Chamarajnagara Election 2023 Winner: ಚಾಮರಾಜನಗರದಲ್ಲಿ ವಿ ಸೋಮಣ್ಣಗೆ ಸೋಲು

ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿದ್ದ ವಿ ಸೋಮಣ್ಣ ಈಗ ಒಂದು ಕ್ಷೇತ್ರದಲ್ಲಿ ಸೋಲಾಗಿದೆ. ಚಾಮರಾನಗರದಲ್ಲಿ ಸೋಮಣ್ಣ ಮುಖಭಂಗವಾಗಿದ್ದು, ವರುಣಾದಲ್ಲಿ ಹಿನ್ನಡೆ ಸಾಧಿಸಿದ್ದಾರೆ.

Chamarajnagara Election 2023 Winner: ಚಾಮರಾಜನಗರದಲ್ಲಿ ವಿ ಸೋಮಣ್ಣಗೆ ಸೋಲು
ವಿ ಸೋಮಣ್ಣ

Updated on: May 13, 2023 | 11:55 AM

ಚಾಮರಾಜನಗರ: ಬೆಂಗಳೂರಿನಿಂದ ವಲಸೆ ಹೋಗಿ ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ವಿ ಸೋಮಣ್ಣ ಅವರಿಗೆ ಸೋಲಾಗಿದೆ. ಕಾಂಗ್ರೆಸ್ ಅಭ್ಯೆರ್ಥಿ ಪುಟ್ಟರಂಗಶೆಟ್ಟಿ ಅವರು ಸತತ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್​ ಸಾಧಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಗಡಿ ಜಿಲ್ಲೆ ಕಾರಣಕ್ಕೆ ಸಾಧಾರಣ ಕ್ಷೇತ್ರಗಳ ಪಟ್ಟಿಯಲ್ಲಿದ್ದ ಚಾಮರಾಜನಗರವು ರಾತ್ರೋರಾತ್ರಿ ಹೈವೋಲ್ಟೇಜ್‌ ಕ್ಷೇತ್ರವಾಗಿ ಹೊರಹೊಮ್ಮಿರುವುದು 2023ರ ಸಾರ್ವತ್ರಿಕ ಚುನಾವಣೆಯ ವಿಶೇಷತೆಗಳಲ್ಲೊಂದು. ರಾಜಧಾನಿ ಹೃದಯ ಭಾಗದ ಸ್ವಕ್ಷೇತ್ರ ಗೋವಿಂದರಾಜನಗರವನ್ನು ಬಿಟ್ಟು ಚಾಮರಾಜನಗರ ಕ್ಷೇತ್ರದಲ್ಲಿ ಕಮಲ ಅರಳಿಸಲು ಸಚಿವ ವಿ ಸೋಮಣ್ಣ ಅಖಾಡಕ್ಕಿಳಿದಿರುವುದು ದಿಢೀರ್‌ ಪರಿವರ್ತನೆಯ ಕೇಂದ್ರ ಬಿಂದುವಾಗಿತ್ತು.

ಚಾಮರಾಜನಗರದಿಂದ ಸೋಮಣ್ಣ ಸ್ಪರ್ಧೆ ಅಚ್ಚರಿಯ ಬೆಳವಣಿಗೆ ಏನಲ್ಲ. ಬಿಜೆಪಿ ಸೇರುವುದಕ್ಕೂ ಹಿಂದಿನಿಂದಲೂ ಸೋಮಣ್ಣನವರಿಗೆ ಚಾಮರಾಜನಗರದೊಂದಿಗೆ ಸಂಪರ್ಕವಿತ್ತು. ಹಾಗಾಗಿ ಅವರ ಆಪ್ತ ಬಳಗ, ಬೆಂಬಲಿಗರ ಪಡೆಯೂ ಇತ್ತು. ಇದೇ ಕಾರಣಕ್ಕೆ 2018ರಲ್ಲೂ ಚಾಮರಾಜನಗರ ಸೇರಿದಂತೆ ಆ ಜಿಲ್ಲೆಯ ಗುಂಡ್ಲುಪೇಟೆ ಇಲ್ಲವೇ ಹನೂರಿನಿಂದ ಸೋಮಣ್ಣ ಸ್ಪರ್ಧಿಸುವ ಬಗ್ಗೆ ಚರ್ಚೆಯಾಗಿತ್ತು. ಕೊನೆಗೆ ಗೋವಿಂದರಾಜನಗರದಿಂದಲೇ ಸ್ಪರ್ಧಿಸಿದ್ದರು.

Published On - 11:41 am, Sat, 13 May 23