ಚುನಾವಣೆ ಹೊಸ್ತಿಲಲ್ಲೇ ಸಿದ್ದರಾಮಯ್ಯ ಆಪ್ತನ ಸೊಸೆಗೆ ಡಿಸಿ ಬಿಗ್​ ಶಾಕ್, ಎಲೆಕ್ಷನ್​ಗೆ ನಿಲ್ಲುವ ಆಸೆ ನುಚ್ಚುನೂರು

|

Updated on: Apr 11, 2023 | 1:18 PM

ಚುನಾವಣೆಗೆ ನಿಲ್ಲಲು ಮುಂದಾಗಿದ್ದ ಸಿದ್ದರಾಮಯ್ಯನವರ ಆಪ್ತನ ಸೊಸೆಗೆ ಬೀದರ್ ಜಿಲ್ಲಾಧಿಕಾರಿ ಬಿಗ್ ಶಾಕ್ ಕೊಟ್ಟಿದ್ದಾರೆ. ಇದರಿಂದ ಚುನಾವಣೆ ಕನಸು ಭಗ್ನವಾಗಿದೆ.

ಚುನಾವಣೆ ಹೊಸ್ತಿಲಲ್ಲೇ ಸಿದ್ದರಾಮಯ್ಯ ಆಪ್ತನ ಸೊಸೆಗೆ ಡಿಸಿ ಬಿಗ್​ ಶಾಕ್, ಎಲೆಕ್ಷನ್​ಗೆ ನಿಲ್ಲುವ ಆಸೆ ನುಚ್ಚುನೂರು
ಸಿದ್ದರಾಮಯ್ಯ, ಎಂ ಈರಣ್ಣ
Follow us on

ರಾಯಚೂರು: ಜಿಲ್ಲೆಯ ಮಾನ್ವಿ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಗೆಲುವಿಗಾಗಿ ಇನ್ನಿಲ್ಲದ ತಂತ್ರ ರಣತಂತ್ರಗಳನ್ನು ಹೆಣೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಾನ್ವಿ ಚುನಾವಣೆ ಕಣ ರಂಗೇರತೊಡಗಿದೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ(Siddaramaiah) ಪರಮಾಪ್ತ ಗುತ್ತಿಗೆದಾರ ಎಂ.ಈರಣ್ಣ ಅವರ ಸೊಸೆಗೆ ಸಂಕಷ್ಟ ಎದುರಾಗಿದೆ. ಎಎಸ್​ಟಿ ಮೀಸಲು ಕ್ಷೇತ್ರವಾದ ಮಾನ್ವಿ(Manvi) ಕ್ಷೇತ್ರದಿಂದ 2018ರ ಚುನಾವಣೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎಂ ಈರಣ್ಣ ಸೊಸೆ ಡಾ ಡಾ.ತುನುಶ್ರೀ ಸ್ಪರ್ಧಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್​ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದರು. ಈ ಬಾರಿಯೂ ಸಹ ಡಾ.ತನುಶ್ರೀ ಅವರನ್ನು ಕಣಕ್ಕಿಳಿಲು ಎಂ ಈರಣ್ಣ ಪ್ಲಾನ್ ಮಾಡಿದ್ದಾರೆ. ಆದ್ರೆ, ಡಾ.ತನುಶ್ರೀ ಅವರಎಸ್ಟಿ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಬೀದರ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರಿಂದ ಈ ಬಾರಿ ಚುನಾವಣೆ ಸೊಸೆಯನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದ ಸಿದ್ದರಾಮಯ್ಯನವರ ಆಪ್ತ ಈರಣ್ಣಗೆ ವಿಘ್ನ ಎದುರಾಗಿದೆ.

ಮೂಲತಃ ಬೀದರ್ ಜಿಲ್ಲೆಯವರಾಗಿರುವ ತನುಶ್ರೀ, ಕುರುಬ ಸಮುದಾಯದವರು. ಈ ಹಿನ್ನೆಲೆಯಲ್ಲಿ​ತನುಶ್ರೀ ಅವರು ಬೀದರ್​ ಜಿಲ್ಲಾಡಳಿತದಿಂದ ಎಸ್ಟಿ ಪ್ರಮಾಣ ಪಡೆದುಕೊಂಡು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್​ಟಿ ಮೀಸಲು ಕ್ಷೇತ್ರವಾದ ಮಾನ್ವಿಯಿಂದ ಸ್ಪರ್ಧೆ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ವಿರೋಧಿಸಿ ನಕಲಿ ಜಾತಿ ಪ್ರಮಾಣದ ಬಗ್ಗೆ ತನಿಖೆ ನಡೆಸುವಂತೆ ಹೈದ್ರಾಬಾದ್ ಕರ್ನಾಟಕ ವಾಲ್ಮೀಕಿ ಸಂಘ ಪ್ರಕರಣ ದಾಖಲಿಸಿತ್ತು. ಆದರೂ ತನುಶ್ರೀ ಅವರು ಹೈಕೋರ್ಟ್​ನಲ್ಲಿ ದಾವೆ ಹೂಡಿ 2018ರ ಚುನಾವಣೆ ಎದುರಿಸಿ 30 ಸಾವಿರಕ್ಕೂ ಹೆಚ್ಚು ಮತಗಳನ್ನ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಮತ್ತೆ ಮಾನ್ವಿಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಕಣಕ್ಕಿಳಿಯಲು ತನುಶ್ರೀ ಮುಂದಾಗಿದ್ದರು. ಆದ್ರೆ, ಬೀದರ್​ ಜಿಲ್ಲಾಧಿಕಾರಿ ತನುಶ್ರೀ ಅವರಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಆದೇಶ ಆದೇಶ ಹೊರಡಿಸಿದ್ದಾರೆ. ಇದರಿಂದ ಈ ಬಾರಿ ತನುಶ್ರೀ ಚುನಾವಣೆಗೆ ನಿಲ್ಲದಂತಾಗಿದೆ.

ಈಗ ಮಾನ್ವಿಯಲ್ಲಿ ಜೆಡಿಎಸ್​ನಿಂದ ಹಾಲಿ ಶಾಸಕ ರಾಜವೆಂಕಟಪ್ಪ ನಾಯಕ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್​ ಅಭ್ಯರ್ಥಿ  ಯಾರು ಎಂದು ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್​​ನಿಂದ ರಾಯಚೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿವಿ ನಾಯಕ್​ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್​ ಚಿಂತನೆ ನಡೆಸಿದೆ. ಆದ್ರೆ, ಕಾರ್ಯಕರ್ತರು ಇದಕ್ಕೆ ವಿರೋದಿಸುತ್ತಿದ್ದು, ಸ್ಥಳೀಯರಿಗೆ ಟಿಕೆಟ್​ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ