AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್​ ಅನ್ನು ಲೀಟರ್‌ನಲ್ಲಿ ಅಳೆಯುವವರನ್ನು ಹುಚ್ಚ ಎನ್ನದೇ ಏನು ಹೇಳಬೇಕು: ರಾಹುಲ್ ಗಾಂಧಿ ವಿರುದ್ಧ ಯತ್ನಾಳ್​ ಕಿಡಿ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ 200 ಲೀಟರ್ ವಿದ್ಯುತ್ ಉಚಿತ ಅಂತಾರೆ. ವಿದ್ಯುತ್​ನ್ನು ಅವರು ಲೀಟರ್‌ನಲ್ಲಿ ಅಳೆಯುತ್ತಾರೆ. ಆತನಿಗೆ ಹುಚ್ಚ ಎನ್ನದೇ ಏನು ಹೇಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ವ್ಯಂಗ್ಯವಾಡಿದ್ದಾರೆ.

ಗಂಗಾಧರ​ ಬ. ಸಾಬೋಜಿ
|

Updated on:May 01, 2023 | 9:18 PM

Share

ಧಾರವಾಡ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ 200 ಲೀಟರ್ ವಿದ್ಯುತ್ ಉಚಿತ ಅಂತಾರೆ. ವಿದ್ಯುತ್​ನ್ನು ಅವರು ಲೀಟರ್‌ನಲ್ಲಿ ಅಳೆಯುತ್ತಾರೆ. ಆತನಿಗೆ ಹುಚ್ಚ ಎನ್ನದೇ ಏನು ಹೇಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ವ್ಯಂಗ್ಯವಾಡಿದ್ದಾರೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಟಾಟೆಯಿಂದ ಬಂಗಾರ ತೆಗೆಯುವ ವ್ಯಕ್ತಿ ಆತ ಎಂದು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್‌ಗೆ ಹತಾಶೆಯಾಗಿದೆ. ಸಿದ್ದರಾಮಯ್ಯ ಬಿಜೆಪಿ ಪರ ಉಚಿತ ಪ್ರಚಾರ ಮಾಡುತ್ತಿದ್ದಾರೆ. ನಾವು ಸುಮ್ಮನೆ ಸ್ಟಾರ್ ಪ್ರಚಾರಕ ಆಗಿದ್ದೇವೆ ಎಂದರು.

ರಾಹುಲ್ ಗಾಂಧಿ, ಸಿದ್ದರಾಮಯ್ಯ ಇಬ್ಬರೇ ನಮಗೆ ಸಾಕು. ಅವರಿಬ್ಬರೇ ನಮ್ಮ ಪಕ್ಷದ ಸ್ಟಾರ್ ಪ್ರಚಾರಕರು. ಈಗ ಅದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಸೇರಿದ್ದಾರೆ. ಯಾವುದೇ ಪಕ್ಷದ ಪ್ರಧಾನಿ ಇರಲಿ ಗೌರವದಿಂದ ಮಾತನಾಡಬೇಕು. ಇದು ಖರ್ಗೆಯವರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

ಪ್ರಿಯಾಂಕ ಖರ್ಗೆ ಗಂಡೋ ಹೆಣ್ಣೋ? ಯತ್ನಾಳ್ ಪ್ರಶ್ನೆ

ಪ್ರಿಯಾಂಕ ಖರ್ಗೆ ಅಂತಾ ಹೆಸರಿದೆ. ಅದು ಗಂಡಸೋ, ಹೆಣ್ಣೋ ಗೊತ್ತಿಲ್ಲ. ಪ್ರಿಯಾಂಕಾ ವಾದ್ರಾ ಅಂತಾ ಕೂಡ ಹೆಸರಿದೆ. ಹೀಗಾಗಿ ಪ್ರಿಯಾಂಕಾ ಹೆಸರಿನ ಇಬ್ಬರಲ್ಲಿ ಯಾರು ಗಂಡು, ಯಾರು ಹೆಣ್ಣು ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಮೇ 10ರ ವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ: ಬಸವರಾಜ ಬೊಮ್ಮಾಯಿ ವ್ಯಂಗ್ಯ

ನುಡಿದಂತೆ ನಡೆಯುವ ಗೌಡ ನಾನು

ನಾನು ಹಿಂದೊಮ್ಮೆ ಧಾರವಾಡಕ್ಕೆ ಬಂದಿದ್ದೆ. ಆಗ ಪತ್ರಕರ್ತರು ದೇಸಾಯಿ ಪ್ರಚಾರಕ್ಕೆ ಬರ್ತಿರಾ ಅಂತಾ ಕೇಳಿದ್ದರು. ಅಂದು ಬರ್ತೇನಿ ಅಂತಾ ಹೇಳಿದ್ದೆ. ನುಡಿದಂತೆ ಬಂದಿದ್ದೇನೆ. ನುಡಿದಂತೆ ನಡೆಯುವ ಗೌಡ ನಾನು. ಬೋಗಸ್ ಹೇಳುವ ಗೌಡ ಅಲ್ಲ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಇದ್ದೆ. ಈಗ ಆ ಹೋರಾಟ ಮುಗಿದಿದೆ.

ಡಿಕೆಶಿಗೆ ಧಮ್​ ಇದ್ದರೆ ಮೀಸಲಾತಿ ರದ್ದು ಮಾಡಲಿ 

ನಮ್ಮ ಹೋರಾಟದ ಫಲವಾಗಿ ವಿವಿಧ ಸಮುದಾಯಗಳಿಗೆ ಮೀಸಲಾತಿ ಸಿಕ್ಕಿದೆ. ಮೀಸಲಾತಿ ಕೊಟ್ಟ ಮೇಲೆ ಅದರ ಗೆಜೆಟ್ ಪ್ರತಿಗೆ ಕಾಂಗ್ರೆಸ್ ಬೆಂಕಿ ಹಚ್ಚಿತ್ತು. ನಾವು ಅದನ್ನು ಪೂಜೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಅದನ್ನು ಸುಡುವ ಪ್ರಯತ್ನ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ನಮ್ಮ ಸರ್ಕಾರ ಬಂದರೆ ಮೀಸಲಾತಿ ರದ್ದು ಅಂತಾ ಹೇಳಿದ್ದಾರೆ. ಡಿಕೆಶಿಗೆ ಧಮ್, ತಾಕತ್ ಇದ್ದರೆ ನಮಗೆ ಕೊಟ್ಟ ಮೀಸಲಾತಿ ರದ್ದು ಮಾಡಿ ನೋಡೋಣ. ಅದನ್ನು ತೆಗೆದು ಹಾಕುವ ತಾಕತ್ತು ಇದೆಯಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಒಳಒಪ್ಪಂದಕ್ಕೆ ಪುಷ್ಟಿ ನೀಡಿತೇ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ?

ಲಕ್ಷ್ಮೀ ಹೆಬ್ಬಾಳಕರ ಮತ್ತು ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ  

ಲಕ್ಷ್ಮೀ ಹೆಬ್ಬಾಳಕರ ಮತ್ತು ಡಿ.ಕೆ ಶಿವಕುಮಾರ್​ ಮೇಲೆ‌ ಯತ್ನಾಳ್ ವಾಗ್ದಾಳಿ ಮಾಡಿದ್ದು, ಐಟಿ ರೇಡ್‌ಗಳು ಆಗುತ್ತವೆ ಅಂತಾ ಬೆಳಗಾವಿ ಶಾಸಕರೊಬ್ಬರು ಹೇಳಿದ್ದಾರೆ. ಐವತ್ತು ಕಡೆ ಆಗುತ್ತದೆ ಎಂದಿದ್ದಾರೆ. ಮತ್ತ ರೊಕ್ಕ ಯಾಕೆ ಇಟ್ಟಿದ್ದೀರಾ ಎಂದರು. ಆ ರೊಕ್ಕ ಇದರೆ ಸರ್ಕಾರಕ್ಕೆ ಕೊಟ್ಟು ಬಿಡು. ಸಿಕ್ಕಾಪಟ್ಟೆ ಲೂಟಿ ಮಾಡಿದ್ದಾರೆ. ಇನ್ನು ಬಹಳ ಜನರದ್ದು ಹೊರಗೆ ಬರುವುದು ಇದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜಾಮೀನಿನ ಮೇಲೆ ಇದ್ದಾರೆ. ಅವರೆಲ್ಲ ಜೈಲಿಗೆ ಹೋಗಬೇಕು. ಇಲ್ಲೊಬ್ಬ ಕರ್ನಾಟಕದ ಪುಣ್ಯಾತ್ಮ ಜಾಮೀನಿನ ಮೇಲೆ‌ ಇದ್ದಾನೆ. ಜೈಲಿಗೆ ಹೋಗಿ ಬಂದಿದ್ದಾನೆ. ಮಿಸ್ಟರ್ ಯತ್ನಾಳ್​ ಹುಷಾರ್ ಅಂತಾ ಹೇಳಿದ್ದಾನೆ. ಧಮ್ ಇದ್ದರೆ ಬಾ ಅಂತಾ ಹೇಳುವೆ ಅವನಿಗೆ. ಕಾಂಗ್ರೆಸ್​ ಇನ್ನು ಅಧಿಕಾರಕ್ಕೆ ಬಂದಿಲ್ಲ‌, ಆದರೂ ನಾಲಿಗೆ ಕತ್ತರಿಸುತ್ತೇನೆ ಅಂತಾರೆ. ಅಧಿಕಾರಕ್ಕೆ ಬಂದರೆ ಏನಾಗಬೇಡ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Mon, 1 May 23

ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ