ಜ. 19 ಕಲಬುರಗಿಗೆ ಪ್ರಧಾನಿ ಮೋದಿ ಪ್ರವಾಸ ಫಿಕ್ಸ್, ತವರಿನಲ್ಲಿ ಖರ್ಗೆಗೆ ಟಕ್ಕರ್ ಕೊಡಲು ಕಮಲ ನಾಯಕರು ಸಜ್ಜು

ಪ್ರಧಾನಿ ಕಾರ್ಯಕ್ರಮ ಕಲಬುರಗಿ ಜಿಲ್ಲೆಯಲ್ಲಿ ಫಿಕ್ಸ್ ಆಗಿರೋ ಹಿನ್ನೆಲೆಯಲ್ಲಿ, ಇಂದು ಕಲಬುರಗಿ ಬಿಜೆಪಿ ನಾಯಕರು ಸಭೆ ನಡೆಸಿ, ಸಭೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಐದು ಲಕ್ಷ ಕ್ಕೂ ಹೆಚ್ಚಿನ ಜನ ಸೇರಿಸಿ, ಶಕ್ತಿ ಪ್ರದರ್ಶನ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಜ. 19 ಕಲಬುರಗಿಗೆ ಪ್ರಧಾನಿ ಮೋದಿ ಪ್ರವಾಸ ಫಿಕ್ಸ್, ತವರಿನಲ್ಲಿ ಖರ್ಗೆಗೆ ಟಕ್ಕರ್ ಕೊಡಲು ಕಮಲ ನಾಯಕರು ಸಜ್ಜು
ಪ್ರಧಾನಿ ಮೋದಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 09, 2023 | 5:30 PM

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ( Mallikarjun Kharge) ಅವರ ತವರು ಜಿಲ್ಲೆ ಕಲಬುರಗಿ ( Kalaburagi). ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ. ಉಮೇಶ್ ಜಾದವ್ ಅವರನ್ನು ಬಿಜೆಪಿಗೆ ಕರೆದುಕೊಂಡು ಬಂದು ಅವರಿಗೆ ಬಿಜೆಪಿ ಟಿಕೆಟ್ (Karnataka BJP) ನೀಡಿದ್ದ ನಾಯಕರು, ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಇದೀಗ ಎಐಸಿಸಿ ಅಧ್ಯಕ್ಷರ ತವರು ಜಿಲ್ಲೆಗೆ ಪ್ರಧಾನಿ ಮೋದಿ (Narendra Modi) ಎಂಟ್ರಿಗೆ ಸಿದ್ದತೆ ಆರಂಭವಾಗಿದ್ದು, ಜನವರಿ 19 ರಂದು ಕಲಬುರಗಿಗೆ ಪ್ರಧಾನಿ ಪ್ರವಾಸ ಫಿಕ್ಸ್ ಆಗಿದೆ.

ಜನ ವಸತಿ ಇರೋ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ ಹಕ್ಕು ಪತ್ರ ನೀಡಲು ಕಂದಾಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರೋ ಹಿನ್ನೆಲೆಯಲ್ಲಿ ಸರ್ಕಾರದಿಂದ ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದಾಗಿದ್ದು, ಪ್ರಧಾನಿ ಮೋದಿ ಅವರಿಂದ ಹಕ್ಕು ಪತ್ರ ನೀಡಲು ಮುಂದಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಸೇರಿದಂತೆ ಈ ಭಾಗದಲ್ಲಿ 50 ಸಾವಿರಕ್ಕೂ ಹೆಚ್ಚು ಫಲಾನಭವಿಗಳು ಇದ್ದು, ಅವರಿಗೆ ಹಕ್ಕು ಪತ್ರ ನೀಡಲಾಗುತ್ತದೆ.

ಜನವರಿ 19 ಕ್ಕೆ ಕಲಬುರಗಿ ಗೆ ಪ್ರಧಾನಿ ಮೋದಿ

ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದ ತಾಂಡಾದ ನಿವಾಸಿಗಳಿಗೆ ಹಕ್ಕು ಪತ್ರ ವಿತಾರಣಾ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ. ಅಂದಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಕರೆಯಿಸಿ, ಮೋದಿ ಅವರಿಂದ ಹಕ್ಕು ಪತ್ರ ವಿತರಿಸೋ ಮೂಲಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಹವಾ ಹೆಚ್ಚಿಸುವುದು ಮತ್ತು ಮಲ್ಲಿಕಾರ್ಜುನ ಖರ್ಗೆ ತವರು ಭಾಗದಲ್ಲಿ ಅವರಿಗೆ ಟಕ್ಕರ್ ನೀಡಲು ಕಮಲ ನಾಯಕರು ಮುಂದಾಗಿದ್ದಾರೆ.

ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಕಾರ್ಯಕ್ರಮ ಮಾಡಲು ಕೇಂದ್ರದಿಂದ ಕೂಡಾ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕಲಬುರಗಿ ನಗರದಲ್ಲಿ ಮಾಡಬೇಕಾ ಅಥವಾ ಗ್ರಾಮೀಣ ಭಾಗದಲ್ಲಿ ಮಾಡಬೇಕಾ ಅನ್ನೋ ನಿರ್ಧಾರ ಬಾಕಿಯಿದ್ದು, ಇಂದು ಅಥವಾ ನಾಳೆ ಕಾರ್ಯಕ್ರಮ ವನ್ನು ಎಲ್ಲಿ ಮಾಡಬೇಕು ಅನ್ನೋದು ಪೈನಲ್ ಆಗಲಿದೆಯಂತೆ.

ಪ್ರಧಾನಿ ಕಾರ್ಯಕ್ರಮ ಕಲಬುರಗಿ ಜಿಲ್ಲೆಯಲ್ಲಿ ಪಿಕ್ಸ್ ಆಗಿರೋ ಹಿನ್ನೆಲೆಯಲ್ಲಿ, ಇಂದು ಕಲಬುರಗಿ ಬಿಜೆಪಿ ನಾಯಕರು ಸಭೆ ನಡೆಸಿ, ಸಭೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಫಲಾನುಭವಿಗಳ ಜೊತೆ ಸರಿಸುಮಾರು ಐದು ಲಕ್ಷ ಕ್ಕೂ ಹೆಚ್ಚಿನ ಜನ ಸೇರಿಸಿ, ಶಕ್ತಿ ಪ್ರದರ್ಶನ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಕಂದಾಯ ಗ್ರಾಮಗಳನ್ನು ಮಾಡಬೇಕು ಅನ್ನೋದು ಲಂಬಾಣಿಗರ ಅನೇಕ ವರ್ಷಗಳ ಕನಸಾಗಿತ್ತು. ಆ ಕನಸನ್ನು ರಾಜ್ಯ ಸರ್ಕಾರ ನನಸು ಮಾಡಿದೆ. ಪ್ರಧಾನಿ ಅವರು ಕಲಬುರಗಿ ಗೆ ಬರೋದು ಕನ್ಪರ್ಮ್ ಆಗಿದೆ. ಕಲಬುರಗಿ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಪ್ರಧಾನಿ ನೀಡಲಿದ್ದಾರೆ ಅಂತಾರೆ ಕಲಬುರಗಿ ಸಂಸದ ಡಾ‌. ಉಮೇಶ್ ಜಾಧವ್

ವರದಿ: ಸಂಜಯ್ ಚಿಕ್ಕಮಠ, ಟಿವಿ 9, ಕಲಬುರಗಿ

Published On - 5:24 pm, Mon, 9 January 23