Karnataka Assembly Polls: ಪ್ರಣಾಳಿಕೆಯಲ್ಲಿ 5 ಕೆಜಿ ಸಿರಿಧಾನ್ಯಗಳನ್ನು ನೀಡುವ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ ಮೈಸೂರಲ್ಲಿ ಸಿರಿಧಾನ್ಯಗಳ ಊಟ ಸವಿದರು!

Karnataka Assembly Polls: ಪ್ರಣಾಳಿಕೆಯಲ್ಲಿ 5 ಕೆಜಿ ಸಿರಿಧಾನ್ಯಗಳನ್ನು ನೀಡುವ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ ಮೈಸೂರಲ್ಲಿ ಸಿರಿಧಾನ್ಯಗಳ ಊಟ ಸವಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2023 | 5:07 PM

ಅವರ ಮುಂಭಾಗ ಎಡಪಕ್ಕದಲ್ಲಿ ನಟಿ ಮತ್ತು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಊಟ ಮಾಡುತ್ತಿರುವುದನ್ನು ನೋಡಬಹುದು.

ಮೈಸೂರು: ಇಂದು ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ (manifesto) ಬಿಜೆಪಿ 5ಕೆಜಿ ಅಕ್ಕಿಯ ಜೊತೆ 5 ಕೆಜಿ ಸಿರಿಧಾನ್ಯಗಳನ್ನು ನೀಡುವ ಘೋಷಣೆ ಮಾಡಿದೆ. ಪ್ರಾಯಶಃ ಇದೇ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇತರ ಬಿಜೆಪಿ ಮುಖಂಡರ ಜೊತೆ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಹೋಟೆಲೊಂದರಲ್ಲಿ ಸಿರಿಧಾನ್ಯಗಳ (millets) ಊಟ ಮಾಡಿದರು. ನಗರದಲ್ಲಿ ರೋಡ್ ಶೋ ನಡೆಸಿದ ಬಳಿಕ ಬಿಸಿಲ ಝಳಕ್ಕೆ ಬಸವಳಿದು ಹಸಿದಿದ್ದ ಮುಖ್ಯಮಂತ್ರಿಗಳು ಪಲ್ಯಗಳೊಂದಿಗೆ ಬೆಣ್ಣೆ ಬೆರೆಸಿಕೊಂಡು ಊಟ ಸವಿದರು. ಅವರ ಮುಂಭಾಗ ಎಡಪಕ್ಕದಲ್ಲಿ ನಟಿ ಮತ್ತು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಊಟ ಮಾಡುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ