Karnataka Assembly Elections 2023: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಾಖಲೆ: ಶೇಕಡಾ 73.19ರಷ್ಟು ಮತದಾನ
ಕರ್ನಾಟದ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು ಶೇಕಡಾ 73.19ರಷ್ಟು ಮತದಾನ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ರಂದು 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಯಶಸ್ವಿ ಮತದಾನ ನಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನ (voter turnout) ದಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಈ ಬಾರಿ ಶೇ. 73.19ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆ ಮೂಲಕ ಮತದಾನದಲ್ಲಿ ಕರ್ನಾಟಕ ತನ್ನದೇ ಆದ ಹೊಸ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಈ ಬಾರಿ ಮತದಾನ ಕಳೆದ ಬಾರಿಗಿಂತ 0.73 ಪ್ರತಿಶತದಷ್ಟು ಕಡಿಮೆಯಾಗಿದೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ 73.04ರಷ್ಟು ಮತದಾನವಾಗಿತ್ತು.
ಕರ್ನಾಟದ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. 5,30,85,566 ಪೈಕಿ 3,88,51,807 ಮತದಾರರಿಂದ ಹಕ್ಕು ಚಲಾವಣೆ ಮಾಡಲಾಗಿದೆ. ಒಟ್ಟು 1,96,58,398 ಪುರುಷ ಮತದಾರರಿಂದ ಹಕ್ಕು ಚಲಾಯಿಸಿದ್ದಾರೆ. ಒಟ್ಟು 1,91,92,372 ಮಹಿಳಾ ಮತದಾರರಿಂದ ಹಕ್ಕು ಚಲಾವಣೆ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 1037 ಇತರೆ ಮತದಾರರಿಂದ ಹಕ್ಕು ಚಲಾಯಿಸಲಾಗಿದೆ.
ಇದನ್ನೂ ಓದಿ: ಈ ಬಾರಿ ಚುನಾವಣೆಯಲ್ಲಾದ ಮತದಾನದ ಪ್ರಮಾಣವೆಷ್ಟು? ಕಳೆದ 5 ಚುನಾವಣೆಯಲ್ಲಾದ ಪ್ರಮಾಣವೆಷ್ಟು? ಇಲ್ಲಿದೆ ಅಂಕಿ-ಅಂಶ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಶೇಕಡಾವಾರು ಮತದಾನ
ಜಿಲ್ಲೆ | ಶೇಕಡಾವಾರು ಮತದಾನ |
ಬೆಳಗಾವಿ | 76.61 |
ಬಾಗಲಕೋಟೆ | 74.63 |
ವಿಜಯಪುರ | 70.78 |
ಕಲಬುರಗಿ | 65.22 |
ಯಾದಗಿರಿ | 66.66 |
ಬೀದರ್ | 71.5 |
ರಾಯಚೂರು | 69.79 |
ಕೊಪ್ಪಳ | 77.51 |
ಗದಗ | 75.21 |
ಧಾರವಾಡ | 73.14 |
ಉತ್ತರ ಕನ್ನಡ | 76.72 |
ಹಾವೇರಿ | 81.17 |
ವಿಜಯನಗರ | 77.62 |
ಬಳ್ಳಾರಿ | 76.23 |
ಚಿತ್ರದುರ್ಗ | 81.2 |
ದಾವಣಗೆರೆ | 78.11 |
ಶಿವಮೊಗ್ಗ | 77.22 |
ಉಡುಪಿ | 78.46 |
ಚಿಕ್ಕಮಗಳೂರು | 77.89 |
ತುಮಕೂರು | 83.49 |
ಚಿಕ್ಕಬಳ್ಳಾಪುರ | 85.83 |
ಕೋಲಾರ | 81.45 |
ಬೆಂಗಳೂರು ನಗರ | 59.98 |
ಬೆಂಗಳೂರು ಗ್ರಾಮಾಂತರ | 83.76 |
ಬಿಬಿಎಂಪಿ (ಉತ್ತರ) | 52.88 |
ಬಿಬಿಎಂಪಿ (ಕೇಂದ್ರ) | 55.45 |
ಬಿಬಿಎಂಪಿ (ದಕ್ಷಿಣ) | 52.8 |
ರಾಮನಗರ | 84.98 |
ಮಂಡ್ಯ | 84.36 |
ಹಾಸನ | 81.7 |
ದಕ್ಷಿಣ ಕನ್ನಡ | 76.15 |
ಕೊಡಗು | 74.74 |
ಮೈಸೂರು | 75.07 |
ಚಾಮರಾಜನಗರ | 77.89 |
ಒಟ್ಟು | 72.67 |
ಇದನ್ನೂ ಓದಿ: Karnataka Election Results 2023: ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇಲ್ಲಿದೆ ವಿವರ
ಕಳೆದ ಎರಡು ವರ್ಷ ಮತ್ತು ಈ ಬಾರಿ ರಾಜ್ಯದಲ್ಲಾದ ಶೇಕಡಾವಾರು ಮತದಾನ
ಕರ್ನಾಟಕ ಚುನಾವಣೆ 2023 ಲೈವ್ ಅಪ್ಡೇಟ್ಸ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Thu, 11 May 23