ಮಂದಿರ, ಮಸೀದಿ, ಸ್ಮಶಾನದಲ್ಲೂ ಬಿಜೆಪಿಯವರು ರಾಜಕೀಯ ಮಾಡ್ತಾರೆ; ಬಿ.ಕೆ.ಹರಿಪ್ರಸಾದ್​ ವಾಗ್ದಾಳಿ

|

Updated on: Apr 24, 2023 | 1:23 PM

‘ಬಿಜೆಪಿಯವರು ಪಾಳುಬಿದ್ದ ಸ್ಮಶಾನ, ಮುರುಕಲು ಬಿದ್ದ, ಮಸೀದಿ, ಮಂದಿರದಲ್ಲೂ ಬಿಜೆಪಿಯವರು ರಾಜಕೀಯ ಮಾಡ್ತಾರೆ. ಈ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮಂದಿರ, ಮಸೀದಿ, ಸ್ಮಶಾನದಲ್ಲೂ ಬಿಜೆಪಿಯವರು ರಾಜಕೀಯ ಮಾಡ್ತಾರೆ; ಬಿ.ಕೆ.ಹರಿಪ್ರಸಾದ್​ ವಾಗ್ದಾಳಿ
ಬಿಕೆ ಹರಿಪ್ರಸಾದ್​
Follow us on

ಉತ್ತರ ಕನ್ನಡ: ‘ಬಿಜೆಪಿಯವರು ಪಾಳುಬಿದ್ದ ಸ್ಮಶಾನ, ಮುರುಕಲು ಬಿದ್ದ, ಮಸೀದಿ, ಮಂದಿರದಲ್ಲೂ ಬಿಜೆಪಿಯವರು ರಾಜಕೀಯ ಮಾಡ್ತಾರೆ. ಈ ಚುನಾವಣೆ(Election)ಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್(B. K. Hariprasad) ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಬಿಜೆಪಿಯಲ್ಲಿ ಜಾತಿ, ಧರ್ಮ ರಂಗಪ್ರವೇಶ ಮಾಡಿದೆ ಎನ್ನುವ ಮೂಲಕ ಕಿಡಿಕಾರಿದ್ದಾರೆ.

‘ಬಿಜೆಪಿಯಲ್ಲಿ ಎರಡೂವರೆ ಸಾವಿರ ಕೋಟಿ ಹಣ ಕೊಟ್ಟರೆ ಸಿಎಂ ಆಗ್ತಾರೆ, ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ. ಈಗಲೂ ಬಿಜೆಪಿ ಕಾಂಗ್ರೆಸ್ ನಾಯಕರ ಫೋನ್​ ಕದ್ದಾಲಿಕೆ ಮಾಡುತ್ತಿದ್ದು, ಸಿಬಿಐ, ಇಡಿಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಹೀಗಾಗಿ ನಾವು ದೂರು ಕೊಡಲು ಹೋಗಿಲ್ಲ. ನಿನ್ನೆ(ಏ.23) ಗಂಗಾಧರ ಗೌಡರವರನ್ನ ವೈಸ್ ಪ್ರಸಿಡೆಂಟ್ ಮಾಡಿದ್ದೆವು. ಇಂದು(ಏ.24) ಲೋಕಾಯುಕ್ತ ದಾಳಿ ಆಗಿದೆ.

ಇದನ್ನೂ ಓದಿ:ಮೀಟೂ ಪ್ರತಿಭಟನೆ: ನಮಗೆ ಬೆಂಬಲ ನೀಡಿ ಎಂದು ಕುಸ್ತಿಪಟುಗಳಿಂದ ರಾಜಕೀಯ ಪಕ್ಷಗಳಿಗೆ ಕರೆ

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ನಾವು ಬ್ರಿಟಿಷರ ಗುಲಾಮರಾಗಿರಲಿಲ್ಲ, ಬೂಟ್ ನೆಕ್ಕಿದವರಲ್ಲ. ಬ್ರಿಟೀಷರಿಗೆ ಎದೆ ತಟ್ಟಿ ನಿಂತವರು ನಾವು, ಅದನ್ನ ಎದುರಿಸುತ್ತೇವೆ. ನಾವು ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರದಲ್ಲಿ ಭಾಗಿಯಾದ ಬಿಜೆಪಿಗರನ್ನು ಜೈಲಿಗೆ ಕಳುಹಿಸುತ್ತೇವೆ ಎನ್ನುವ ಮೂಲಕ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ