ಬೆಳಗಾವಿ: ನಿಮ್ಮ ಉಪಕಾರ ನಮ್ಮ ಮೇಲಿಲ್ಲ ನಾವು ಘಂಟಾಘೋಷವಾಗಿ ಹೇಳಬೇಕಾಗುತ್ತದೆ ಎಂದು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ (Mahesh Kumathalli) ಅವರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ (Laxman Savadi) ವಿರುದ್ಧ ಗುಡುಗಿದ್ದಾರೆ. ನಮ್ಮಿಂದ ನೀವು ಎಂಎಲ್‌ಸಿ ಆಗಿದ್ದೀರಿ, ರಾಜ್ಯದ ಉಪಮುಖ್ಯಮಂತ್ರಿಯೂ ಆಗಿದ್ದು ನೀವು ನಮ್ಮಿಂದ (ಬಿಜೆಪಿ), 50 ಕೋಟಿ ರೂ. ಕೊಟ್ಟಿದ್ದು ನಿಜವಾಗಿದ್ದರೆ ನಾನು ಸಿದ್ದೇಶ್ವರ ದೇವಸ್ಥಾನಕ್ಕೆ ಬರಲು ತಯಾರಿದ್ದೇನೆ. ನೀವು ಬರದಿದ್ದರೂ ವೈಯಕ್ತಿಕವಾಗಿ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ಕಾಲುಬಿದ್ದು ಬರುವೆ ಎಂದು ಹೇಳುವ ಮೂಲಕ ಲಕ್ಷ್ಮಣ್ ಸವದಿಗೆ ಪರೋಕ್ಷವಾಗಿ ಆಣೆ ಪ್ರಮಾಣದ ಸವಾಲು ಹಾಕಿದರು.
ನಾನು ಹಣ ಗಳಿಸಬೇಕಿದ್ದರೆ ಸಾಕಷ್ಟು ವೇದಿಕೆಗಳಿದ್ದವು, ನಿಮಗೆ ನಮಗೆ ಯಾವುದೇ ಮಾತು ಇಲ್ಲ, ಭೇಟಿಯಾದ ಸಂದರ್ಭವೂ ಇಲ್ಲ. ಹೀಗಿದ್ದಾಗಲೂ ಓರ್ವ ದೊಡ್ಡ ಪ್ರಭಾವಿ ವ್ಯಕ್ತಿಯಾಗಿ ಈ ರೀತಿ ಆರೋಪ ಮಾಡುತ್ತಿರಲ್ವ ನಿಮಗೆ ಏನು ಹೇಳಬೇಕು ತಿಳಿಯುತ್ತಿಲ್ಲ ಎಂದು ಕುಮಟಳ್ಳಿ ಹೇಳಿದರು. ಅಲ್ಲದೆ, 2013ರ ಚುನಾವಣೆಯಲ್ಲಿ ಸೋತಿದ್ದೇನೆ ಸಾಕು ಎಂದಿದ್ದೆ. 2018ರಲ್ಲಿ ರಮೇಶ್ ಜಾರಕಿಹೊಳಿ ನನ್ನ ತನು ಮನ ಧನದಿಂದ ನಿಲ್ಲಿಸಿದ್ದರು. ನೀವೆಲ್ಲರೂ ಕೂಡಿ ನನಗೆ ಆಶೀರ್ವಾದ ಮಾಡಿದ್ದೀರಿ. ಬಳಿಕ ರಾಜೀನಾಮೆ ಕೊಡುವ ಸಂದರ್ಭ ಬಂದಿದ್ದು ನಿಮಗೆ ಗೊತ್ತು. ನನ್ನ ಮಂತ್ರಿ ಮಾಡುವುದು ಬೆಂಕಿ ಹಚ್ಚರಿ ಅವರನ್ನ ಮೊದಲು ಸಂಭಾಲಿಸಿ ಎಂದು ಯಾರು ನನ್ನ ಕೇಳಿದರಲ್ಲ ಅವರಿಗೆ ಸ್ಪಷ್ಟವಾಗಿ ಹೇಳಿದ್ದೆ ಎಂದರು.
ಇದನ್ನೂ ಓದಿ: Karnataka Assembly Polls; ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಹೀನಾಯ ಸೋಲು ಅನುಭವಿಸಲಿದ್ದಾರೆ: ಅಮಿತ್ ಶಾ
2019ರಲ್ಲಿ ಪಕ್ಷಕ್ಕೆ ಬಂದಾಗ 2019, 2023 ಟಿಕೆಟ್ ಕೇಳಿದ್ದೆವು. ಆಗ ನೀವು ಸ್ಥಳೀಯರನ್ನು ಕೇಳಿ, ಈಗಿಂದ ಮೊದಲಿಂದ ಒಪ್ಪಿದರೆ ಬರುತ್ತೇನೆ ಎಂದಿದ್ದೆ. ಆಗಿನಿಂದ ನಾವು ಬದ್ಧತೆಯಿಂದ ನಡೆದುಕೊಂಡು ಬಂದಿದ್ದೇವೆ. ಅವರನ್ನು ಎಂಎಲ್‌ಸಿ ಮಾಡಿದರೂ ನಾವೆಲ್ಲೂ ಅಸಮಾಧಾನಗೊಂಡಿರಲಿಲ್ಲ. 2019ರ ಬಳಿಕ ಮತ್ತೆ ಡಿಸಿಎಂ ತೆಗೆಯುತ್ತಾರೆ ಅಂತಾ ನಾಟಕ ಮಾಡಿದರು. ಚುನಾವಣಾ ನೀತಿ ಸಂಹಿತೆ ಜಾರಿ ಬಂದ ಮೇಲೆ ನಮ್ಮನ್ನು ಬೆಂಗಳೂರಿಗೆ ಕರೆದರು. ಇದು ಚರ್ಚೆಗೆ ಬರಬಾರದು ಅಂತಾ ಹೇಳಿದೆ. 11 ಜನ ಮಂತ್ರಿ ಮಾಡಿ ನನ್ನ ಬಿಟ್ಟರೂ ನಾನು ನಿಮ್ಮನ್ನ ಕೇಳಿಲ್ಲ. ಇವತ್ತು ಎಂಎಲ್‌ಎ ಸೀಟ್ ಕೇಳಿದರೆ ಹೇಗೆ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ದಬ್ಬಾಳಿಕೆ ಮಾಡಿ ನಿಮ್ಮನ್ನು ಅಂಜಿಸುತ್ತಾರೆ, ಗೆಲ್ಲುತ್ತಾರೋ ಬಿಡುತ್ತಾರೋ ಜನರ ತೀರ್ಪು ವೋಟ್ ಹಾಕುವುದು ನಿಮ್ಮ ಕೈಯಲ್ಲಿದೆ. ಸಮಾಜದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ. ದಬ್ಬಾಳಿಕೆ, ಹಣ ಬಲ, ತೋಲ್ಬಲಕ್ಕೆ ಜಗ್ಗಬೇಡಿ. ನಾವು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಕೆಲಸ ಮಾಡಿದ್ದೇವೆ ಎಂದು ಹೇಳುವ ಮೂಲಕ ಮಹೇಶ್ ಕುಮಟಳ್ಳಿ ಕ್ಷೇತ್ರದ ಮತದಾರರಲ್ಲಿ ಮತಯಾಚನೆ ನಡೆಸಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Tue, 25 April 23