ಈ ಬಾರಿ ಚುನಾವಣೆಯಲ್ಲಾದ ಮತದಾನದ ಪ್ರಮಾಣವೆಷ್ಟು? ಕಳೆದ 5 ಚುನಾವಣೆಯಲ್ಲಾದ ಪ್ರಮಾಣವೆಷ್ಟು? ಇಲ್ಲಿದೆ ಅಂಕಿ-ಅಂಶ

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ, 58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಈ ಬಾರಿ ಎಷ್ಟು ಪ್ರಮಾಣ ಮತದಾನವಾಗಿದೆ? ಕಳೆದ 5 ಚುನಾವಣೆಯಲ್ಲಿ ಎಷ್ಟು ಮತದಾನವಾಗಿದೆ? ಇಲ್ಲಿದೆ ಮಾಹಿತಿ.

ಈ ಬಾರಿ ಚುನಾವಣೆಯಲ್ಲಾದ ಮತದಾನದ ಪ್ರಮಾಣವೆಷ್ಟು? ಕಳೆದ 5 ಚುನಾವಣೆಯಲ್ಲಾದ ಪ್ರಮಾಣವೆಷ್ಟು? ಇಲ್ಲಿದೆ ಅಂಕಿ-ಅಂಶ
ಮತದಾನ
Follow us
ವಿವೇಕ ಬಿರಾದಾರ
|

Updated on:May 11, 2023 | 1:10 PM

ಬೆಂಗಳೂರು: ನಿನ್ನೆ (ಮೇ.10) ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ (Karnataka Assembly Election 2023), 58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ (Voting) ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. 224 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರ ಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಶೇಕಡಾವಾರು ಮತದಾನ

ಜಿಲ್ಲೆ ಶೇಕಡಾವಾರು ಮತದಾನ
ಬೆಳಗಾವಿ 76.61
ಬಾಗಲಕೋಟೆ 74.63
ವಿಜಯಪುರ 70.78
ಕಲಬುರಗಿ 65.22
ಯಾದಗಿರಿ 66.66
ಬೀದರ್​ 71.5
ರಾಯಚೂರು 69.79
ಕೊಪ್ಪಳ 77.51
ಗದಗ 75.21
ಧಾರವಾಡ 73.14
ಉತ್ತರ ಕನ್ನಡ 76.72
ಹಾವೇರಿ 81.17
ವಿಜಯನಗರ 77.62
ಬಳ್ಳಾರಿ 76.23
ಚಿತ್ರದುರ್ಗ 81.2
ದಾವಣಗೆರೆ 78.11
ಶಿವಮೊಗ್ಗ 77.22
ಉಡುಪಿ 78.46
ಚಿಕ್ಕಮಗಳೂರು 77.89
ತುಮಕೂರು 83.49
ಚಿಕ್ಕಬಳ್ಳಾಪುರ 85.83
ಕೋಲಾರ 81.45
ಬೆಂಗಳೂರು ನಗರ 59.98
ಬೆಂಗಳೂರು ಗ್ರಾಮಾಂತರ 83.76
ಬಿಬಿಎಂಪಿ (ಉತ್ತರ) 52.88
ಬಿಬಿಎಂಪಿ (ಕೇಂದ್ರ) 55.45
ಬಿಬಿಎಂಪಿ (ದಕ್ಷಿಣ) 52.8
ರಾಮನಗರ 84.98
ಮಂಡ್ಯ 84.36
ಹಾಸನ 81.7
ದಕ್ಷಿಣ ಕನ್ನಡ 76.15
ಕೊಡಗು 74.74
ಮೈಸೂರು 75.07
ಚಾಮರಾಜನಗರ 77.89
ಒಟ್ಟು 72.67

ಜಿಲ್ಲಾವಾರು ಗರಿಷ್ಠ ಮತದಾನ ಕಂಡ ಜಿಲ್ಲೆ: ಚಿಕ್ಕಬಳ್ಳಾಪುರ -ಶೇ.85.83

ಜಿಲ್ಲಾವಾರು ಕನಿಷ್ಠ ಮತದಾನ ಕಂಡ ಜಿಲ್ಲೆ: ಬೆಂಗಳೂರು ನಗರ-ಶೇ.59.98

ಇನ್ನು ಕ್ಷೇತ್ರವಾರು ಗರಿಷ್ಠ ಮತದಾನ ಕಂಡ ವಿಧಾಮಸಭಾ ಕ್ಷೇತ್ರ: ಮೇಲುಕೋಟೆ – ಶೇ. 90.93 ಕನಿಷ್ಠ ಮತದಾನ ವಿಧಾನಸಭಾ ಕ್ಷೇತ್ರ: ಸಿವಿರಾಮನ್‌ ನಗರ (ಬೆಂಗಳೂರು) – 47.43%

ಇದನ್ನೂ ಓದಿ: ಒಂದೇ ಮತಗಟ್ಟೆಯಲ್ಲಿ ಸರದಿ ಸಾಲಲ್ಲಿದ್ದ 8000 ಜನರು ಮತದಾನ ಮಾಡದೆ ವಾಪಸ್! ಹೌದಾ?

ಈ ಬಾರಿ ಮತದಾನ ಕಳೆದ ಬಾರಿಗಿಂತ 0.73 ಪ್ರತಿಶತದಷ್ಟು ಕಡಿಮೆಯಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ 73.04ರಷ್ಟು ಮತದಾನವಾಗಿತ್ತು.

ಕಳೆದ 5 ವರ್ಷದಲ್ಲಿ ರಾಜ್ಯದಲ್ಲಾದ ಮತದಾನ ಪ್ರಮಾಣ

ವರ್ಷ ಮತದಾನ ಪ್ರಮಾಣ ಮತದಾನ ಅರ್ಹತೆ ಪಡೆದಿದ್ದವರು ಮತದಾನ ಮಾಡಿದವರು
2018 73.04 4,96,54,443 3,64,24,365
2013 71.08 4,36,52,789 3,13,53,015
2008 65.1 4,01,71.345 2,61,56,630
2004 65 3,85,86,754 2,50,88,438
1999 67.7 3,42,84,098 2,31,94,283

ಈ ಬಾರಿಯ ಅಂಕಿ-ಅಂಶಗಳನ್ನು ನೋಡಿದರೇ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಮತದಾರರು ಇನ್ನಷ್ಟು ಜಾಗೃತಿಯಾಗಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Thu, 11 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ