Karnataka Assembly Elections 2023: ಇಂದು ಕಿಚ್ಚ ಸುದೀಪ್​ ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ? ಇಲ್ಲಿದೆ ವಿವರ

ಏಪ್ರಿಲ್ 26ರಂದು ಪ್ರಚಾರ ಆರಂಭಿಸಿದ ಸುದೀಪ್ ಚಿತ್ರದುರ್ಗದ ಮೊಳಕಾಲ್ಮೂರು, ದಾವಣಗೆರೆಯ ಜಗಳೂರು, ಬಳ್ಳಾರಿಯ ಸಂಡೂರಿನಲ್ಲಿ ಪ್ರಚಾರ ನಡೆಸಿದ್ದರು. ಇಂದು ಸುದೀಪ್ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.

Karnataka Assembly Elections 2023: ಇಂದು ಕಿಚ್ಚ ಸುದೀಪ್​ ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ? ಇಲ್ಲಿದೆ ವಿವರ
ಸುದೀಪ್ ಪ್ರಚಾರ
Follow us
ಆಯೇಷಾ ಬಾನು
|

Updated on:Apr 27, 2023 | 9:48 AM

ಹಾವೇರಿ: ರಾಜ್ಯ ರಾಜಕಾರಣದ ರಣರಂಗ ದಿನೇ ದಿನೇ ರಂಗೇರುತ್ತಿದೆ(Karnataka Assembly Elections 2023). ಚುನಾವಣಾ ಅಖಾಡದಲ್ಲಿ ಬಿಜೆಪಿ ಹೊಸ ಹೊಸ ತಂತ್ರ ಹೆಣೆಯುತ್ತಿದೆ. ಎಸ್​ಟಿ ಮೀಸಲು ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯದವರಾದ ನಟ ಕಿಚ್ಚ ಸುದೀಪ್​​ರನ್ನ(Actor Sudeep) ಪ್ರಚಾರಕ್ಕೆ ಬಿಡುವ ಮೂಲಕ ಕಿಚ್ಚು ಹೊತ್ತಿಸಿದೆ. ಏಪ್ರಿಲ್ 26ರಂದು ಪ್ರಚಾರ ಆರಂಭಿಸಿದ ಸುದೀಪ್ ಚಿತ್ರದುರ್ಗದ ಮೊಳಕಾಲ್ಮೂರು, ದಾವಣಗೆರೆಯ ಜಗಳೂರು, ಬಳ್ಳಾರಿಯ ಸಂಡೂರಿನಲ್ಲಿ ಪ್ರಚಾರ ನಡೆಸಿದ್ದರು. ಇಂದು ಸುದೀಪ್ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.

ಇಂದು ಮೂರು ಜಿಲ್ಲೆಗಳಲ್ಲಿ ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಲಿದ್ದಾರೆ. ನಿನ್ನೆ ಸಿದ್ದರಾಮಯ್ಯ ಕಾರ್ಯಕ್ರಮ ಹಿನ್ನೆಲೆ ಸಂಡೂರಿನಲ್ಲಿ ಪ್ರಚಾರ ನಡೆಸಲಾಗಿರಲಿಲ್ಲ. ಹೀಗಾಗಿ ಇಂದು ಮುಂಜಾನೆಯೇ ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಪರ ಮತಯಾಚಿಸಿ ಕೂಡ್ಲಿಗಿಯಲ್ಲಿ ರೋಡ್​ ಶೋ ನಡೆಸಲಿದ್ದಾರೆ. ನಂತರ ಅದೇ ಮಾರ್ಗದಲ್ಲಿ ವಿಜಯ ಸರ್ಕಲ್​ನಿಂದ ಕೆಎಸ್​ಆರ್​ಟಿಸಿ ಡಿಪೋ ವರೆಗೂ ರೋಡ್​ ಶೋ ನಡೆಸಿ ಬಳಿಕ ಹಾವೇರಿ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ: Karnataka Assembly Polls: ಬಿಜೆಪಿ ಪರ ಪ್ರಚಾರ ಶುರುಮಾಡಿರುವ ಕಿಚ್ಚ ಸುದೀಪ್ ಇಂದು ಮೊಳಕಾಲ್ಮೂರುಗೆ ಸಿನಿಮೀಯ ಶೈಲಿಯಲ್ಲಿ ಆಗಮನ!

ಬೆಳಗ್ಗೆ 11 ಗಂಟೆಗೆ ಹಿರೇಕೆರೂರಿಗೆ ಆಗಮಿಸುವ ನಟ ಸುದೀಪ್, ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರ ರೋಡ್​ ಶೋ ನಡೆಸಲಿದ್ದಾರೆ. ರಾಣೆಬೆನ್ನೂರಿನಲ್ಲಿ ಅರುಣ್ ಪೂಜಾರ್​ ಪರ, ಬ್ಯಾಡಗಿಯಲ್ಲಿ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಪರ ನಂತರ ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್​.ಪಾಟೀಲ್​ ಪರ ಸುದೀಪ್ ಮತಬೇಟೆ ಮಾಡಲಿದ್ದಾರೆ.

ಸುದೀಪ್ ಪ್ರಚಾರ ವೇಳಾಪಟ್ಟಿ

  • ಬೆಳಿಗ್ಗೆ 11 ಗಂಟೆಗೆ ರಾಣೇಬೆನ್ನೂರ ಬಿಜೆಪಿ ಅಭ್ಯರ್ಥಿ ಅರುಣ ಕುಮಾರ ಪರ ಪ್ರಚಾರ
  • ಮಧ್ಯಾಹ್ನ 12:30 ಕ್ಕೆ ಹಿರೆಕೇರೂರ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರ ಪ್ರಚಾರ
  • ಸಾಯಂಕಾಲ 3:10 ಕ್ಕೆ ಬ್ಯಾಡಗಿ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಪರ ಮತಯಾಚನೆ
  • ಸಂಜೆ 4.30 ಕ್ಕೆ ಸಂಶಿಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್ ಪಾಟೀಲ್ ಪರ ರೋಡ್ ಶೋ ನಡೆಸಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:48 am, Thu, 27 April 23