ನಾವು ಹನುಮಂತನ ಭಕ್ತರು, ನಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

|

Updated on: May 03, 2023 | 3:20 PM

ಭಜರಂಗದಳ ಬ್ಯಾನ್ ವಿಚಾರ ಕುರಿತು ‘ನಾವೂ ಆಂಜನೇಯ ಭಕ್ತರು. ಅವರು ಮಾತ್ರನಾ?, ಶಾಂತಿ ತೋಟ ಕದಲಬಾರದು. ಸೌಹಾರ್ದತೆ‌ ಇರಬೇಕು. ಭಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯಗೂ ಭಜರಂಗದಳಕ್ಕೂ ಏನ್ ಸಂಬಂಧ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ನಾವು ಹನುಮಂತನ ಭಕ್ತರು, ನಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ
ಡಿಕೆ ಶಿವಕುಮಾರ್
Follow us on

ಬೆಂಗಳೂರು: ಬಜರಂಗದಳ(Bajarang Dal)ನಿಷೇಧ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು, ಇದು ಭಾರೀ ವಿವಾದಕ್ಕೀಡಾಗಿದೆ. ಬಿಜೆಪಿ ನಾಯಕರು ಹಾಗೂ ಹಿಂದೂಪರ ಸಂಘಟನೆಗಳು ಕಾಂಗ್ರೆಸ್​ ವಿರುದ್ಧ ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಭಜರಂಗದಳ ಬ್ಯಾನ್ ವಿಚಾರ ಕುರಿತು ‘ನಾವೂ ಆಂಜನೇಯ ಭಕ್ತರು. ಅವರು ಮಾತ್ರನಾ?, ಶಾಂತಿ ತೋಟ ಕದಲಬಾರದು. ಸೌಹಾರ್ದತೆ‌ ಇರಬೇಕು. ಭಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಭಜರಂಗದಳಕ್ಕೂ ಏನ್ ಸಂಬಂಧ. ಬಿಜೆಪಿ ಅವರು ಬಹಳ ಪ್ರವೋಕ್ ಮಾಡ್ತಿದ್ದಾರೆ. ಜನಕ್ಕೆ ಇದು ಅರ್ಥ ಅಗಿದೆ. ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ ಎಂದು ಡಿಕೆ ಶಿವಕುಮಾರ್(D. K. Shivakumar) ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ನಾವು ಹನುಮಂತ ಭಕ್ತರು, ಆಂಜನೇಯ ಬೇರೆ ಭಜರಂಗದಳ ಬೇರೆ, ಬಿಜೆಪಿ ಅವರು ಭಜರಂಗಿ ಎಂದು ಕ್ಯಾಂಪೇನ್ ಮಾಡೋದು ಬೇಡ. ಹೊಟ್ಟೆಗೆ ಏನ್ ಕೊಟ್ರಿ, ಉದ್ಯೋಗ ಏನ್ ಕೊಟ್ರಿ ಹೇಳಿ ಎಂದರು. ಇನ್ನು ಇದೇ ವೇಳೆ ನಾಳೆ(ಮೇ.4) ಹನುಮ ಚಾಲಿಸ ಪಠಣೆ ವಿಚಾರ ‘ಹನುಮ ಚಾಲಿಸ ನಾವು ದಿನಾ ಮಾಡ್ತೀವಿ. ಅವರೊಬ್ಬರೇನಾ ಮಾಡೋದು. ಹಿಂದಿನ RSS ಬೇರೆ, ಈಗಿನ RSS ಬೇರೆ ಎಂದಿದ್ದಾರೆ.

ಇದನ್ನೂ ಓದಿ:ಬಜರಂಗದಳ ನಿಷೇಧ: ಕಾಂಗ್ರೆಸ್​​ಗೆ​ ಚುರುಕು ಮುಟ್ಟಿಸಲು ಹಿಂದೂ ಸಂಘಟನೆಗಳಿಂದ ಹನುಮಾನ್ ಚಾಲೀಸಾ ಪಠಿಸಲು ಕರೆ

ಕುಂಬಳ ಕಾಯಿ ಕಳ್ಳ ಅಂದ್ರೆ, ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರಾ. ಮೊದಲು ನೀವು ದೇಶ ಉಳಿಸಿ, ಆಯನೂರು ಮಂಜುನಾಥ್ ಏನ್ ಹೇಳಿದ್ರು. ಈಶ್ವರಪ್ಪಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಹೇಳಿ? ನಮ್ಮ ಗ್ಯಾರಂಟಿ ಕಾರ್ಡ್ ಐತಿಹಾಸಿಕವಾದದ್ದು, ನಮ್ಮ ಗ್ಯಾರಂಟಿ ನಾವು ಕೊಟ್ಟೇ ಕೊಡ್ತೀವಿ. ಬಿಜೆಪಿ ಅವರು ಒಂದೊಂದು ವಿಷಯ ತೆಗೆದುಕೊಂಡು ಹೀಗೆ ಮಾಡ್ತಿದ್ದಾರೆ. ಇದೆಲ್ಲ ವರ್ಕ್ ಆಗೊಲ್ಲ. ನಾನು ಹಿಂದೂ, ನಾನು ಆಂಜನೇಯ ಭಕ್ತ, ರಾಮನ ಭಕ್ತ. ಬಿಜೆಪಿಯವರು ಏನು ಮಾಡಿಕೊಳ್ಳಲಿ. ನಮಗೆ 141ಸೀಟು ಬರೋದು ಪಕ್ಕಾ. ಮೇ.13 ಕ್ಕೆ ಫಲಿತಾಂಶ ಹೊರಗೆ ಬರುತ್ತೆ ಅವಾಗ ಗೊತ್ತಾಗುತ್ತೆ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:17 pm, Wed, 3 May 23