Gangavati Election Winner 2023: ಗಂಗಾವತಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಜನಾರ್ದನ ರೆಡ್ಡಿಗೆ ಬಾರಿ ಗೆಲುವು
Janardhan Reddy: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಸಂಸ್ಥಾಪಕ ಜನಾರ್ದನ ರೆಡ್ಡಿ ಬಾರಿ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರ ಬಿದ್ದಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ (Gangawati Assembly Constituency) ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಸಂಸ್ಥಾಪಕ ಜನಾರ್ದನ ರೆಡ್ಡಿ ಬಾರಿ ಗೆಲುವು ಸಾಧಿಸಿದ್ದಾರೆ. ಜನಾರ್ದನ ರೆಡ್ಡಿ ಸ್ಪರ್ಧೆಯಿಂದ ಗಂಗಾವತಿ ಪ್ರಮುಖ ಕಣಗಳಲ್ಲಿ ಒಂದಾಗಿತ್ತು. ಅಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಮತ್ತು ಕಾಂಗ್ರೆಸ್‌ನ ಇಕ್ವಾಲ್ ಅನ್ಸಾರಿ ಕಣದಲ್ಲಿದ್ದರು.
42547 ಮತಗಳಿಂದ ಜನಾರ್ಧನ ರೆಡ್ಡಿ ಬಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಇಕ್ವಾಲ್ ಅನ್ಸಾರಿ 40106 ಮತಗಳಿಂದ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಬಿಜೆಪಿಯ ಪರಣ್ಣ ಮುನವಳ್ಳಿ 18744 ಗಳಿಂದ ಹೀನಾಯ ಸೋಲು ಸಾಧಿಸಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಕೆಆರ್‌ಪಿಪಿ ಅಸ್ತಿತ್ವಕ್ಕೆ ಬಂದ ಬಳಿಕ ರಾಜಕೀಯ ಪೈಪೋಟಿಯಲ್ಲಿ ಈ ಕ್ಷೇತ್ರ ಜನರ ಗಮನ ಸೆಳೆದಿತ್ತು. ತೀವ್ರ ಪೈಪೋಟಿ, ಜೊತೆಗೆ ಅಷ್ಟೇ ಕುತೂಹಲಕ್ಕೂ ಎಡೆ ಮಾಡಿಕೊಟ್ಟಿತ್ತು.
ರೆಡ್ಡಿ ಅವರನ್ನು ಶತಾಯು ಗತಾಯು ಸೋಲಿಸಲೇಬೇಕು ಎಂದು ತಂತ್ರ ರೂಪಿಸಿ ಪರಣ್ಣ ಮತ್ತು ಅನ್ಸಾರಿ ಬಾರಿ ಪ್ರಮಾಣದ ಪ್ರಚಾರ ಮಾಡಿದ್ದರು. ‘ಹೊರಗಿನವರಿಗಿಂತ ಕ್ಷೇತ್ರದಲ್ಲೇ ಇರುವವರ ಮೇಲೆ ನಂಬಿಕೆಯಿಡಿ. ಸುಲಭವಾಗಿ ಸಂಪರ್ಕಕ್ಕೆ ಸಿಗುವವರಿಗೆ ಆದ್ಯತೆ ನೀಡಿ’ ಎಂದು ಮತದಾರ ಬಳಿ ಮತಯಾಚಿಸಿದ್ದರು. ಅಂಜನಾದ್ರಿ ಸೇರಿ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಭರವಸೆ ನೀಡಿರುವ ಬಿಜೆಪಿ ನಾಯಕರು, ‘ಹನುಮ ಜನಿಸಿದ ಕ್ಷೇತ್ರದಲ್ಲಿ ಹಿಂದೂ ಸಮಾಜದ ನಾಯಕನೇ ಶಾಸಕನಾಗಿ ಆಯ್ಕೆ ಆಗಬೇಕು’ ಎಂದು ಮತದಾರರ ಮೇಲೆ ಪ್ರಭಾವಬೀರಲು ಮುಂದಾಗಿದ್ದರೆ.
Published On - 12:27 pm, Sat, 13 May 23