ರೋಡ್‌ ಶೋ ವೇಳೆ ಪೊಲೀಸರ ವಿರುದ್ಧ ಸಿಎಂ ಬೊಮ್ಮಾಯಿ ಗರಂ: ಮೊಬೈಲ್‌ ಒಳಗಿಡುವಂತೆ ವಾರ್ನಿಂಗ್‌

ರೋಡ್​ ಶೋ ವೇಳೆ ಪೊಲೀಸರಿಗೆ ಸಿಎಂ ಬಸವರಾಜ ಬೊಮ್ಮಾಯಿ ವಾರ್ನಿಂಗ್​ ನೀಡಿರುವಂತಹ ಘಟನೆ ಜಿಲ್ಲೆಯ ಸವಣೂರಿನಲ್ಲಿ ಸಿಎಂ ರೋಡ್‌ ಶೋ ವೇಳೆ ನಡೆದಿದೆ.

ರೋಡ್‌ ಶೋ ವೇಳೆ ಪೊಲೀಸರ ವಿರುದ್ಧ ಸಿಎಂ ಬೊಮ್ಮಾಯಿ ಗರಂ: ಮೊಬೈಲ್‌ ಒಳಗಿಡುವಂತೆ ವಾರ್ನಿಂಗ್‌
ಸಿಎಂ ಬೊಮ್ಮಾಯಿ

Updated on: Apr 24, 2023 | 10:54 PM

ಹಾವೇರಿ: ರೋಡ್​ ಶೋ ವೇಳೆ ಪೊಲೀಸರಿಗೆ ಸಿಎಂ ಬಸವರಾಜ ಬೊಮ್ಮಾಯಿ  (Basavaraj Bommai)  ವಾರ್ನಿಂಗ್​ (Warning) ನೀಡಿರುವಂತಹ ಘಟನೆ ಜಿಲ್ಲೆಯ ಸವಣೂರಿನಲ್ಲಿ ಸಿಎಂ ರೋಡ್‌ ಶೋ ವೇಳೆ ನಡೆದಿದೆ. ಸಿಎಂ ಬೊಮ್ಮಾಯಿ ಭಾಷಣವನ್ನು ಮೊಬೈಲ್‌ನಲ್ಲಿ ಕಾನ್ಸ್‌ಟೇಬಲ್​ ರೆಕಾರ್ಡ್‌ ಮಾಡುತ್ತಿದ್ದರು. ನನ್ನ ಭಾಷಣವನ್ನು ಬೇರೆಯವರಿಗೆ ಕೇಳಿಸುವ ಕೆಲಸ ಮಾಡಬಾರದು. ಇಂತಹ ಕೆಲಸವನ್ನು ಪೊಲೀಸರು ಮಾಡುವುದು ಸರಿಯಲ್ಲ. ನಾನು ನೀಡುತ್ತಿರುವ ವಾರ್ನಿಂಗ್ ಇದು, ಮೊಬೈಲ್‌ ಒಳಗಡೆ ಇಡು ಎಂದು ಸಿಎಂ ಬೊಮ್ಮಾಯಿ ಪೊಲೀಸರ ವಿರುದ್ಧ ಗರಂ ಆಗಿದ್ದಾರೆ.

ಶಿಗ್ಗಾಂವಿಯಲ್ಲಿ ಬಿಜೆಪಿ ಸುನಾಮಿ ಇದೆ

ಸವಣೂರು ಪಟ್ಟಣದಲ್ಲಿ ಬಳಿಕ ಮಾತನಾಡಿ ಅವರು, ಶಿಗ್ಗಾಂವಿಯಲ್ಲಿ ಬಿಜೆಪಿ ಸುನಾಮಿ ಇದೆ. ಇಲ್ಲಿಯ ಅಭ್ಯರ್ಥಿ 25 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂದು ತಮ್ಮ ಬಗ್ಗೆ ತಾವೇ ವಿಶ್ವಾಸ ವ್ಯಕ್ತಪಡಿಸಿಕೊಂಡರು.
25 ಅಲ್ಲಾ, 50 ಸಾವಿರ ಅಂತಾ ಕಾರ್ಯಕರ್ತರು ಘೋಷಣೆ ಹಾಕಿದರು. ಮೋತಿತಲಾಬ್ ಕೆರೆ ತುಂಬಿಸುವ ಕಾರ್ಯ ಮಾಡಿದ್ದೇನೆ. ಮೊದಲು ಆ ಕೆರೆಯಲ್ಲಿ ಚಿನ್ನಿದಾಂಡು, ಗೊಲಿ ಆಡುತ್ತಿದ್ದರು.

ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ: ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಜನರಿಗೆ ಮೋಸ ಮಾಡುವ ಕೆಲಸ ಮಾಡಿದೆ

25 ಕೋಟಿ ರೂ. ವೆಚ್ಚದಲ್ಲಿ ಸವಣೂರು ಅಭಿವೃದ್ಧಿ ಮಾಡಿದ್ದಾರೆ. ತಾಯಿ ಮಗುವಿನ ಆಸ್ಪತ್ರೆಗೆ, ಆಯುರ್ವೇದ ಕಾಲೇಜು, ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟನೆ ಆಗಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಜನರಿಗೆ ಮೋಸ ಮಾಡುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ನಾನು 10 ಕೆಜಿ ಅಕ್ಕಿ ಕೊಟ್ಟಿದ್ದೇನೆ. ಮೋದಿ ಅಕ್ಕಿ, ಸಿದ್ದರಾಮಯ್ಯ ಖಾಲಿ ಚೀಲ. ಯಾರೋದು ದುಡ್ಡು ಎಲ್ಲಮ್ಮ ಜಾತ್ರೆ. 200 ಯುನಿಟ್ ವಿದ್ಯುತ್ ಫ್ರೀ ಅಂತಾರೆ ಚುನಾವಣೆ ಮಾತ್ರ ಗ್ಯಾರಂಟಿ, ನಂತರ ಗಳಘಂಟೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಆಮೇಲೆ ಗಳಗಂಟೆ

ಕಾಂಗ್ರೆಸ್ ಸುಳ್ಳು ಭರವಸೆ ಕೊಡುವ ಪಕ್ಷ. ಕಾಂಗ್ರೆಸ್ ಸರ್ಕಾರ ಒಂದು ದೌರ್ಭಾಗ್ಯ. ಅದಕ್ಕೆ 2018ರಲ್ಲಿ ಮನೆಗೆ ಕಳುಹಿಸಿದ್ದಾರೆ. ಈಗ ಹೊಸದಾಗಿ ಅಡ್ಡಸೋಗು ತಕ್ಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್​ನ ಪ್ರಣಾಳಿಕೆಯ ಬಗ್ಗೆ ಸಿಎಂ ಲೇವಡಿ ಮಾಡಿದರು. ಮೋಸ ಮಾಡುವಂತದ್ದು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್ ಅಂತಾ ಬಂದಿದೆ. ಅದು ಬೋಗಸ್ ಕಾರ್ಡ್ ಉಪ್ಪಿನಕಾಯಿ ಹಾಕಬಹುದು ಅಷ್ಟೇ. ಚುನಾವಣೆ ಆಗುವವರೆಗೂ ಗ್ಯಾರಂಟಿ ಆಮೇಲೆ ಗಳಗಂಟೆ ಎಂದು ವ್ಯಂಗ್ಯವಾಡಿದರು.

ಜನರಿಗೆ ಇವರ ಮೇಲೆ ಭರವಸೆ ಇಲ್ಲ

ಆ ಭಾಗ್ಯ ಈ ಭಾಗ್ಯ ಅಂತಾ ಹೇಳಿದರು. ಯಾವ ಭಾಗ್ಯನು ಜನರಿಗೆ ಮುಟ್ಟಲಿಲ್ಲ. ಹತ್ತು ಕೆ.ಜಿ ಅಕ್ಕಿ ಕೊಡುತ್ತೇನೆ ಅಂತಾ ಕೈ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿಯವರ 30 ರೂಪಾಯಿ ಕೆ‌.ಜಿ ಅಕ್ಕಿ. ಸಿದ್ದರಾಮಯ್ಯದು 3 ರೂಪಾಯಿ ಗೋಣಿ ಚೀಲ. ಅನ್ನ ಭಾಗ್ಯ ನಮ್ದು ಅಂತಾ ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರಿಗೆ ಇವರ ಮೇಲೆ ಭರವಸೆ ಇಲ್ಲ. ಅದಕ್ಕೆ ಇವರು ಗ್ಯಾರಂಟಿ ಕಾರ್ಡ್ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Mon, 24 April 23