Belthangady Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ (Belthangady Assembly Constituency) ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಟ್ ನಡೆಯಲಿದೆ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಕಣಕ್ಕಿಳಿದಿದ್ದಾರೆ. ಹರೀಶ್ ಪೂಂಜ ಅವರು ಇದು ಎರಡನೇ ಬಾರಿ ಕರ್ನಾಟಕ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ,ವಸಂತ್ ಬಂಗೇರ ಅವರ ಮುಂದೆ ಬಾರಿ ಬಹುಮತದಿಂದ ಗೆದ್ದಿದ್ದರು, ಇದೀಗ ಕಾಂಗ್ರೆಸ್ ಹೊಸ ಅಭ್ಯರ್ಥಿ ರಕ್ಷಿತ್ ಶಿವರಾಮ್ ಮುಂದೆ ಸ್ಪರ್ಧಿಸಿದ್ದಾರೆ. ಆದರೆ ಈ ಬಾರಿ ಬಿಗ್ ಫೈಟ್ ನಡೆಯುತ್ತಿದ್ದು. ಈ ಬಾರಿ ಯಾರ ಪಾಲಿಗೆ ವಿಜಯಲಕ್ಷ್ಮೀ ಒಳಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ. ಹರೀಶ್ ಪೂಂಜ ವಿರುದ್ಧ ಪರ-ವಿರೋಧ ಅಲೆ ಎರಡು ಇದೆ. ಆದರೆ ಫಲಿತಾಂಶ ನಂತರವೇ ಹರೀಶ್ ಪೂಂಜ ಭವಿಷ್ಯ ನಿರ್ಧಾರವಾಗಲಿದೆ.
ಇನ್ನೂ ಹರೀಶ್ ಪೂಂಜಾ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವುದು ರಕ್ಷಿತ್ ಶಿವರಾಂ, ಒಂದು ರೀತಿಯಲ್ಲಿ ರಕ್ಷಿತ್ ಶಿವರಾಮ್ ಪರ ಅಲೆಗಳು ಇದೆ. ರಕ್ಷಿತ್ ಶಿವರಾಮ್ ಅವರು ಬೆಳ್ತಂಗಡಿಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು. ಈ ಬಾರಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಇದೀಗ ಬಂಟ-ಬಿಲ್ಲವ ಎಂಬ ವಾದಗಳು ಶುರುವಾಗಿದ್ದು ಇಬ್ಬರ ನಡುವೆ ಭಾರೀ ಪೈಪೋಟಿಗೆ ಕಾರಣವಾಗಿದೆ. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಹೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಶಿವರಾಂ ಅವರಿಗೆ ಬೆಳ್ತಂಗಡಿಯಲ್ಲಿ ಪ್ರಬಲ ಬೆಂಬಲ ಇದೆ. ಆದರೆ ಹರೀಶ್ ಪೂಂಜ ಅವರ ಜನಪ್ರಿಯತೆ ಮುಂದೆ ರಕ್ಷಿತ್ ಶಿವರಾಂ ಗೆಲ್ಲಬಹುದ ಎಂದು ಕಾದು ನೋಡಬೇಕಿದೆ. ಹರೀಶ್ ಪೂಂಜ- ರಕ್ಷಿತ್ ಶಿವರಾಂ ನಡುವೆ ಹಲವು ಸಾಮ್ಯತೆಗಳಿವೆ. ಇಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನ ಯುವಕರು. ಹಾಗಾಗಿ ಯುವ ಮತಗಳು ಯಾರಿಗೆ ಎಂಬುದು ಕೂಡ ಪ್ರಶ್ನೆಯಾಗಿ ಉಳಿದಿದೆ.
ಈ ಮಧ್ಯೆ ಎಸ್.ಡಿ.ಪಿ.ಐ. ಯಿಂದ ಅಕ್ಬರ್ ಬೆಳ್ತಂಗಡಿಯನ್ನು ಅಭ್ಯರ್ಥಿಯೆಂದು ಘೋಷಿಸಿದೆ. ತುಳುನಾಡ ಪಕ್ಷದ ಅಭ್ಯರ್ಥಿಯಾಗಿ ಶೈಲೇಶ್ ಆರ್.ಜೆ, ರ್ವೋದಯ ಕರ್ನಾಟಕ ಪಕ್ಷವೂ ಆದಿತ್ಯ ನಾರಾಯಣ ಕಲ್ಲಾಜೆಯನ್ನು ಅಭ್ಯರ್ಥಿಯಾಗಿಸಿದೆ. ಇನ್ನೂ ಜೆಡಿಎಸ್ನಿಂದ ಅಶ್ರಫ್ ಅಲಿ ಕುಯ್ ಸ್ಪರ್ಧಿಸಲಿದ್ದಾರೆ.
ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ, ಪಕ್ಷೇತರ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.