Bellary City Election Result 2023: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಹೈ ವೋಲ್ಟೇಜ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಗೆಲುವು
Bellary City Assembly Election Result 2023 Live Counting Updates: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸೋಮಶೇಖರ್ ರೆಡ್ಡಿ, KRPP ಯಿಂದ ಅರುಣಾ ಲಕ್ಷ್ಮಿ ಹಾಗೂ ಕಾಂಗ್ರೆಸ್ನಿಂದ ಭರತ್ ರೆಡ್ಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.
Bellary City Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಹೈ ವೋಲ್ಟೇಜ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಗಣಿಜಿಲ್ಲೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ (Bellary City Assembly Constituency) ಗಣಿದಣಿಗಳ ಕುಟುಂಬದೊಳಗಿನ ರಾಜಕಾರಣ ಜನರ ಗಮನ ಸೆಳೆದಿದೆ. ಬಳ್ಳಾರಿ ನಗರದಲ್ಲಿ ಸೊಸೆ ಮತ್ತು ಬಾವನ ನಡುವೆಯೇ ಫೈಟ್ ನಡೆದಿದ್ದು, ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ತಮ್ಮ ಬಾವ ಸೋಮಶೇಖರ್ ರೆಡ್ಡಿ ವಿರುದ್ಧವೇ ಕಣಕ್ಕಿಳಿದಿರುವುದು ಫ್ಯಾಮಿಲಿ ಫೈಟ್‌ಗೆ ಸಾಕ್ಷಿಯಾಗಿದೆ.
ಬಿಜೆಪಿಯಿಂದ ದೂರವಾದ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಅವರ ತವರೂರು ಬಳ್ಳಾರಿ ನಗರ ಕ್ಷೇತ್ರದಲ್ಲಿ ಸಹೋದರ ಹಾಗೂ ಬಿಜೆಪಿಯ ಹಾಲಿ ಶಾಸಕ ಜಿ ಸೋಮಶೇಖರ್ ರೆಡ್ಡಿ ಅವರ ವಿರುದ್ಧ ತಮ್ಮ ಪತ್ನಿ ಅರುಣಾ ಲಕ್ಷ್ಮೀ ಅವರನ್ನು ಕೆಆರ್‌ಪಿಪಿಯಿಂದ ಕಣಕ್ಕಿಳಿಸಲಿರುವುದು ಹೈ ವೋಲ್ಟೇಜ್ ಕ್ಷೇತ್ರದಲ್ಲಿ ಭಾರಿ ಕಾಳಗಕ್ಕೆ ಮುನ್ನಿಡಿ ಬರೆದಿದೆ. ಇದುವರೆಗೆ ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಪೈಪೋಟಿಯ ಕಣವೀಗ ಕೆಆರ್‌ಪಿಪಿ ಮೂಲಕ ತ್ರೀಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಇನ್ನು ಕಾಂಗ್ರೆಸ್ ಪಕ್ಷದಿಂದ ನಾರಾ ಭರತ್ ರೆಡ್ಡಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ, ಜೊತೆಗೆ ಕ್ಷೇತ್ರದೆಲ್ಲೆಡೆ ಬಾರಿ ಪ್ರಚಾರವನ್ನು ಮಾಡಿದ್ದರು.
Published On - 3:53 am, Sat, 13 May 23