AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sakleshpur Election 2023 Winner: ಸಕಲೇಶಪುರದಲ್ಲಿ ಜೆಡಿಎಸ್, ಕಾಂಗ್ರೆಸ್​ಗೆ ಸೋಲಿನ ಆಘಾತ ಕೊಟ್ಟ ಬಿಜೆಪಿಯ ಸಿಮೆಂಟ್ ಮಂಜು

S Majunath, BJP: ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನ ಎಚ್.ಕೆ. ಕುಮಾರಸ್ವಾಮಿ ಅವರ ಸತತ ಗೆಲುವಿನ ಓಟಕ್ಕೆ ಬಿಜೆಪಿಯ ಸಿಮೆಂಟ್ ಮಂಜು ಬ್ರೇಕ್ ಹಾಕಿದ್ದಾರೆ. ತ್ರಿಕೋನ ಹಣಾಹಣಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಪರ್ಧೆಯನ್ನು ಬಿಜೆಪಿ ಅಭ್ಯರ್ಥಿ ಹಿಂದಿಕ್ಕಿದ್ದಾರೆ.

Sakleshpur Election 2023 Winner: ಸಕಲೇಶಪುರದಲ್ಲಿ ಜೆಡಿಎಸ್, ಕಾಂಗ್ರೆಸ್​ಗೆ ಸೋಲಿನ ಆಘಾತ ಕೊಟ್ಟ ಬಿಜೆಪಿಯ ಸಿಮೆಂಟ್ ಮಂಜು
ಬಿಜೆಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 13, 2023 | 5:37 PM

Share

Sakleshpur Assembly Constituency Election Results 2023: ರಾಜ್ಯ ವಿಧಾನಸಭಾ ಚುನಾವಣೆ 2023 ಆಗಿದ್ದು, ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಪಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸಾಕಷ್ಟು ಹಿನ್ನಡೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಒಂದು ಶಾಸಕ ಸ್ಥಾನಗಳನ್ನು ಹೊಂದಿದ್ದ ಬಿಜೆಪಿ, ಈ ಬಾರಿ ಎರಡನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸೋತರೂ ಬೇರೆ ಎರಡು ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಬೇಲೂರು ಮತ್ತು ಸಕಲೇಶಪುರ ಕ್ಷೇತ್ರ ಈ ಭಾರಿ ಬಿಜೆಪಿಗೆ ಹೆಚ್ಚುವರಿಯಾಗಿ ಬಂದಿವೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನ ಅಭ್ಯರ್ಥಿ ಎಚ್.ಕೆ. ಕುಮಾರಸ್ವಾಮಿಗೆ ಸೋಲಿನ ಶಾಕ್ ಸಿಕ್ಕಿದೆ. ಬಿಜೆಪಿಯ ಎಸ್ ಮಂಜುನಾಥ್ (ಸಿಮೆಂಟ್ ಮಂಜು) ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನ ಮುರಳಿ ಮೋಹನ್ ಶೇ. 25ರಷ್ಟು ಮತ ಪಡೆದು ತ್ರಿಕೋನ ಫೈಟ್​ಗೆ ಕಾರಣವಾಗಿದ್ದಾರೆ.

ಸಕಲೇಶಪುರ ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ ವಿವರ

  • ಬಿಜೆಪಿ: ಎಸ್ ಮಂಜುನಾಥ್– 58,073 ಮತಗಳು
  • ಜೆಡಿಎಸ್: ಎಚ್.ಕೆ. ಕುಮಾರಸ್ವಾಮಿ– 56,113 ಮತಗಳು
  • ಕಾಂಗ್ರೆಸ್: ಮುರಳಿ ಮೋಹನ್– 42,613 ಮತಗಳು

ಇದನ್ನೂ ಓದಿShravanabelagola Election 2023 Winner: ಶ್ರವಣಬೆಳಗೊಳದಲ್ಲಿ ಸಿ.ಎನ್. ಬಾಲಕೃಷ್ಣಗೆ ಹ್ಯಾಟ್ರಿಕ್ ಗೆಲುವು; ಕಾಂಗ್ರೆಸ್ ಪೈಪೋಟಿ ವಿಫಲ

2018ರಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಸಿಕ್ಕ ಗೆಲುವಿನ ಅಂತರ 5 ಸಾವಿರಕ್ಕಿಂತಲೂ ಕಡಿಮೆ. ನಾರ್ವೆ ಸೋಮಶೇಖರ್ ಬಿಜೆಪಿ ಟಿಕೆಟ್ ಪಡೆದು ಕುಮಾರಸ್ವಾಮಿಗೆ ತೀವ್ರ ಪೈಪೋಟಿ ನೀಡಿದ್ದರು. ಈ ಬಾರಿ ಮಂಜುನಾಥ್​ಗೆ ಬಿಜೆಪಿ ಟಿಕೆಟ್ ನೀಡಿತ್ತು. ಇನ್ನು, ಹಾಸನದಲ್ಲಿ ಹೆಚ್​ಡಿ ದೇವೇಗೌಡ, ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡರಂತಹ ದಿಗ್ಗಜರ ಸಮ್ಮುಖದಲ್ಲಿ ಬಿಜೆಪಿಯಲ್ಲಿ ಪ್ರಬಲ ಮುಖಂಡ ಆಗಿದ್ದವರು ಬಿಬಿ ಶಿವಪ್ಪ. ಹಾಸನದಲ್ಲಿ ಕೇಸರಿ ಬಾವುಟ ಹಾರಿಸಿದ ಮೊದಲಿಗರಲ್ಲಿ ಶಿವಪ್ಪ ಸೇರುತ್ತಾರೆ. 1994 ಮತ್ತು 1999ರ ಚುನಾವಣೆಯಲ್ಲಿ ಬಿಬಿ ಶಿವಪ್ಪ ಬಿಜೆಪಿ ಟಿಕೆಟ್​ನಲ್ಲಿ ಸಕಲೇಶಪುರದಲ್ಲಿ ಗೆಲುವು ಕಂಡಿದ್ದರು. ಅದಾದ ಬಳಿಕ ಬಿಜೆಪಿಗೆ ಇಲ್ಲಿ ಗೆಲುವು ಸಿಕ್ಕಿರಲಿಲ್ಲ. ಬಿಜೆಪಿ ಸಂಸದರಾಗಿರುವ ಪ್ರತಾಪ್ ಸಿಂಹ ಸಕಲೇಶಪುರದವರೇ ಆಗಿರುವುದರಿಂದ ಅವರ ಪ್ರಭಾವದಿಂದಲಾದರೂ ಬಿಜೆಪಿ ಇಲ್ಲಿ ಗೆಲುವು ಕಾಣಬಹುದು ಎಂಬ ನಿರೀಕ್ಷೆ ಇತ್ತು. ಅದು ನಿಜವಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿ