Byndoor Election 2023 Winner: ಬರಿಗಾಲ ಸಂತ ಬಿಜೆಪಿ ಗುರುರಾಜ್​​ ಗಂಟಿಹೊಳೆಗೆ ಭರ್ಜರಿ ವಿಜಯ

|

Updated on: May 13, 2023 | 5:48 PM

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ (Byndoor Assembly Constituency) ಈ ಬಾರಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ನಡೆದಿದ್ದು. ಮತ್ತೆ ಕಮಲ ಜಯವಾಗಿದೆ.

Byndoor Election 2023 Winner: ಬರಿಗಾಲ ಸಂತ ಬಿಜೆಪಿ ಗುರುರಾಜ್​​ ಗಂಟಿಹೊಳೆಗೆ ಭರ್ಜರಿ ವಿಜಯ
ಗುರುರಾಜ್​​ ಗಂಟಿಹೊಳೆ
Follow us on

ಬೈಂದೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇಂದು ಪ್ರಕಟವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ (Byndoor Assembly Constituency) ಈ ಬಾರಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ನಡೆದಿದ್ದು. ಮತ್ತೆ ಕಮಲ ಜಯವಾಗಿದೆ. ಕಳೆದ ಚುನಾವಣೆಯಲ್ಲಿ ಬೈಂದೂರಿನಲ್ಲಿ ಬಿ ಸುಕುಮಾರ್ ಶೆಟ್ಟಿ ಭಾರೀ ಬಹುಮತದಿಂದ ಗೆಲ್ಲುವು ಸಾಧಿಸಿದ್ದರು. ಆದರೆ ಬಿ ಸುಕುಮಾರ್ ಶೆಟ್ಟಿ ಅವರಿಗೆ ಈ ಬಾರಿ ಬಿಜೆಪಿ ಟಿಕೇಟ್ ನೀಡಿಲ್ಲ. ಬಿ ಸುಕುಮಾರ್ ಶೆಟ್ಟಿ ಅವರು ಸಂಘಟನೆ ಮೂಲಕ ಅನೇಕ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಬೈಂದೂರಿನಲ್ಲಿ ಜನಾಭಿಪ್ರಾಯ ವಿರುದ್ಧವಾಗಿದ್ದು, ಹೊಸ ಮುಖಕ್ಕೆ ಮಣೆ ಹಾಕಿದ್ದರು, ಈ ಬಾರಿ ಗುರುರಾಜ್​​ ಗಂಟಿಹೊಳೆ ಗೆಲುವು ಸಾಧಿಸಿದ್ದಾರೆ, ಇವರು ಬರಿಗಾಲ ಸಂತ ಎಂದು ಪ್ರಸಿದ್ಧಿ, ಸಂಘಟನೆಯ ಮೂಲಕ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಬಾರಿ ಗುರುರಾಜ್​​ ಗಂಟಿಹೊಳೆ ಅವರಿಗೆ ಬಿಜೆಪಿ ಟಿಕೇಟ್​​ ನೀಡಿದ್ದು, ಚುನಾವಣಾ ಪ್ರಚಾರದ ಸಮಯದಲ್ಲಿ ಗುರುರಾಜ್​​ ಗಂಟಿಹೊಳೆ ಭಾರೀ ಟ್ರೆಂಡ್​​ ಆಗುತ್ತಿದ್ದರು. ಬೈಂದೂರಿನಲ್ಲಿ ಬಿಜೆಪಿ ಮೇಲೆ ಒಲವು ಇದ್ದು, ಬಿಜೆಪಿ ಈ ಬಾರಿಯೂ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹೆಚ್ಚು ಕೆಲಸ ಮಾಡಿದವರು, ಉಡುಪಿ ಜಿಲ್ಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಮತ್ತೆ 3 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಬಾರಿ ಕಾಂಗ್ರೆಸ್​​ ಕೂಡ ಪ್ರಬಲ ಪೈಪೋಟಿಯನ್ನು ನೀಡಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲವು ಸಾಧಿಸಿದೆ.

ಇನ್ನೂ ಕಾಂಗ್ರೆಸ್​​​ ಕೆ. ಗೋಪಾಲ ಪೂಜಾರಿ ಕೂಡ ಪ್ರಬಲ ಪೈಪೋಟಿ ನೀಡಿದ್ದು, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಅವರು ರಾಜಕೀಯವಾಗಿ ಭಾರೀ ಅನುಭವ ಇರುವ ವ್ಯಕ್ತಿ ಹಾಗೂ 1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್​​ ಭದ್ರಕೋಟೆಯಲ್ಲಿ ಗೆಲುವು ತಂದುಕೊಟ್ಟವರು, ಕೆ. ಗೋಪಾಲ ಪೂಜಾರಿ ನಂತರ ಅಲ್ಲಿಂದ 1998ರಲ್ಲಿ ಲೋಕಸಭೆಗೂ ಕೂಡ ಸ್ಪರ್ಧಿಸಿದ್ದಾರೆ, ಈ ಬಾರಿ ಅವರು ಕಾಂಗ್ರೆಸ್​​ನಿಂದ ಸ್ವರ್ಧಿಸಿದ್ದು, ಸೋತಿದ್ದಾರೆ. ಈ ಬಾರಿ ಮತಪ್ರಭು ಬಿಜೆಪಿಗೆ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Sakleshpur Election 2023 Winner: ಸಕಲೇಶಪುರದಲ್ಲಿ ಜೆಡಿಎಸ್, ಕಾಂಗ್ರೆಸ್​ಗೆ ಸೋಲಿನ ಆಘಾತ ಕೊಟ್ಟ ಬಿಜೆಪಿಯ ಸಿಮೆಂಟ್ ಮಂಜು

ಇನ್ನೂ ಜೆಡಿಎಸ್​​ನಿಂದ ಮುಸ್ಲಿಂ ಸಮುದಾಯದ ವ್ಯಕ್ತಿ ಮನ್ಸೂರು ಇಬ್ರಾಹಿಂ ಸ್ಪರ್ಧಿಸಿದ್ದು ಅವರು ಕಡಿಮೆ ಮತಗಳಿಂದ ಸೋತಿದ್ದಾರೆ. ಒಟ್ಟಾರೆ ಈ ಬಾರಿ ಬೈಂದೂರು ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂದಿದೆ.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ