ಬೆಳಗಾವಿ: ಕಾಂಗ್ರೆಸ್ ಪದೇ ಪದೇ ಸಾವರ್ಕರ್‌ಗೆ ಅಪಮಾನ ಮಾಡುತ್ತದೆ. ಅಷ್ಟೇ ಅಲ್ಲದೇ ಆಂಜನೇಯನನ್ನು ಕೂಡ ಕಾಂಗ್ರೆಸ್ನವರು ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಾಗ್ದಾಳಿ ಮಾಡಿದರು. ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾವರ್ಕರ್ ಅಪಮಾನ ಮಾಡಿದ್ದಾರೆ. ನೀವು 10 ಜನ್ಮ ಹುಟ್ಟಿಬಂದರೂ ಸಾವರ್ಕರ್‌ರಂತಹ ಬಲಿದಾನ ನೋಡಕ್ಕಾಗಲ್ಲ ಎಂದು ಕಿಡಿಕಾರಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಅಟಲ್ ಕ್ಯಾಂಟೀನ್ ಆರಂಭ ಮಾಡುತ್ತೇವೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಅನೇಕ ಯೋಜನೆ ಜಾರಿಗೊಳಿಸಿದ್ದೇವೆ.
ಬೆಳಗಾವಿ ಜಿಲ್ಲೆಯಲ್ಲಿ 25 ಕೋಟಿ ಹಣ ಹೂಡಿಕೆ ಯೋಜನೆ ಇದೆ. ಬಿಜೆಪಿ ಸರ್ಕಾರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಆರಂಭಿಸಿದೆ. ಪ್ರಧಾನಿ ಮೋದಿ ಬಂದ ಮೇಲೆ ದೇಶದಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ. ಲಕ್ಷ್ಮಣ ಸವದಿ ಬಿಜೆಪಿಗೆ ದ್ರೋಹ ಮಾಡಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಗೆಲ್ಲಿಸುವಂತೆ ಶಾ ಮನವಿ ಮಾಡಿದರು.
ಕಾಂಗ್ರೆಸ್ನವರು ಮುಸ್ಲಿಂರಿಗೆ ಮೀಸಲಾತಿ ಕೊಡುತ್ತೇವೆ ಅಂತಿದ್ದಾರೆ. ಲಿಂಗಾಯತರ ಮೀಸಲಾತಿ ಕಿತ್ತುಕೊಂಡು ಮುಸ್ಲಿಂ ಸಮುದಾಯಕ್ಕೆ ಕೊಡುತ್ತಾರೆ. ಲಕ್ಷ್ಮಣ ಪದೇ ಪದೇ ನನ್ನ ಬಳಿ ಮಹದಾಯಿ ಯೋಜನೆಗಾಗಿ ಬರುತ್ತಿದ್ದರು. ನೀರಾವರಿ ಯೋಜನೆ ಸಲುವಾಗಿ ನನ್ನ ಬಳಿ ಬಂದಾಗ ಕಾಂಗ್ರೆಸ್‌ಗೆ ಬೈಯ್ಯುತ್ತಿದ್ರಿ ಇವತ್ತೇನಾಗಿದೆ ಎಂದರು.
ಸೋನಿಯಾ ಗಾಂಧಿ ಗೋವಾ ಚುನಾವಣೆ ವೇಳೆ ಕರ್ನಾಟಕಕ್ಕೆ ಮಹದಾಯಿ ನೀರು ಕೊಡಲ್ಲ ಅಂದಿದ್ದರು. ಆದರೆ ಸೋನಿಯಾ ಗಾಂಧಿನೂ ಹೋದ್ರೂ ಅವರ ಪಕ್ಷವೂ ಗೋವಾದಿಂದ ಹೋಯಿತು. ಮೋದಿ ಬಂದ ಮೇಲೆ ಉತ್ತರ ಕರ್ನಾಟಕಕ್ಕೆ ಮಹದಾಯಿ ನೀರು ಕೊಡುವ ಕೆಲಸ ಆಗಿದೆ. ಜಾರಕಿಹೊಳಿ ಮತ್ತು ಮಹೇಶ್ ಬಂದ ಮೇಲೆ ಯಡಿಯೂರಪ್ಪ ಸರ್ಕಾರ ಬಂದಿದೆ ಎಂದು ಹೇಳಿದರು.
ಇದನ್ನೂ ಓದಿ: PM Modi Rodshow: ಬಿಜೆಪಿಯನ್ನು ಬೆಂಗಳೂರು ಬಯಸುತ್ತಿದೆ, ಸಾಕ್ಷಿ ಇಲ್ಲಿದೆ ನೋಡಿ; ಪ್ರಧಾನಿ ಮೋದಿ
ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 5 ಗ್ಯಾರಂಟಿ ನೀಡಿದೆ. ಗುಜರಾತ್ ಚುನಾವಣೆಯಲ್ಲೂ ರಾಹುಲ್ 5 ಗ್ಯಾರಂಟಿ ನೀಡಿದ್ದರು. ಆದರೆ ಗುಜರಾತ್ ರಾಜ್ಯದ ಜನ ಕಾಂಗ್ರೆಸ್ ಪಕ್ಷ ಸೋಲಿಸಿದರು. ಉತ್ತರ ಪ್ರದೇಶ, ಮಣಿಪುರದಲ್ಲೂ ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ರಾಹುಲ್ ಗಾಂಧಿಯ ಗ್ಯಾರಂಟಿಗಳನ್ನು ದೇಶದ ಜನ ನಂಬುವುದಿಲ್ಲ.
ಭಾರತದ ಜನರು ನರೇಂದ್ರ ಮೋದಿ ನಂಬುತ್ತಾರೆ. ಮೋದಿಯನ್ನು ಮಲ್ಲಿಕಾರ್ಜುನ ಖರ್ಗೆ ವಿಷದ ಸರ್ಪ ಎನ್ನುತ್ತಾರೆ. ಖರ್ಗೆಯವರೇ ಮೋದಿಯನ್ನು ಎಷ್ಟು ಟೀಕಿಸುತ್ತೀರೋ ಟೀಕಿಸಿ. ನೀವು ಎಷ್ಟು ಬೈಯ್ಯುತ್ತೀರೋ ಕಮಲ ಅಷ್ಟು ಅರಳುತ್ತದೆ. ನರೇಂದ್ರ ಮೋದಿಯನ್ನು ಎಷ್ಟು ಬೈದರೂ ನಿಮಗೆ ಹೊಟ್ಟೆ ತುಂಬಿಲ್ಲ. ಅದಕ್ಕೆ ಬಜರಂಗಬಲಿ ವಿರುದ್ಧ ಕಾಂಗ್ರೆಸ್ನವರು ನಿಂತಿದ್ದಾರೆ ಎಂದು ಹರಿಹಾಯ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ