ಮುನಿಸು ತಣಿಸುವಲ್ಲಿ ಸಿದ್ದು ಸಕ್ಸಸ್‌, ಕೊನೆಗೂ ಫೈನಲ್ ಆಯ್ತು ಸಿದ್ದರಾಮಯ್ಯ ಕ್ಷೇತ್ರ? ಜ.9ರತ್ತ ಎಲ್ಲರ ಚಿತ್ತ

| Updated By: ರಮೇಶ್ ಬಿ. ಜವಳಗೇರಾ

Updated on: Jan 06, 2023 | 3:14 PM

ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಟಾಪ್‌ ಸೀಕ್ರೆಟ್‌ನಂತೆ ಮೆಂಟೇನ್ ಮಾಡುತ್ತಿದ್ದಾರೆ. ಆದ್ರೆ, ಈ ಗುಟ್ಟು ರಟ್ಟಾಗುವ ಕಾಲ ಹತ್ತಿರವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಮುನಿಸು ತಣಿಸುವಲ್ಲಿ ಸಿದ್ದು ಸಕ್ಸಸ್‌, ಕೊನೆಗೂ ಫೈನಲ್ ಆಯ್ತು ಸಿದ್ದರಾಮಯ್ಯ ಕ್ಷೇತ್ರ? ಜ.9ರತ್ತ ಎಲ್ಲರ ಚಿತ್ತ
ಸಿದ್ದರಾಮಯ್ಯ
Follow us on

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮುಂದಿನ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಬಾದಾಮಿಯಲ್ಲಿ ನಿಲ್ಲುತ್ತಾರಾ? ವರುಣಾದಲ್ಲಿ ಸ್ಪರ್ಧಿಸುತ್ತಾರಾ? ಇಲ್ಲ ಕೋಲಾರದಲ್ಲಿ(Kolar) ಕಣಕ್ಕಳಿಯುತ್ತಾರಾ ಎನ್ನುವ ವಿಚಾರವನ್ನ ಸಿದ್ದರಾಮಯ್ಯ ಟಾಪ್‌ ಸೀಕ್ರೆಟ್‌ನಂತೆ ಮೆಂಟೇನ್ ಮಾಡುತ್ತಿದ್ದಾರೆ. ಆದ್ರೆ, ಈ ಗುಟ್ಟು ರಟ್ಟಾಗುವ ಕಾಲ ಹತ್ತಿರವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ. ಯಾಕಂದ್ರೆ, ಕೋಲಾರದಿಂದಲೇ ಸಿದ್ದರಾಂಯ್ಯ ಕಣಕ್ಕಿಳಿಯುವುದು ಫಿಕ್ಸ್‌ ಎನ್ನುವ ಸುಳಿವು ಸಿಕ್ಕಿದೆ. ಆ ಸುಳಿವೇ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆ.

ಇದನ್ನೂ ಓದಿ: Congress Bus Yatra ಪಕ್ಷ ಸಂಘಟನೆಗೆ ಕಾಂಗ್ರೆಸ್ ಬಸ್ ಯಾತ್ರೆ: ಎರಡು ಪ್ರತ್ಯೇಕ ಸಮಿತಿ ರಚಿಸಿದ ಡಿಕೆ ಶಿವಕುಮಾರ್

ಸಿದ್ದು ನಿವಾಸಕ್ಕೆ ಬಂದ ಮುನಿಯಪ್ಪ & ಟೀಮ್‌!

ಹೌದು… ಮೊನ್ನೇ ಅಷ್ಟೇ ಕೆ.ಹೆಚ್. ಮುನಿಯಪ್ಪ ಅವರು ತಮ್ಮ ತಂಡದೊಂದಿಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಮಹತ್ವದ ಚರ್ಚೆ ನಡೆಸಿದ್ದಾರೆ. ಸಿದ್ದು ನಿವಾಸಕ್ಕೆ ತಮ್ಮ ತಂಡದೊಂದಿಗೆ ಆಗಮಿಸಿದ ಮುನಿಯಪ್ಪ, ಕೋಲಾರದಿಂದಲೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿ, ತಮಗೆ ಅಸಮಾಧಾನ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಖುದ್ದು ಮುನಿಯಪ್ಪ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಬೆಂಬಲ

ಕೋಲಾರದಲ್ಲಿ ಸಿದ್ದರಾಮಯ್ಯಗೆ ಚಿಂತೆಗೀಡು ಮಾಡಿದ್ದೇ ಕೆ.ಹೆಚ್. ಮುನಿಯಪ್ಪ ಬಣ ಮತ್ತು ರಮೇಶ್ ಕುಮಾರ್ ಬಣದ ಮುನಿಸು. ಈಗಾಗಲೇ ರಮೇಶ್ ಕುಮಾರ್ ಬಣ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಆದ್ರೆ, ಮುನಿಯಪ್ಪ ಬಣ ಸಿದ್ದು ವಿರುದ್ಧ ಗರಂ ಆಗಿತ್ತು. ಕಳೆದ ಬಾರಿ ಜಿಲ್ಲೆಗೆ ಸಿದ್ದು ಭೇಟಿ ನೀಡಿದ್ದಾಗಲೂ ಮುನಿಯಪ್ಪ ದೂರ ಉಳಿದು ತಮ್ಮ ಅಸಮಾಧಾನ ಹೊರಹಾಕಿದ್ದರು. ಆದ್ರೀಗ, ಖುದ್ದು ಮುನಿಯಪ್ಪ ಅವರೇ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಬೆಂಬಲ ಘೋಷಿಸಿರುವುದರಿಂದ ಇದ್ದ ಸ್ವಲ್ಪ ಆತಂಕ ದೂರವಾದಂತಾಗಿದೆ. ಈ ಮೂಲಕ ವರುಣಾ ಬಿಟ್ರೆ ಕೋಲಾರವೇ ಇರುವುದರಲ್ಲಿ ಸೇಫೆಸ್ಟ್‌ ಪ್ಲೇಸ್‌ ಎನ್ನುವ ಭಾವನೆ ಬಂದಂತಿದೆ. ಹೀಗಾಗಿ, ಕೋಲಾರದಲ್ಲೇ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಫಿಕ್ಸ್ ಎನ್ನಲಾಗಿದೆ.

Congress Bus Yatra ಪಕ್ಷ ಸಂಘಟನೆಗೆ ಕಾಂಗ್ರೆಸ್ ಬಸ್ ಯಾತ್ರೆ: ಎರಡು ಪ್ರತ್ಯೇಕ ಸಮಿತಿ ರಚಿಸಿದ ಡಿಕೆ ಶಿವಕುಮಾರ್

ಒಳೇಟಿನಿಂದ ತಪ್ಪಿಸಿಕೊಳ್ಳುವುದಕ್ಕೆ ಸಿದ್ದು ರಹಸ್ಯ

ಜನವರಿ 9ರಂದು ಸಿದ್ದರಾಮಯ್ಯ ಮತ್ತೊಮ್ಮೆ ಕೋಲಾರ ಪ್ರವಾಸ ಮಾಡಲಿದ್ದಾರೆ. ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಖಚಿತಪಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.. ಆದ್ರೆ, ಈ ವರೆಗೆ ಟಗರು ಕ್ಷೇತ್ರದ ಸೀಕ್ರೆಟ್‌ ಬಿಟ್ಟುಕೊಡುತ್ತಿಲ್ಲ. ಮುನಿಯಪ್ಪ ಭೇಟಿ ಬಳಿಕವೂ ಎಲ್ಲಿ ಸ್ಪರ್ಧೆ ಎನ್ನುವುದನ್ನು ಬಯಲು ಮಾಡಿಲ್ಲ.. ಹೈಕಮಾಂಡ್‌ ನಿರ್ಧರಿಸುತ್ತೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯರ ಈ ಮಾತು ಕಾದು ಕುಳಿತು ಗೇಮ್‌ ಪ್ಲ್ಯಾನ್‌ ಆಡುವ ತಂತ್ರ ಎನ್ನುವುದಂತೂ ಸ್ಪಷ್ಟ. ವಿರೋಧ ಪಕ್ಷದ ನಾಯಕರ ಜೊತೆ ಸ್ವಪಕ್ಷದ ಕೆಲ ನಾಯಕರ ಒಳೇಟಿನಿಂದ ತಪ್ಪಿಸಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಈ ರಹಸ್ಯ ಟೆಕ್ನಿಕ್‌ ಬಳಸುತ್ತಿದ್ದಾರೆ ಎನ್ನಲಾಗಿದೆ. ಹಾಗಾದ್ರೆ, ಕೋಲಾರವೇ ಸಿದ್ದು ಪಾಲಿಗೆ ಸೇಫ್‌ ಯಾಕೆ ಎನ್ನುವುದಕ್ಕೂ ಕೆಲವೊಂದು ಕಾರಣಗಳಿವೆ..

ಕೋಲಾರವೇ ಸೇಫ್ ಯಾಕೆ?

ಸಿದ್ದರಾಮಯ್ಯರ ಟ್ರೇಡ್‌ ಮಾರ್ಕ್‌ ಮತದಾರರು ಅಹಿಂದ ಮತಬ್ಯಾಂಕ್‌ ಕೋಲಾರದಲ್ಲಿ ಗಟ್ಟಿಯಾಗಿದೆ. ಸಿದ್ದರಾಮಯ್ಯ ಗೆಲ್ಲಬೇಕಂದ್ರೆ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ ಮತಗಳು ಕೈಹಿಡಿಯಬೇಕು. ಹೀಗಾಗಿ, ಬೆಂಗಳೂರಿಗೆ ಹತ್ತಿರವಾಗಿರುವ, ರಾಜ್ಯ ಪ್ರವಾಸಕ್ಕೆ ಟೈಮ್‌ ಸಿಗುವಂತಹ ಕ್ಷೇತ್ರ ಕೋಲಾರ. ಈಗ ಇದ್ದ ಮುನಿಯಪ್ಪ ಒಳೇಟಿನ ಆತಂಕವೂ ಇಲ್ಲ. ಬಾದಾಮಿಯಲ್ಲೇ ಮತ್ತೆ ಸ್ಪರ್ಧಿಸಿದ್ರೆ ಸೇಫ್ ಅಲ್ಲ ಎಂಬ ಸಲಹೆ ಸಿಕ್ಕಿದೆ. ಕಳೆದ ಬಾರಿ ಬಾದಾಮಿಯಲ್ಲಿ ಕೇವಲ 1696 ಮತಗಳ ಅಂತರದಿಂದ ಸಿದ್ದು ಜಯ ಗೆಲುವು ಸಾಧಿಸಿದ್ದರು.. ಈ ಬಾರಿಯೂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಿದ್ರೆ ರಿಸ್ಕ್ ಹೆಚ್ಚು ಎಂಬ ಸಲಹೆ.

ಈ ಎಲ್ಲಾ ಕಾರಣಗಳು ಮತ್ತು ಒಳೇಟಿನ ಲೆಕ್ಕ, ರಾಜ್ಯಪ್ರವಾಸದ ಲೆಕ್ಕ ಎಲ್ಲವನ್ನೂ ಅಳೆದು ತೂಗಿಯೇ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ. ಸದ್ಯ ಕೋಲಾರವೇ ಸಿದ್ದು ಸ್ಪರ್ಧೆಯ ಕ್ಷೇತ್ರ ಎನ್ನುವ ಮಾತುಗಳು ಕೇಳಿಬರ್ತಿದ್ದು, ಜನವರಿ 9ರಂದು ಈ ಊಹಾಪೋಹಗಳಿಗೆ ಮುದ್ರೆ ಒತ್ತುತ್ತಾರಾ ಎಂದು ಕಾದು ನೋಡಬೇಕಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಂಗ್ರೆಸ್​ ನಾಯಕರಿಂದ ಸರಣಿ ಸಭೆ

ಜನವರಿ 9ರಂದು ಸಿದ್ದರಾಮಯ್ಯ ಮತ್ತೊಮ್ಮೆ ಕೋಲಾರ ಪ್ರವಾಸ ಮಾಡಲಿದ್ದು, ಕಾಂಗ್ರೆಸ್​ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲಾರದ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್​ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಕ್ಕಲೇರಿ, ಕುರುಗಲ್, ಅರಾಭಿಕೊತ್ತನೂರು ವೇಮಗಲ್ ಸೇರಿದಂತೆ ಹಲವೆಡೆ ಸರಣಿ ಸಭೆಗಳನ್ನು ಮಾಡುತ್ತಿದ್ದು,. ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರುವ ಪ್ಲ್ಯಾನ್ ಆಗಿದೆ. ಇನ್ನು ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ್ದು, ಇದರಲ್ಲಿ ಕೃಷ್ಣ ಭೈರೇಗೌಡ, ಶ್ರೀನಿವಾಸಗೌಡ, ಎಂಎಲ್​ಸಿ ಅನಿಲ್ ಕುಮಾರ್, ನಜೀರ್ ಅಹ್ಮದ್ ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ಈ ಸಮಾವೇಶದಲ್ಲೇ ಸಿದ್ದರಾಮಯ್ಯ ಅವರು ಕೋಲಾರಿಂದ ಸ್ಪರ್ಧೆ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರಿಂದ ಸಿದ್ದರಾಮಯ್ಯನವರ ಅಭಿಮಾನಿಗಳು ಹಾಗೂ ವಿರೋಧ ಪಕ್ಷದ ನಾಯಕರ ಚಿತ್ತ ಜನವರಿ 9ರಂದು ಕೋಲಾರದಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಮೇಲೆ ನೆಟ್ಟಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

Published On - 3:12 pm, Fri, 6 January 23