AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಾಜಿನಗರದಲ್ಲಿ ಎಸ್ ಸುರೇಶ್​ ಕುಮಾರ್​ಗೆ ಸಿಕ್ಕ ಈ ಶೇಷನ್ ಯಾರು?

ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ, ಚುನಾವಣಾ ವ್ಯವಸ್ಥೆಯ ಸುಧಾರಣೆಯಲ್ಲಿ ಬಹಳವಾಗಿ ಶ್ರಮಿಸಿದ ವ್ಯಕ್ತಿ ಟಿ.ಎನ್‌. ಶೇಷನ್‌. ಬಿಜೆಪಿ ನಾಯಕ ಎಸ್ ಸುರೇಶ್ ಕುಮಾರ್​ ಅವರಿಗೆ ಈಗ ಮತ್ತೆ ಶೇಷನ್ ನೆನಪಾಗಿದೆ. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ಸಿಕ್ಕ ಶೇಷನ್ ಎಂಬ ಯುವಕ.

ರಾಜಾಜಿನಗರದಲ್ಲಿ ಎಸ್ ಸುರೇಶ್​ ಕುಮಾರ್​ಗೆ ಸಿಕ್ಕ ಈ ಶೇಷನ್ ಯಾರು?
ಶೇಷನ್ ಜತೆ ಸುರೇಶ್ ಕುಮಾರ್ ಎಸ್ (ಕೃಪೆ; ಸುರೇಶ್ ಕುಮಾರ್ ಅವರ ಫೇಸ್​ಬುಕ್ ಅಕೌಂಟ್)Image Credit source: Facebook
Ganapathi Sharma
|

Updated on: May 11, 2023 | 4:40 PM

Share

ಬೆಂಗಳೂರು: ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ, ಚುನಾವಣಾ ವ್ಯವಸ್ಥೆಯ ಸುಧಾರಣೆಯಲ್ಲಿ ಬಹಳವಾಗಿ ಶ್ರಮಿಸಿದ ವ್ಯಕ್ತಿ ಟಿ.ಎನ್‌. ಶೇಷನ್‌. ಬಿಜೆಪಿ ನಾಯಕ ಎಸ್ ಸುರೇಶ್ ಕುಮಾರ್​ ಅವರಿಗೆ ಈಗ ಮತ್ತೆ ಶೇಷನ್ ನೆನಪಾಗಿದೆ. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ಸಿಕ್ಕ ಶೇಷನ್ ಎಂಬ ಯುವಕ. ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಆ ಶೇಷನ್​​ಗೂ ಈ ಯುವಕನಿ​ಗೂ ಸಂಬಂಧ ಇದೆಯೇ? ಈ ಕುರಿತು ಸುರೇಶ್ ಕುಮಾರ್ ಹೇಳಿದ್ದೇನು? ಇಲ್ಲಿದೆ ನೋಡಿ.

ಅಂದಹಾಗೆ, ಚುನಾವಣಾ ಕಾರ್ಯದ ಓಡಾಟದಲ್ಲಿದ್ದ ಸುರೇಶ್​​ ಕುಮಾರ್ ಅವರಿಗೆ ಈ ಯುವಕ ಸಿಕ್ಕಿದ್ದಾನೆ. ಆತನನ್ನು ಮಾತನಾಡಿಸಿದ ಅವರಿಗೆ ವಿಶೇಷ ಮಾಹಿತಿಯೊಂದು ಸಿಕ್ಕಿದೆ. ಅದನ್ನವರು ಸಾಮಾಜಿಕ ಮಾಧ್ಯಮ ಫೇಸ್​ಬುಕ್ ಮೂಲಕ ಹಂಚಿಕೊಂಡಿದ್ದಾರೆ.

‘ರಾಜಾಜಿನಗರ ಕ್ಷೇತ್ರದಲ್ಲಿ ನಿನ್ನೆ (ಬುಧವಾರ) ಚುನಾವಣಾ ಕಾರ್ಯ ನಿಮಿತ್ತ ಓಡಾಡುತ್ತಿದ್ದಾಗ ಈ ಯುವಕ ಭೇಟಿಯಾದರು. ಅವರ ಹೆಸರು ಕೇಳಿದಾಗ ‘ಶೇಷನ್‌’ ಎ೦ದು ಹೇಳಿದರು. ಚುನಾವಣಾ ಆಯೋಗಕ್ಕೆ ಕಸುವು ತುಂಬಿದ್ದ ಆ ಒರಿಜನಲ್‌ (ಟಿ.ಎನ್‌) ಶೇಷನ್‌ ನೆನಪಿಗೆ ಬ೦ದರು. ಆ ಯುವಕನಿಗೆ ‘ಆ ಶೇಷನ್‌ ಗೊತ್ತಾ’” ಎ೦ದು ಕೇಳಿದೆ. ‘ಸರ್‌. ನನ್ನಪ್ಪ ಅವರ ಕಾರ್ಯದಿಂದ ಸ್ಫೂರ್ತಿ ಪಡೆದು ನನಗೆ ಈ ಹೆಸರು ಇಟ್ಟದ್ದು’ ಎ೦ದು ಆ ಯುವಕ ಖುಷಿಯಾಗಿ ಹೇಳಿದಾಗ ನನಗೂ ಖುಷಿಯಾಯಿತು. 1994 ರಲ್ಲಿ ನಾನು ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಾಗ, ಟಿ.ಎನ್‌. ಶೇಷನ್‌ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು ಎ೦ಬುದು ನನಗೆ ಯಾವಾಗಲೂ ಸ೦ತಸ ಕೂಡುವ ವಿಚಾರ. ಟಿ.ಎನ್‌. ಶೇಷನ್‌ ನೆನಪು ಚುನಾವಣೆಗಳು ಬಂದಾಗಲೆಲ್ಲ ಉಕ್ಕಿ ಬರುತ್ತದೆ’ ಎಂದು ಸುರೇಶ್ ಕುಮಾರ್ ಫೇಸ್​​​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾಗಿರುವ, ಈ ಹಿಂದೆ ಶಿಕ್ಷಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಸುರೇಶ್ ಕುಮಾರ್ ಸಾಮಾನ್ಯವಾಗಿ ಇಂಥ ಅಪರೂಪದ ವಿಚಾರಗಳನ್ನು, ದೈನಂದಿನ ಆಗುಹೋಗುಗಳ ವೇಳೆ ಗಮನಿಸಿದ ಸ್ವಾರಸ್ಯಕರ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಾರೆ.

ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​​ ಮಾಡಿ