ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಇನ್ನು ಕೋಲಾರದಲ್ಲಿ(Kolar) ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗೆ ಸಚಿವ ಶ್ರೀರಾಮುಲು (Sriramulu) ಪರೋಕ್ಷವಾಗಿ ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ: Siddaramaiah: ನಾನು ಕೋಲಾರದಿಂದ ಸ್ಪರ್ಧಿಸಲು ಸಿದ್ಧ, ಆದರೆ ಹೈಕಮಾಂಡ್ ತೀರ್ಮಾನಿಸಬೇಕು: ಸಿದ್ಧರಾಮಯ್ಯ
ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾರು ವೇಳೆ 2023ರಲ್ಲಿ ನಡೆಯುವ ಚುನಾವಣೆಯಲ್ಲೂ ಸಹ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೀರಾ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಸಿದ್ದರಾಮಯ್ಯರಂತೆ ದೊಡ್ಡ ಲೀಡರ್ ನಾನಲ್ಲ. ನಾನು ನನ್ನ ಇತಿಮಿತಿಯಲ್ಲಿ ನಾನು ಯೋಚನೆ ಮಾಡುತ್ತೇನೆ. ನನ್ನ ಇತಿಮಿತಿಯಲ್ಲಿ ಎಲ್ಲಿ ನಿಲ್ಲಬೇಕೋ ಅಲ್ಲಿ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿದ್ದು ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕಿದರು.
ಸಿದ್ದರಾಮಯ್ಯರಂತೆ ದೊಡ್ಡ ಲೀಡರ್ ನಾನಲ್ಲ. ಅವರು ಮಾಸ್ ಲೀಡರ್. . ಮೊಳಕಾಲ್ಮೂರಿನ ಜನತೆ ನನ್ನನ್ನು 5 ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಬಳ್ಳಾರಿ ಗ್ರಾಮಾಂತರ, ಸಂಡೂರಿನಲ್ಲೂ ನಿಲ್ಲುವಂತೆ ಒತ್ತಾಯ ಇದೆ. ಈ ಬಗ್ಗೆ ಮುಂದೆ ನೋಡೋಣ ಎಂದು ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಆಗಿ ಮಾತನಾಡಿದರು.
ರೆಡ್ಡಿ ಪಕ್ಷಕ್ಕೆ ಬಳ್ಳಾರಿ ಕಾರ್ಯಕರ್ತರು ವಲಸೆ ಹೋಗ್ತಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಗಟ್ಟಿ ಇದ್ದವರು ನಮ್ಮ ಜೊತೆಗೆ ಇರುತ್ತಾರೆ. ಜೋಳ್ಳು ಇದ್ದವರು ಹೋಗುತ್ತಾರೆ. ರೆಡ್ಡಿ ಪಕ್ಷಕ್ಕೆ ಹೋಗುವವರನ್ನು ತಡೆಯೋಕೆ ಅಗುತ್ತಾ?ನಮ್ಮಿಬ್ಬರ ಫಾಲೋವರ್ ಒಬ್ಬರೇ ಇರಬಹುದು. ಅದ್ರೇ ಹೋಗುವವರನ್ನು ತಡೆಯಲು ಆಗುತ್ತಾ? ಯಾರಿಗೂ ಒತ್ತಡ ಮಾಡಲ್ಲ ಇರುವವರು ಇರಲಿ ಹೋಗುವವರು ಹೋಗಲಿ ಎಂದು ಸ್ಪಷ್ಟಪಡಿಸಿದರು.
ಕಳೆದ ಬಾರಿ ಅಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಶ್ರೀರಾಮುಲು ಅವರು ಅಖಾಡಕ್ಕಿಳಿದಿದ್ದರು. ಸಿದ್ದರಾಮಯ್ಯ ವಿರುದ್ಧ ಕೇವಲ 1696 ಮತಗಳ ಅಂತರದಿಂದ ಸೋಲು ಕಂಡಿದ್ದರು.
Published On - 4:52 pm, Tue, 10 January 23