ಮಂಗಳೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ( Belthangady Assembly Constituency) ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಬಾರಿ ಪೈಪೋಟಿ ನಡೆದಿದ್ದು. ಇದೀಗ ಬಿಜೆಪಿಯಿಂದ ಹರೀಶ್ ಪೂಂಜ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹರೀಶ್ ಪೂಂಜ ಅವರಿಗೆ ಭಾರಿ ಪೈಪೋಟಿ ನೀಡಿದ್ದು ರಕ್ಷಿತ್ ಶಿವರಾಂ ಅವರು ಸೋತಿದ್ದಾರೆ. ಹರೀಶ್ ಪೂಂಜ ಅವರು ಭಾರಿ ಮತಗಳಿಂದ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಚುನಾವಣೆ ವಿಧಾನ ಸಭಾ ಕ್ಷೇತ್ರವಾದ ಬೆಳ್ತಂಗಡಿಯಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನೂ ಹರೀಶ್ ಪೂಂಜಾ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದು ರಕ್ಷಿತ್ ಶಿವರಾಂ ಸೋತಿದ್ದಾರೆ. ರಕ್ಷಿತ್ ಶಿವರಾಮ್ ಅವರು ಬೆಳ್ತಂಗಡಿಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು. ಈ ಬಾರಿ ಪ್ರಬಲ ಅಭ್ಯರ್ಥಿಯಾಗಿದ್ದರು. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಹೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಶಿವರಾಂ ಕಡಿಮೆ ಅಂತರದಲ್ಲಿ ಸೋತಿದ್ದಾರೆ.
ಈ ಮಧ್ಯೆ ಎಸ್.ಡಿ.ಪಿ.ಐ. ಯಿಂದ ಅಕ್ಬರ್ ಸೋತಿದ್ದಾರೆ. ತುಳುನಾಡ ಪಕ್ಷದ ಅಭ್ಯರ್ಥಿಯಾಗಿ ಶೈಲೇಶ್ ಆರ್.ಜೆ, ರ್ವೋದಯ ಕರ್ನಾಟಕ ಪಕ್ಷವೂ ಆದಿತ್ಯ ನಾರಾಯಣ ಕಲ್ಲಾಜೆ ಕೂಡ ಸೋತಿದ್ದಾರೆ. ಇನ್ನೂ ಜೆಡಿಎಸ್ನಿಂದ ಅಶ್ರಫ್ ಅಲಿ ಕುಯ್ ಸೋತಿದ್ದಾರೆ.
Published On - 12:34 pm, Sat, 13 May 23