AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಘೋಷಣೆ ಮುನ್ನವೇ ಸಾಮಗ್ರಿ ವಶಕ್ಕೆ ಪಡೆದಿದ್ದ ಚುನಾವಣಾ ಅಧಿಕಾರಿಗಳ ಕ್ರಮ ರದ್ದುಗೊಳಿಸಿ ಹೈಕೋರ್ಟ್ ಆದೇಶ

ಚುನಾವಣೆ ಘೋಷಣೆಗೆ ಮುನ್ನ ಶೋಧನೆಯ ಅಧಿಕಾರವಿಲ್ಲ ಎಂದು ಹೇಳಿ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದ ಚುನಾವಣಾ ಅಧಿಕಾರಿಗಳ ಕ್ರಮ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಚುನಾವಣೆ ಘೋಷಣೆ ಮುನ್ನವೇ ಸಾಮಗ್ರಿ ವಶಕ್ಕೆ ಪಡೆದಿದ್ದ ಚುನಾವಣಾ ಅಧಿಕಾರಿಗಳ ಕ್ರಮ ರದ್ದುಗೊಳಿಸಿ ಹೈಕೋರ್ಟ್ ಆದೇಶ
ಕರ್ನಾಟಕ ಹೈಕೋರ್ಟ್
ರಮೇಶ್ ಬಿ. ಜವಳಗೇರಾ
|

Updated on: Apr 11, 2023 | 3:39 PM

Share

ಬೆಂಗಳೂರು: ಚುನಾವಣೆ ಘೋಷಣೆ ಮುನ್ನವೇ ಸಾಮಗ್ರಿ ವಶಕ್ಕೆ ಪಡೆದಿದ್ದ ಚುನಾವಣಾ ಅಧಿಕಾರಿಗಳ ಕ್ರಮ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಚುನಾವಣೆಗೂ ಮುನ್ನವೇ ಅಂದರೆ ಮಾರ್ಚ್ 19 ರಂದು ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು ಆಹಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದರು. ಇದರ ವಿರುದ್ಧ ಇಷ್ತಿಯಾಕ್ ಅಹಮದ್ ಎಂಬುವರು ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ​, ಚುನಾವಣೆ ಘೋಷಣೆಗೆ ಮುನ್ನ ಶೋಧನೆಯ ಅಧಿಕಾರವಿಲ್ಲ ಎಂದು ಹೇಳಿ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದ ಚುನಾವಣಾ ಅಧಿಕಾರಿಗಳ ಕ್ರಮ ರದ್ದುಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ: ಮಾದರಿ ನೀತಿ ಸಂಹಿತೆ ಜಾರಿ: 10 ದಿನಗಳಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತು ಜಪ್ತಿ

ಮಾರ್ಚ್ 19 ರಂದು ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣೆಗೆ ದಿನಾಂಕ ಘೋಷಣೆ ಮುನ್ನವೇ ಚುನಾವಣಾ ಅಧಿಕಾರಿಗಳು ಆಹಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದರು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಇಷ್ತಿಯಾಕ್ ಅಹಮದ್, ಚುನಾವಣೆಗೆ ಇನ್ನೂ ದಿನಾಂಕ ಪ್ರಕಟವಾಗಿಲ್ಲ ಅದು ಹೇಗೆ ಚುನಾವಣಾಧಿಕಾರಿಗಳು ಆಹಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಂದು ಪ್ರಶ್ನಿಸಿದ್ದರು.

ಮಾರ್ಚ್ 29ರಂದು ಕೇಂದ್ರ ಚುನಾವಣೆ ಆಯೋಗವು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿತ್ತು. ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಇದು ಮೇ.10ರಂದು ಚುನಾವಣೆ ಮುಗಿಯುವವರೆಗೆ ಜಾರಿಯಲ್ಲಿರಲಿದೆ.

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ