 25 ಸಾವಿರ ನೀಡಿದರೆ ಲಾಗ್ ಇನ್ ಐಡಿ ನೀಡುತ್ತಿತ್ತು. ಸುಮಾರು 6 ಲಕ್ಷ ದಷ್ಟು ಮತದಾರರ ಮಾಹಿತಿ ಈ ಸಂಸ್ಥೆಯ ಬಳಿ ಇತ್ತು ಎನ್ನುವ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Voter ID Scam: ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ ಆದೇಶ

ಇದು ನಿರ್ದಿಷ್ಟ ಕ್ಷೇತ್ರದ ಮತದಾರರ ಪಟ್ಟಿಯೇ ಅಥವಾ ಬೇರೆ ಯಾವ ಯಾವ ಕ್ಷೇತ್ರದ ಮತದಾರರ ಮಾಹಿತಿ ಈ ಸಂಸ್ಥೆಯ ಬಳಿ ಇದೆ ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಮೊದಲಿಗೆ ರಾಜ್ಯ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳು ಈ ವೆಬ್ ಸೈಟ್ ತೆಗೆದ ತಕ್ಷಣ ಸ್ವಾಗತ ಎಂಬ ಸಂದೇಶ ಬರುತ್ತಿತ್ತು. 25 ಸಾವಿರ ಜೊತೆಗೆ 500 ಸೇವಾ ಶುಲ್ಕ ನೀಡಿದರೆ ಕ್ಷೇತ್ರದ ಮತದಾರರ ಮಾಹಿತಿ ನೀಡಲಾಗುತ್ತಿತ್ತು. ಮಾಹಿತಿ ಪಡೆದು ಚುನಾವಣೆಯಲ್ಲಿ ಜಯಶಾಲಿಯಾಗಿ ಎಂದು ಹೇಳುತ್ತಿತ್ತು. ಒಂದು ವೇಳೆ ಸೋತರೆ ಹಣ ವಾಪಸ್ ಎಂಬಾ ಪ್ರಣಾಳಿಕೆ ಮಾಡಿಕೊಂಡಿತ್ತು. ಪಕ್ಷೇತರ ಅಭ್ಯರ್ಥಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ