ಕಾಂಗ್ರೆಸ್​ನಲ್ಲಿ ಸಕ್ರಿಯರಾದ್ರೆ ತೊಂದ್ರೆ ಕೊಡ್ತೇವೆ ಎನ್ನುವ ಸಂದೇಶ ನೀಡಲು ಅರವಿಂದ್​ ಚೌಹಾಣ್ ಮನೆ ಮೇಲೆ ಐಟಿ ದಾಳಿ: ಪ್ರಿಯಾಂಕ್ ಖರ್ಗೆ

|

Updated on: May 07, 2023 | 11:23 AM

ಅರವಿಂದ್ ಚೌಹಾಣ್ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ಕೀಳು ಮಟ್ಟಕ್ಕೆ ಇಳಿದು, ಐಟಿ ದಾಳಿ ನಡೆಸಿದೆ. ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವುದಕ್ಕೆ ಐಟಿ ರೇಡ್ ಮಾಡಲಾಗಿದೆ. ಬಿಜೆಪಿ ಸಿದ್ಧಾಂತಗಳನ್ನು ಮಾರಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ರು.

ಕಾಂಗ್ರೆಸ್​ನಲ್ಲಿ ಸಕ್ರಿಯರಾದ್ರೆ ತೊಂದ್ರೆ ಕೊಡ್ತೇವೆ ಎನ್ನುವ ಸಂದೇಶ ನೀಡಲು ಅರವಿಂದ್​ ಚೌಹಾಣ್ ಮನೆ ಮೇಲೆ ಐಟಿ ದಾಳಿ: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Follow us on

ಕಲಬುರಗಿ: ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಬೆಂಬಲಿಗ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್​ ಚೌಹಾಣ್​ ಮನೆ, ಹೋಟೆಲ್, ಕ್ರಷರ್ ಮೇಲೆ ಐಟಿ ಅಧಿಕಾರಿಗಳು ದಾಳಿ (IT Raid) ಮಾಡಿ ಪರಿಶೀಲನೆ ನಡೆಸುತ್ತಿದ್ದು ಈ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿಬಿಟ್ರೆ ತೊಂದರೆ ಕೊಡ್ತೇವೆ ಅನ್ನೋ ಸಂದೇಶ ನೀಡಲು ಅರವಿಂದ್​ ಚೌಹಾಣ್ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಇನ್ನು ಅರವಿಂದ್ ಚೌಹಾಣ್ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ಕೀಳು ಮಟ್ಟಕ್ಕೆ ಇಳಿದು, ಐಟಿ ದಾಳಿ ನಡೆಸಿದೆ. ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವುದಕ್ಕೆ ಐಟಿ ರೇಡ್ ಮಾಡಲಾಗಿದೆ. ಬಿಜೆಪಿ ಸಿದ್ಧಾಂತಗಳನ್ನು ಮಾರಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ರು. ಕಲಬುರಗಿ ನಗರದಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಕೂಡ ಘಟನೆ ಸಂಬಂಧ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಚುನಾವಣೆ ಸೋಲ್ತಾರೆ. ಸೋಲುವ ಭಯ ಆರಂಭವಾದಾಗ ಸರ್ಕಾರಿ ಏಜನ್ಸಿಗಳನ್ನು ಬಳಕೆ ಮಾಡ್ತಾರೆ. ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಐಟಿ ಅಸ್ತ್ರ ಬಳಸಿದ್ದಾರೆ. ಕಾಂಗ್ರೆಸ್ ಬೆಂಬಲಿಗರು, ಕಾರ್ಯಕರ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ. ವಾಹೀದ್ ಅಲಿ, ಮಹಮ್ಮದ್ ಜಾಗೀರದಾರ್, ಅರವಿಂದ್ ಚೌಹಾಣ್ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ಬಿಜೆಪಿ ವಿರುದ್ಧ ಗರಂ ಆದ್ರು.

ಇದನ್ನೂ ಓದಿ: IT Raid: ಹಾವೇರಿ, ಕಲಬುರಗಿ ಜಿಲ್ಲೆಯ ಕಾಂಗ್ರೆಸ್​ ಮುಖಂಡರ ಮನೆ ಮೇಲೆ ಐಟಿ ದಾಳಿ

ಕಳೆದ ಹತ್ತು ವರ್ಷದಲ್ಲಿ ಶೇಕಡ 95 ರಷ್ಟು ದಾಳಿ ನಡೆದಿದ್ದು ವಿರೋಧ ಪಕ್ಷದವರ ಮನೆ ಮೇಲೆ. ವಿರೋಧ ಪಕ್ಷದಲ್ಲಿದ್ದರೆ ಕಳ್ಳರು, ತಮ್ಮ ಪಕ್ಷಕ್ಕೆ ಸೇರಿದ್ರೆ ದೇಶಭಕ್ತರು. ಅರವಿಂದ್ ಚೌಹಾಣ್ ಕಾಂಗ್ರೆಸ್ ಸೇರಿ ಕೇವಲ ಎರಡು ವಾರವಾಯ್ತು. ಎರಡೇ ವಾರಕ್ಕೆ ಅರವಿಂದ್ ಚೌಹಾಣ್ ತೆರಿಗೆ ವಂಚಿಸಿ ಬಿಟ್ರಾ? ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿಬಿಟ್ರೆ ತೊಂದರೆ ಕೊಡ್ತೇವೆ ಅನ್ನೋ ಸಂದೇಶ ಕಳುಹಿಸಿದ್ದಾರೆ. ಅರವಿಂದ್ ಚೌಹಾನ್ ಗೆ ಬಿಜೆಪಿಯವರು ಸಂದೇಶ ಕಳುಹಿಸಿದ್ದಾರೆ. ಈ ರೀತಿಯ ತಂತ್ರಕ್ಕೆ ನಾವು ಬಗ್ಗಲ್ಲಾ, ಅಂಜಲ್ಲಾ. ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಕಾಲು ಬಿದ್ದಿದ್ದಾರೆ. ರಾಜ್ಯದಲ್ಲಿ ನಮ್ಮನ್ನು ಗೆಲ್ಲಿಸಿಕೊಡಿ ಅಂತ ಬಿಜೆಪಿ ನಾಯಕರು ಕಾಲಿಗೆ ಬಿದ್ದಿದ್ದಾರೆ ಎಂದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ