AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಈಗಾಗಲೇ ವಾರಂಟಿಯೇ ಎಕ್ಸ್​ಪೈರ್ ಆಗಿರುವ ಕಾಂಗ್ರೆಸ್​ ನೀಡುವ ಗ್ಯಾರಂಟಿಗೆ ಅರ್ಥವೇನಿದೆ ಎಂದ ಪ್ರಧಾನಿ ಮೋದಿ

ಈಗಾಗಲೇ ಎಕ್ಸ್​ಪೈರ್ ಆಗಿರುವ ಕಾಂಗ್ರೆಸ್ ನೀಡುವ ಗ್ಯಾರಂಟಿಗೆ ಅರ್ಥವೇನಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.

Narendra Modi: ಈಗಾಗಲೇ ವಾರಂಟಿಯೇ ಎಕ್ಸ್​ಪೈರ್ ಆಗಿರುವ ಕಾಂಗ್ರೆಸ್​ ನೀಡುವ ಗ್ಯಾರಂಟಿಗೆ ಅರ್ಥವೇನಿದೆ ಎಂದ ಪ್ರಧಾನಿ ಮೋದಿ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Apr 27, 2023 | 11:27 AM

Share

ಈಗಾಗಲೇ ಎಕ್ಸ್​ಪೈರ್ ಆಗಿರುವ ಕಾಂಗ್ರೆಸ್ ನೀಡುವ ಗ್ಯಾರಂಟಿಗೆ ಅರ್ಥವೇನಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ರೂಪುರೇಷೆಗಳ ಕುರಿತು ಕಾರ್ಯಕರ್ತರ ನಡುವೆ ನಡೆಸಿದ ಸಂವಾದದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸದಾ ಸುಳ್ಳಿನ ಭರವಸೆ, ಭ್ರಷ್ಟಾಚಾರದ ಭರವಸೆ ನೀಡುತ್ತದೆ, ವಾರಂಟಿಯೇ ಎಕ್ಸ್​ಪೈರ್ ಆಗಿರುವ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಗೆ ಬೆಲೆ ಎಲ್ಲಿದೆ ಎಂದು ಹೇಳಿದ್ದಾರೆ.

ನಾವು ಮುಂದಿನ 5 ವರ್ಷಗಳು ಎಂತಹ ಕೆಲಸವನ್ನು ಮಾಡಲಿದ್ದೇವೆ ಎಂದು ಜನತೆಗೆ ತಿಳಿಸಲಿದ್ದೇವೆ, ಯಾರ ಹತ್ತಿರ ರಾಜ್ಯದ ಅಭಿವೃದ್ಧಿಯ ನೀಲಿನಕ್ಷೆ ಇದೆಯೋ ಜನರು ಅವರನ್ನೇ ಆಯ್ಕೆ ಮಾಡಬೇಕು.

ಈಗಾಗಲೇ ಕರ್ನಾಟಕದ ಏರ್​ಪೋರ್ಟ್​, ರೈಲ್ವೆ ನಿಲ್ದಾಣ, ಮೆಟ್ರೋ ಪ್ರಶಂಸೆಗೆ ಪಾತ್ರವಾಗಿವೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕವೂ ಕೂಡ ಪ್ರಮುಖ ಪಾತ್ರವಹಿಸುತ್ತದೆ ಎಂದಿದ್ದಾರೆ.

ಡಬಲ್​ ಇಂಜಿನ್ ಸರ್ಕಾರ ನೇರವಾಗಿ ವಿಕಾಸದ ಕಡೆಗೆ ಹೆಜ್ಜೆ ಇಡುತ್ತದೆ, ಡಬಲ್ ಇಂಜಿನ್ ಸರ್ಕಾರವಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯ, ಬಡತನ ನಿರ್ಮೂಲನೆ ತುಂಬಾ ವೇಗವಾಗಿ ಆಗುತ್ತಿದೆ.

ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ ಆ ರಾಜ್ಯದಲ್ಲಿ ಕೇಂದ್ರ ಯಾವ ಯೋಜನೆಯನ್ನೂ ಸಫಲವಾಗಲು ಬಿಡುತ್ತಿಲ್ಲ, ಜನರಿಗೆ ಯೋಜನೆ ತಲುಪದೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ಡಬಲ್ ಇಂಜಿನ್ ಸರ್ಕಾರದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರಾಜ್ಯ ಸರ್ಕಾರವು 4 ಸಾವಿರ ರೂ, ಕೇಂದ್ರ ಸರ್ಕಾರವು 10 ಸಾವಿರ ರೂ ನೀಡುತ್ತಿದೆ, ಜನರಿಗೆ ಒಟ್ಟು 10 ಸಾವಿರ ರೂ ತಲುಪುತ್ತಿದೆ, ಇದೇ ಡಬಲ್ ಇಂಜಿನ್ ಸರ್ಕಾರದ ಮಹತ್ವ ಎಂದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ