ಕರ್ನಾಟಕ ಚುನಾವಣಾ ಕಣದಲ್ಲಿರುವ ಕುಟುಂಬ ರಾಜಕಾರಣಿಗಳು
ಕರ್ನಾಟಕ ವಿಧಾನಸಭಾಗೆ ಮತದಾನ ಮೇ 10 ರಂದು ಒಂದೇ ಹಂತದಲ್ಲಿ ನಡೆದಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಮೂರು ಪಕ್ಷಗಳಲ್ಲಿ ಕುಟುಂಬ ರಾಜಕಾರಣಿಗಳಿಗೆ ಮಣೆ ಹಾಕಲಾಗಿದೆ. ಯಾರೆಲ್ಲ? ಇಲ್ಲಿದೆ ಮಾಹಿತಿ.
ಕರ್ನಾಟಕ ವಿಧಾನಸಭಾಗೆ ಮತದಾನ ಮೇ 10 ರಂದು ಒಂದೇ ಹಂತದಲ್ಲಿ ನಡೆದಿದ್ದು, ಮೇ 13 ರಂದು ಫಲಿತಾಂಶ (Karnataka Assembly Elections 2023 Result) ಹೊರಬೀಳಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ (BJP) ಕಾಂಗ್ರೆಸ್ (Congress) ನಡುವೆ ತೀವ್ರ ಪೈಪೋಟಿ ಇದ್ದು, ಕೆಲವೊಂದು ಫಲಿತಾಂಶಗಳ ಪ್ರಕಾರ ಜೆಡಿಎಸ್ (JDS) ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. ಅದಾಗ್ಯೂ, ನಾವು ಈ ಬಾರಿಯ ಕುಟುಂಬ ರಾಜಕಾರಣವನ್ನು (Family Politics) ನೋಡುವುದಾದರೆ ಮೂರು ಪ್ರಮುಖ ಪಕ್ಷಗಳು ರಾಜಕೀಯ ಹಿನ್ನಲೆಯುಳ್ಳ ಕುಟುಂಬಗಳ ಸದ್ಯರಿಗೆ ಕೆಲವೊಂದು ಕ್ಷೇತ್ರಗಳಲ್ಲಿ ಮಣೆ ಹಾಕಿವೆ. ಹಾಗಾದರೆ ಯಾವ ಕ್ಷೇತ್ರದಲ್ಲಿ ಯಾವ ಕುಟುಂಬ ರಾಜಕಾರಣಿ ಸ್ಪರ್ಧಿಸಿದ್ದಾರೆ? ಇಲ್ಲಿದೆ ಮಾಹಿತಿ.
- ಪ್ರಿಯಾಂಕ್ ಖರ್ಗೆ- ಮಲ್ಲಿಕಾರ್ಜುನ ಅವರ ಪುತ್ರ (ಕಾಂಗ್ರೆಸ್)
- ಪ್ರಕಾಶ್ ಖಂಡ್ರೆ- ಈಶ್ವರ್ ಖಂಡ್ರೆ ತಮ್ಮ (ಕಾಂಗ್ರೆಸ್)
- ಅಜಯ್ ಸಿಂಗ್- ಮಾಜಿ ಸಿಎಂ ಧರಂ ಸಿಂಗ್ ಪುತ್ರ (ಕಾಂಗ್ರೆಸ್)
- ವಿಜಯ್ ಸಿಂಗ್- ಮಾಜಿ ಸಿಎಂ ಧರಂ ಸಿಂಗ್ ಪುತ್ರ (ಕಾಂಗ್ರೆಸ್)
- ಸತೀಶ್ ಜಾರಕಿಹೊಳಿ- ರಮೇಶ್ ಜಾರಕಿಹೊಳಿ ಸಹೋದರ (ಕಾಂಗ್ರೆಸ್)
- ರಮೇಶ್ ಜಾರಕಿಹೊಳಿ- ಸತೀಶ್ ಜಾರಕಿಹೊಳಿ ಸಹೋದರ (ಬಿಜೆಪಿ)
- ಗಣೇಶ್ ಹುಕ್ಕೇರಿ- ಪ್ರಕಾಶ್ ಹುಕ್ಕೇರಿ ಮಗ (ಕಾಂಗ್ರೆಸ್)
- ಡಿಕೆ ಸುರೇಶ್- ಡಿಕೆ ಶಿವಕುಮಾರ್ ಸಹೋದರ (ಕಾಂಗ್ರೆಸ್)
- ಡಿಕೆ ಶಿವಕುಮಾರ್- ಡಿಕೆ ಸುರೇಶ್ ಸಹೋದರ (ಕಾಂಗ್ರೆಸ್)
- ಕುಣಿಗಲ್ ರಂಗನಾಥ್- ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಸಂಬಂಧಿ (ಕಾಂಗ್ರೆಸ್)
- ಸೌಮ್ಯ ರೆಡ್ಡಿ- ರಾಮಲಿಂಗಾರೆಡ್ಡಿ ಪುತ್ರಿ (ಕಾಂಗ್ರೆಸ್)
- ಬಿವೈ ವಿಜಯೇಂದ್ರ- ಬಿಎಸ್ ಯಡಿಯೂರಪ್ಪ ಪುತ್ರ (ಬಿಜೆಪಿ)
- ಬಸವರಾಜ ಬೊಮ್ಮಾಯಿ- ಮಾಜಿ ಸಿಎಂ ಎಸ್ಆರ್ ಬೊಮ್ಮಾಯಿ ಪುತ್ರ (ಬಿಜೆಪಿ)
- ರವಿ ಸುಬ್ರಹ್ಮಣ್ಯ- ಸಂಸದ ತೇಜಸ್ವಿ ಸೂರ್ಯ ಸಂಬಂಧಿ (ಬಿಜೆಪಿ)
- ಜ್ಯೋತಿ ಗಣೇಶ್- ಸಂಸದ ಬಸವರಾಜ್ ಪುತ್ರಿ (ಬಿಜೆಪಿ)
- ನಿಖಿಲ್ ಕತ್ತಿ- ಉಮೇಶ್ ಕತ್ತಿ ಮಗ (ಬಿಜೆಪಿ)
- ಹರ್ಷವರ್ಧನ್- ಶ್ರೀನಿವಾಸ್ ಪ್ರಸಾದ್ ಅಳಿಯ (ಬಿಜೆಪಿ)
- ಶಶಿಕಲಾ ಜೊಲ್ಲೆ- ಸಂಸದ ಅಣ್ಣಾಸಾಹೇಬ ಪತ್ನಿ (ಬಿಜೆಪಿ)
- ಅವಿನಾಶ್ ಜಾಧವ್- ಸಂಸದ ಉಮೇಶ್ ಜಾಧವ್ ಮಗ (ಬಿಜೆಪಿ)
- ಕುಮಾರ್ ಬಂಗಾರಪ್ಪ- ಮಾಜಿ ಸಿಎಂ ಎಸ್ ಬಂಗಾರಪ್ಪ ಮಗ (ಬಿಜೆಪಿ)
- ಅರವಿಂದ್ ಬೆಲ್ಲದ್- ಚಂದ್ರಕಾಂತ್ ಬೆಲ್ಲದ್ ಪುತ್ರ (ಬಿಜೆಪಿ)
- ಸಿದ್ದಾರ್ಥ್ ಸಿಂಗ್- ಆನಂದ್ ಸಿಂಗ್ ಪುತ್ರ (ಬಿಜೆಪಿ)
- ಹೆಚ್ಡಿ ಕುಮಾರಸ್ವಾಮಿ- ಹೆಚ್ಡಿ ದೇವೇಗೌಡರ ಪುತ್ರ (ಜೆಡಿಎಸ್)
- ಹೆಚ್ಡಿ ರೇವಣ್ಣ- ಹೆಚ್ಡಿ ದೇವೇಗೌಡರ ಪುತ್ರ (ಜೆಡಿಎಸ್)
- ನಿಖಿಲ್ ಕುಮಾರಸ್ವಾಮಿ- ಹೆಚ್ಡಿ ಕುಮಾರಸ್ವಾಮಿ ಪುತ್ರ (ಜೆಡಿಎಸ್)
ಇವರಲ್ಲದೆ ಇನ್ನೂ ಕೆಲವು ರಾಜಕಾರಣಿಗಳ ಕುಟುಂಬದ ಸದಸ್ಯರು ಕರ್ನಾಟಕ ಚುನಾವಣಾ ಅಖಾಡದಲ್ಲಿ ಇದ್ದಾರೆ. ಇನ್ನು ಕೆಲವು ಸದಸ್ಯರಿಗೆ ಟಿಕೆಟ್ ಸಿಗದಿದ್ದರೂ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಕೆಲವೊಂದು ಕ್ಷೇತ್ರಗಳು ಕುಟುಂಬ ರಾಜಕಾರಣದ ಕಪಿಮುಷ್ಠಿಯಲ್ಲಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Thu, 11 May 23