Narendra Modi Interaction: ಕರ್ನಾಟಕದ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿಯ ಡಬಲ್​ ಇಂಜಿನ್ ಸೂತ್ರ

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಡಬಲ್​ ಇಂಜಿನ್ ಸೂತ್ರ ನೀಡಿದ್ದಾರೆ. ಇಂದು ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಕೆಲವು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಧಾನಿ ಮೋದಿ ಅವರ ಮಾತಿನ ಪ್ರಮುಖಾಂಶಗಳು ಹೀಗಿವೆ.

Narendra Modi Interaction: ಕರ್ನಾಟಕದ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿಯ ಡಬಲ್​ ಇಂಜಿನ್ ಸೂತ್ರ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on:Apr 27, 2023 | 11:11 AM

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಡಬಲ್​ ಇಂಜಿನ್ ಸೂತ್ರ ನೀಡಿದ್ದಾರೆ. ಇಂದು ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಕೆಲವು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಧಾನಿ ಮೋದಿ ಅವರ ಮಾತಿನ ಪ್ರಮುಖಾಂಶಗಳು ಹೀಗಿವೆ.

ಪ್ರತಿಯೊಂದು ಬೂತ್​ನ ಜನರ ಮನಸ್ಸು​ ಗೆದ್ದರೆ, ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಬಹುದು ಬೂತ್​ ಮಟ್ಟದಲ್ಲಿ ಕೆಲಸವಾಗಬೇಕು, ಪ್ರತಿ ಬೂತ್​ನ ಜನರ ಮನಸ್ಸು ಗೆದ್ದರೆ ಚುನಾವಣೆಯಲ್ಲಿ ಗೆಲ್ಲುವುದು ಸುಲಭ. ಎರಡು ದಿನಗಳ ಬಳಿಕ ನಾನು ಕೂಡ ಕಾರ್ಯಕರ್ತರ ಜತೆ ಸೇರಿ ಜನರ ಆಶೀರ್ವಾದ ಕೇಳಲು ಬರುತ್ತಿದ್ದೇನೆ ಎಂದರು. ಕರ್ನಾಟಕದಲ್ಲಿ ಎಲ್ಲಿ ಹೋಗಿದ್ದೇನೆ ಅಲ್ಲೆಲ್ಲಾ ನನಗೆ ಪ್ರೀತಿ, ಆಶೀರ್ವಾದ ಸಿಕ್ಕಿದೆ, ನನಗೆ ಯಾವುದೇ ಪದವಿ ಇಲ್ಲದಿದ್ದ ಸಂದರ್ಭದಲ್ಲೂ ಕೂಡ ಜನರು ನನಗೆ ಪ್ರೀತಿ ನೀಡಿದ್ದರು. ಈಗಲೂ ಕೂಡ ಬಿಜೆಪಿಗೆ ಜನರು ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ಕಾರ್ಯಕರ್ತರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಪ್ರಧಾನಿ ಮೋದಿ ಶಿವಮೊಗ್ಗದ ವಿರೂಪಾಕ್ಷಪ್ಪ, ಚಿತ್ರದುರ್ಗದ ಫಕೀರಪ್ಪ, ಚಂದ್ರಶೇಖರ್ ವಿಜಯನಗರ, ಅರುಣ್​ ಶೇಠ್​ ದಕ್ಷಿಣ ಕನ್ನಡ, ಜಿ.ಆರ್ ಯೋಗೇಶ್​ ಬೆಂಗಳೂರು ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕದಲ್ಲಿ ಮುಂದಿನ 10 ದಿನಗಳಲ್ಲಿ ಏನು ಕೆಲಸ ಮಾಡಬೇಕು? ಕರ್ನಾಟಕದಲ್ಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಮುಂದಿನ 10 ದಿನಗಳಲ್ಲಿ ಏನು ಮಾಡಬೇಕು ಎನ್ನುವ ಕುರಿತು ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರಿಸಿದರು.

ಮುಂದಿನ 10 ದಿನಗಳಲ್ಲಿ ಗೆಲುವಿನ ವಿಶ್ವಾಸ ಹೊಂದಿರುವ ಕಾರ್ಯಕರ್ತರು 10 ಮಂದಿ ಪುರುಷರು, 10 ಮಂದಿ ಮಹಿಳೆಯ ಟೀಂ ಮಾಡಿ ಪ್ರತಿಯೊಬ್ಬರ ಮನೆಗೂ ತೆರಳಬೇಕು. ಅವರ ಬಳಿ ಕುಳಿತು ಬಿಜೆಪಿಯಿಂದ ನೀವು ಏನು ಬಯಸುತ್ತೀರಿ, ಮನೆಯಲ್ಲಿ ಎಷ್ಟು ಜನರಿದ್ದೀರಿ, ಸಮಸ್ಯೆಗಳೇನು ಎಂಬುದನ್ನು ಕುಟುಂಬದವರ ರೀತಿ ಆಲಿಸಬೇಕು.

  • ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದುವರೆಗೆ ಕರ್ನಾಟಕದಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎನ್ನುವ ಕುರಿತು ಸಂಪೂರ್ಣ ವಿಚಾರವು ನಿಮ್ಮ ಮೊಬೈಲ್ ಅಥವಾ ನಿಮ್ಮ ಡೈರಿಯಲ್ಲಿಟ್ಟುಕೊಂಡಿರಬೇಕು.
  • ಕೊರೊನಾ ಬಳಿಕ ಎಲ್ಲಾ ದೇಶದ ಆರ್ಥಿಕತೆಯೂ ಕೆಟ್ಟದಾಗಿದ್ದರೆ ಭಾರತದ ಮಾತ್ರ ಉತ್ತಮ ಆರ್ಥಿಕತೆಯನ್ನು ಉಳಿಸಿಕೊಂಡಿದೆ.
  • ಮುಂದಿನ 50 ವರ್ಷಗಳಲ್ಲಿ ಬಡತನ ನಿರ್ಮೂಲನೆ, ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ, ಕೃಷಿಕರಿಗೆ ಸೌಲಭ್ಯ ಸೇರಿದಂತೆ ಇತರೆ ವಿಚಾರಗಳ ಕಡೆಗೆ ಗಮನ ನೀಡುತ್ತಿದ್ದೇವೆ.

ಡಬಲ್​ ಇಂಜಿನ್ ಸರ್ಕಾರದಿಂದ ಆಗಿರುವ ಪ್ರಯೋಜನವೇನು?

  • ಡಬಲ್​ ಇಂಜಿನ್ ಸರ್ಕಾರ ನೇರವಾಗಿ ವಿಕಾಸದ ಕಡೆಗೆ ಹೆಜ್ಜೆ ಇಡುತ್ತದೆ, ಡಬಲ್ ಇಂಜಿನ್ ಸರ್ಕಾರವಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯ, ಬಡತನ ನಿರ್ಮೂಲನೆ ತುಂಬಾ ವೇಗವಾಗಿ ಆಗುತ್ತಿದೆ.
  • ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ ಆ ರಾಜ್ಯದಲ್ಲಿ ಕೇಂದ್ರ ಯಾವ ಯೋಜನೆಯನ್ನೂ ಸಫಲವಾಗಲು ಬಿಡುತ್ತಿಲ್ಲ, ಜನರಿಗೆ ಯೋಜನೆ ತಲುಪದೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ.
  • ಡಬಲ್ ಇಂಜಿನ್ ಸರ್ಕಾರದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರಾಜ್ಯ ಸರ್ಕಾರವು 4 ಸಾವಿರ ರೂ, ಕೇಂದ್ರ ಸರ್ಕಾರವು 10 ಸಾವಿರ ರೂ ನೀಡುತ್ತಿದೆ, ಜನರಿಗೆ ಒಟ್ಟು 10 ಸಾವಿರ ರೂ ತಲುಪುತ್ತಿದೆ, ಇದೇ ಡಬಲ್ ಇಂಜಿನ್ ಸರ್ಕಾರದ ಮಹತ್ವ ಎಂದರು.
  • ಇನ್ನೂ ರಾಜ್ಯದಲ್ಲಿ ಬಿಜೆಪಿ ಇಲ್ಲದಿದ್ದರೆ ರಸ್ತೆ,ಸ ಆರ್ವಜನಿಕ ಸಾರಿಗೆ ಸೇರಿದಂತೆ ಯಾವುದೇ ಯೋಜನೆ ಹಾಕಿಕೊಂಡರೂ ಅದಕ್ಕೆ ಜಮೀನು ಹೊಂದಿಸುವುದರಿಂದ ಹಿಡಿದು ಸಾಕಷ್ಟು ಕಷ್ಟಪಡಬೇಕು.
  • 2014ಕ್ಕೂ ಮುನ್ನ ಆವಾಜ್​ ಯೋಜನೆಯಲ್ಲಿ ಮನೆ ನಿರ್ಮಿಸಲು 300ಕ್ಕೂ ಅಧಿಕ ದಿನ ತೆಗೆದುಕೊಳ್ಳುತ್ತಿತ್ತು ಆದರೆ ಈಗ 100 ದಿನಗಳಲ್ಲಿ ಮನೆ ನಿರ್ಮಾಣವಾಗಲಿದೆ.
  • ಮೊದಲು 70-80 ಸಾವಿರ ರೂ ನೀಡಲಾಗುತ್ತಿತ್ತು ಆದರೆ ಈಗ 1 ಲಕ್ಷದ 30 ಸಾವಿರ ರೂ. ನೀಡಲಾಗುತ್ತಿದೆ.
  • ಮೊದಲು ನಾಲ್ಕು ಗೋಡೆ ನಿರ್ಮಿಸಿ ಕೊಟ್ಟುಬಿಡುತ್ತಿದ್ದರು ಆದರೆ ಈಗ ಮನೆ ನಿರ್ಮಿಸಿ, ಅದರ ಜತೆಗೆ ಟಾಯ್ಲೆಟ್​, ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ, ಹಾಗೂ ವ್ಯಕ್ತಿಯ ಆಸೆಯಂತೆಯೇ ಮನೆ ನಿರ್ಮಾಣವಾಗುತ್ತಿದೆ.
  • ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ 9 ವರ್ಷಗಳಲ್ಲಿ ಹೆಚ್ಚಾಗಿದೆ.
  • ಭ್ರಷ್ಟಾಚಾರದ ವಿರುದ್ಧ ಹೋರಾಟ-ಕಾಂಗ್ರೆಸ್ ಭ್ರಷ್ಟಾಚಾರ ಹೋಗಲಾಡಿಸಲು , ಅವರೇ ಭ್ರಷ್ಟಾಚಾರ ಮಾಡಿದರು.
  • ನಾವು ಕೇವಲ ವರ್ತಮಾನವನ್ನು ನೋಡುವುದಿಲ್ಲ ಭವಿಷ್ಯವನ್ನು ನೋಡಿ ಕೆಲಸ ಮಾಡುತ್ತೇವೆ.
  • ಕಾಂಗ್ರೆಸ್ ಈಗಾಗಲೇ ಎಕ್ಸ್​ಪೈರಿ ಆಗಿದೆ, ಈಗ ಕಾಂಗ್ರೆಸ್​ನ ಗ್ಯಾರಂಟಿಗೆ ಯಾವ ಬೆಲೆಯೂ ಇಲ್ಲ ಎಂದು ಮೋದಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:52 am, Thu, 27 April 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ