ಈ ಕ್ಷೇತ್ರದಲ್ಲಿ ಶುರುವಾಗಿದೆ ದೇಣಿಗೆ ರಾಜಕೀಯ; ಜೆಡಿಎಸ್​ ಅಭ್ಯರ್ಥಿಗೆ ಹೋದಲೆಲ್ಲ ಹರಿದು ಬರ್ತಿದೆ ಹಣ

ರಾಜ್ಯ ರಾಜಕೀಯದಲ್ಲಿ ರಣಕಣ ರಂಗೇರಿದೆ. ಅಖಾಡಕ್ಕೆ ಧುಮುಕಿರುವ ಅಭ್ಯರ್ಥಿಗಳು ಗೆಲ್ಲಲು ಹಣದ ಹೊಳೆಯನ್ನೆ ಹರಿಸುತ್ತಿದ್ದಾರೆ. ಮತದಾರರ ಮನವೊಲಿಸಲು ಅಭ್ಯರ್ಥಿಗಳು ಕೋಟಿ ಕೋಟಿ ಹಣ ಖರ್ಚು ಮಾಡುತ್ತಾರೆ. ಆದ್ರೆ, ಅದೊಂದು ಕ್ಷೇತ್ರದಲ್ಲಿ ಮಾತ್ರ ಆ ಪಕ್ಷದ ಅಭ್ಯರ್ಥಿಗೆ ಮತದಾರರೇ ಹಣ ಕೊಟ್ಟು ಆರ್ಶಿವಾದ ಮಾಡ್ತಿದ್ದಾರೆ. ಆದ್ರೆ, ಮತದಾರರ ದೇಣಿಗೆ ಹಣದ ರಾಜಕೀಯಕ್ಕೆ ಕಾಂಗ್ರೆಸ್ ಹೇಳುತ್ತಿರುವುದು ಬೇರೆ ನೋಡಿ. ಅಷ್ಟಕ್ಕೂ ಅದ್ಯಾವ ಕ್ಷೇತ್ರದಲ್ಲಿ ದೇಣಿಗೆ ಹಣದ ರಾಜಕೀಯ ಶುರುವಾಗಿದೆ ಅಂತೀರಾ? ಇಲ್ಲಿದೆ ನೋಡಿ.

ಈ ಕ್ಷೇತ್ರದಲ್ಲಿ ಶುರುವಾಗಿದೆ ದೇಣಿಗೆ ರಾಜಕೀಯ; ಜೆಡಿಎಸ್​ ಅಭ್ಯರ್ಥಿಗೆ ಹೋದಲೆಲ್ಲ ಹರಿದು ಬರ್ತಿದೆ ಹಣ
ಜೆಡಿಎಸ್​ ಅಭ್ಯರ್ಥಿ ನೇಮಿರಾಜ ನಾಯ್ಕ್
Follow us
|

Updated on: May 03, 2023 | 1:49 PM

ಬಳ್ಳಾರಿ: ವಿಧಾನಸಭೆ ಚುನಾವಣೆ(Karnataka Assembly Election) ಕಣ ರಂಗೇರಿದ್ದು, ಅಬ್ಬರದ ಪ್ರಚಾರಗಳಲ್ಲಿ ಉಭಯ ಪಕ್ಷಗಳು ಬ್ಯುಸಿ ಆಗಿದ್ದಾರೆ. ಅದರಂತೆ ಈ ಕ್ಷೇತ್ರದಲ್ಲಿ ಚುನಾವಣೆ ಅಂದ್ರೆ, ಮತದಾರರಿಗೆ ಹಣ ಹಂಚಿಕೆ. ಆಮಿಷ ಒಡ್ಡುವುದು ಸಹಜ.‌ ಆದ್ರೆ, ಈ ಕ್ಷೇತ್ರದಲ್ಲಿ ಅಭ್ಯರ್ಥಿ ಎಲ್ಲಿ ಪ್ರಚಾರಕ್ಕೆ ಹೋದರೂ, ಅಲ್ಲಿ ದೇಣಿಗೆ ಕೊಡ್ತಿರೋ ಮತದಾರರು. ಸಾವಿರ, ಲಕ್ಷಗಟ್ಟಲೆ ದೇಣಿಗೆ. ದೇಣಿಗೆ ಹಣದ ರಾಜಕೀಯ ಅನುಕಂಪದ ನಾಟಕ ಎಂದು ಕಾಂಗ್ರೆಸ್ ಕಿಡಿಕಾರಿದೆ. ಹೌದು ಜಿಲ್ಲೆಯ ಹಗರಿಬೊಮ್ಮನಹಳ್ಳಿ(Hagaribommanahalli) ಕ್ಷೇತ್ರದಲ್ಲಿ ಹೀಗೆ ದೇಣಿಗೆ ಹಣದ ರಾಜಕೀಯ ಶುರುವಾಗಿದೆ. ಈ ಅಭ್ಯರ್ಥಿಯ ಹೆಸರು ನೇಮಿರಾಜ ನಾಯ್ಕ್. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಈ ಹಿಂದೆ ಬಿಜೆಪಿಯಿಂದ ಶಾಸಕರಾಗಿದ್ದ ಇವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದ ಪರಿಣಾಮ ಕೊನೆ ಕ್ಷಣದಲ್ಲಿ ತೆನೆ ಹೊತ್ತು ಅಖಾಡಕ್ಕೆ ಇಳಿದಿದ್ದಾರೆ. ಇವರಿಗೆ ಬಿಜೆಪಿ ಟಿಕೆಟ್​ ತಪ್ಪಿಸಿ ಅನ್ಯಾಯ ಮಾಡಿದ್ರು ಅನ್ನೋ ಅನುಕಂಪವನ್ನೆ ಇಟ್ಟುಕೊಂಡು ಪ್ರಚಾರಕ್ಕೆ ಇಳಿದಿರುವ ನೇಮಿರಾಜ ನಾಯ್ಕ್ ಗೆ ಇದೀಗ ಕ್ಷೇತ್ರದ ಮತದಾರರು ವಿನೂತನವಾಗಿ ಸ್ಪಂದಿಸುತ್ತಿದ್ದಾರಂತೆ.

ಹೌದು ನೇಮಿರಾಜ ನಾಯ್ಕ್ ಪ್ರಚಾರಕ್ಕೆ ಹೋದ ಹಳ್ಳಿ ಹಳ್ಳಿಗಳಲ್ಲಿ ಮತದಾರರು. ಬೆಂಬಲಿಗರೇ ತಮ್ಮ ಕೈಲಾದಷ್ಟು ಹಣವನ್ನ ದೇಣಿಗೆಯಾಗಿ ನೀಡಿ ಬೆಂಬಲಿಸುತ್ತಿದ್ದಾರೆ. ನೇಮಿರಾಜ ನಾಯ್ಕ್ ಗೆ ರಾಯರಾಳ್ ತಾಂಡಾದ ಮತದಾರರು 4 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರಂತೆ. ಇನ್ನು ಜೆಡಿಎಸ್ ಅಭ್ಯರ್ಥಿಗೆ ಹಣ ದೇಣಿಗೆ ನೀಡಿದ ವಿಚಾರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭೀಮಾನಾಯ್ಕ್ ಕೆಂಡಾಮಂಡಲವಾಗಿದ್ದಾರೆ‌. ಜೆಡಿಎಸ್ ಅಭ್ಯರ್ಥಿ ಮೊಸಳೆ ಕಣ್ಣೀರು ಸುರಿಸಿ ಡ್ರಾಮಾ ಮಾಡ್ತಿದ್ದಾರೆ. ಪ್ರಚಾರಕ್ಕೂ ಮುನ್ನ ಹಳ್ಳಿ ಹಳ್ಳಿಗೆ ಹಣ ಕಳುಹಿಸಿ ದೇಣಿಗೆ ನಾಟಕ ಮಾಡ್ತಿದ್ದಾರೆ. ರಾಯರಾಳ್ ತಾಂಡದ ಮತದಾರರಿಂದ 4 ಲಕ್ಷ ರೂಪಾಯಿ ದೇಣಿಗೆ ಕೇವಲ ನಾಟಕವಾಗಿದೆ. ಮತದಾರರಿಗೆ ಮೊದಲು ಹಣ ಕಳುಹಿಸಿ ಅದನ್ನ ದೇಣಿಗೆ ರೂಪದಲ್ಲಿ ಪಡೆಯುತ್ತಿದ್ದಾರೆ. ಬೆಂಬಲಿಗರು ಸಾವಿರ, ಎರಡೂ ಸಾವಿರ ಹಣ ಕೊಟ್ಟಿರಬಹುದು. ಲಕ್ಷಾಂತರ ರೂಪಾಯಿ ಹಣ ದೇಣಿಗೆ ಕೊಡಲು ಸಾಧ್ಯವಿಲ್ಲ. ಅನುಕಂಪ ಪಡೆಯಲು ದೇಣಿಗೆ ನಾಟಕ ಶುರು ಮಾಡಿದ್ದಾರೆಂದು ಕೈ ಅಭ್ಯರ್ಥಿ ಭೀಮಾನಾಯ್ಕ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಇದನ್ನೂ ಓದಿ:ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗ ಕೆಂಡ; ರಾಜಕೀಯ ಮುಖಂಡರಿಗೆ ನೀಡಿತು ಖಡಕ್ ಎಚ್ಚರಿಕೆ

ಇದೂವರೆಗೂ ಆರೋಪ ಪ್ರತ್ಯಾರೋಪ ಮಾಡ್ತಾ ರಾಜಕೀಯ ಮಾಡುತ್ತಿದ್ದ ನೇಮಿರಾಜ ಮತ್ತು ಭೀಮಾನಾಯ್ಕ್ ಮಧ್ಯೆ ಇದೀಗ ಹಣದ ದೇಣಿಗೆ ರಾಜಕೀಯ ಕಿತ್ತಾಟ ಶುರುವಾಗಿದೆ. ಅಲ್ಲದೇ ಮತದಾರರು ದೇಣಿಗೆ ರೂಪದಲ್ಲಿ ಹಣ ಕೊಡ್ತಿರೋದು ನಿಜವಾ? ಇಲ್ಲ ಕಾಂಗ್ರೆಸ್​ನವರು ಹೇಳ್ತಿರೋ ಹಾಗೆ ದೇಣಿಗೆ ನಾಟಕವಾ? ಅನ್ನೋದು ಮೇ 13ಕ್ಕೆ ತಿಳಿಯಲಿದೆ.

ವರದಿ: ವಿರೇಶ್​ ದಾನಿ ಟಿವಿ9 ಬಳ್ಳಾರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ