ಮೇ 10ರ ವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ: ಬಸವರಾಜ ಬೊಮ್ಮಾಯಿ ವ್ಯಂಗ್ಯ

|

Updated on: May 01, 2023 | 8:22 PM

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವ್ಯಂಗ್ಯವಾಡಿದರು. ಮೇ 10ರವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ ಎಂದರು.

ಮೇ 10ರ ವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ: ಬಸವರಾಜ ಬೊಮ್ಮಾಯಿ ವ್ಯಂಗ್ಯ
ಚಾಮರಾಜ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ
Follow us on

ಮೈಸೂರು: ಮೇ 10ರವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ (Congress Guarantee Announcements) ಎಂದು ಹೇಳುವ ಮೂಲಕ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದರು. ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಂದ್ರ ಅವರ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಜನರಿಗೆ ಮೋಸ ಮಾಡುತ್ತಿದೆ. ಚುನಾವಣೆಗಾಗಿ ಕಾಂಗ್ರೆಸ್ ಸ್ಟಂಟ್ ಮಾಡುತ್ತಿದೆ ಎಂದು ಹೇಳಿದರು.

ನಾಗೇಂದ್ರ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ನಾಗೇಂದ್ರ ಎಂದು ಹೇಳಿದ ಸಿಎಂ ಬೊಮ್ಮಾಯಿ, ಶಾಸಕರಾಗುವ ಮುಂಚೆ ಚಾಮರಾಜ ಕ್ಷೇತ್ರ ಯಾವ ರೀತಿ ಇತ್ತು? ಈಗ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂದು ನೋಡಿ. ಮೈಸೂರು ಅಂತರಾಷ್ಟ್ರೀಯ ನಗರ ಸಾಂಸ್ಕೃತಿಕ ನಗರವಾಗಿದೆ. ಮೈಸೂರು ಟೂರಿಸಂ ಸರ್ಕಿಟ್ ಮಾಡಿ ಅಭಿವೃದ್ಧಿಗೆ ಬದ್ಧ. ಮೈಸೂರು ದಸರಾಗೆ ವಿಶೇಷ ಅನುದಾನ ನೀಡಿ ಆಚರಣೆ ಮಾಡಿದ್ದೇವೆ, ಈ ಭಾಗದಲ್ಲಿ ಹತ್ತು ಹಲವು ಅಭಿವೃದ್ಧಿ ಮಾಡಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಮತ್ತೆ ಬಿಜೆಪಿ ಸರ್ಕಾರ ಬರಬೇಕಿದೆ ಎಂದರು.

ಇದನ್ನೂ ಓದಿ: Karnataka Assembly Polls; ಬಿಜೆಪಿ ಅಧಿಕಾರಕ್ಕೆ ಬಂದರೆ 5 ಕೆಜಿ ಅಕ್ಕಿ ಜೊತೆ ಇನ್ನೈದು ಕೆಜಿ ಸಿರಿಧಾನ್ಯ ಮತ್ತು ಅರ್ಧ ಲೀಟರ್ ನಂದಿನಿ ಹಾಲು ಕೊಡುತ್ತೇವೆ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ಕೇವಲ ಘೋಷಣೆಗೆ ಸೀಮಿತವಾಗಿದ್ದಾರೆ. ಅಕ್ಕಿ ಬಗ್ಗೆ ಹೇಳುತ್ತಾರೆ ಬಿಜೆಪಿಗೆ ಓಟ್ ಹಾಕಿ ಅಂತಾರೆ. ಗ್ಯಾರಂಟಿ ಕಾರ್ಡ್ ಅಲ್ಲಿ ಡಿ ಕೆ ಶಿವಕುಮಾರ್ ನಂಬರ್ ಇದ್ದು, ಅದಕ್ಕೆ ಕಾಲ್ ಮಾಡುವಂತೆ ಹೇಳಿದೆ. ಅದಕ್ಕೆ ಬೇಡ ಅಂತಾ ಹರಿದು ಹೋದರು ಎಂದು ಹೇಳಿದರು. ಅಲ್ಲದೆ, ಬಿಜೆಪಿ ಶಾಲನ್ನು ತಿರುಗಿಸುತ್ತಾ ಕಾರ್ಯಕರ್ತರನ್ನು ಹುರಿದುಂಬಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.

ಬಿಜೆಪಿ ಅಭ್ಯರ್ಥಿ ನಾಗೇಂದ್ರ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದ ಸಿಎಂ ಬೊಮ್ಮಾಯಿ, ಮೈಸೂರು ಅಭಿವೃದ್ಧಿಗೆ ಎಷ್ಟು ಹಣ ಬೇಕೋ ಮಾಡುತ್ತೇವೆ. ಎಲ್ಲರೂ ಸಂಕಲ್ಪ ಮಾಡಿ ಪ್ರತಿಯೊಬ್ಬರು ಮನೆ ಮನೆಗೆ ಹೋಗಿ ನಾಗೇಂದ್ರ ಗೆಲ್ಲಿಸುವಂತೆ ಮನವಿ ಮಾಡಿ. ಆ ಮೂಲಕ ಸಿದ್ದರಾಮಯ್ಯಗೆ ಮುಖಭಂಗ ಮಾಡಿ ಎಂದು ಹೇಳಿದರು.

ಚಾಮರಾಜ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ

ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ನಾಗೇಂದ್ರ ಪರ ಸಿಎಂ ಬೊಮ್ಮಾಯಿ ಅವರು ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು. ಮೈಸೂರಿನ ಕುಂಬಾರಕೊಪ್ಪಲು ಬಡಾವಣೆಯಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಸಿಎಂ ಬೊಮ್ಮಾಯಿಗೆ ನಟಿ ತಾರಾ ಅನುರಾಧ, ಮಾಜಿ ಎಂಎಲ್‌ಎ ನರೇಂದ್ರ ಬಾಬು ಅವರು ಸಾಥ್​​​ ನೀಡಿದರು. ಕುಂಬಾರಕೊಪ್ಪಲು ಬಡಾವಣೆಯಿಂದ ಆರಂಭವಾದ ರೋಡ್ ಶೋ, ಮಂಚೇಗೌಡನಕೊಪ್ಪಲು, ಹೆಬ್ಬಾಳ್ ಬಡಾವಣೆಗಳಲ್ಲಿ ಸಂಚರಿಸಿತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Mon, 1 May 23