Karnataka Assembly Election Result 2023: ಮುನ್ನಡೆ ಕಾಯ್ದಿರಿಸಿಕೊಂಡ ಕಾಂಗ್ರೆಸ್, ಸಂತಸದಲ್ಲಿರುವ ಸಿದ್ದರಾಮಯ್ಯ ಹೇಳಿದ್ದೇನು?

Karnataka Assembly Election Result 2023: ಮುನ್ನಡೆ ಕಾಯ್ದಿರಿಸಿಕೊಂಡ ಕಾಂಗ್ರೆಸ್, ಸಂತಸದಲ್ಲಿರುವ ಸಿದ್ದರಾಮಯ್ಯ ಹೇಳಿದ್ದೇನು?

TV9 Web
| Updated By: ಆಯೇಷಾ ಬಾನು

Updated on: May 13, 2023 | 11:28 AM

ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ನಮ್ಮ ಲೆಕ್ಕಚಾರದಂತೆ ಮುನ್ನಡೆಯನ್ನು ಸಾಧಿಸಿದೆ. ನಾವು ಬಿಜೆಪಿಗೆ 65-70 ಬರಬಹುದು ಎಂದು ಕೊಂಡಿದ್ದೆವು. ಅದರಂತೆಯೇ ಟ್ರೆಂಡ್ ಇದೆ.

ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು ಕಾಂಗ್ರೆಸ್ ಪಕ್ಷ ಮುನ್ನಡೆ ಕಾಯ್ದಿರಿಸಿಕೊಂಡಿದೆ. ಸದ್ಯ ಮ್ಯಾಜಿಕ್ ನಂಬರ್ ದಾಟಿ 115 ಸ್ಥಾನಗಳಲ್ಲಿ ಮುಂದಿದೆ. ಹೀಗಾಗಿ ಕೆಪಿಸಿಸಿ ಕಚೇರಿಯಲ್ಲಿ ಸಂಭ್ರಮ ಜೋರಾಗಿದೆ. ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ಆಗಮಿಸಿ ಕಾಂಗ್ರೆಸ್​ಗೆ ಜೈಕಾರ ಕೂಗಿದ್ದಾರೆ. ಬಣ್ಣ ಹಚ್ಚಿಕೊಂಡು ಪರಸ್ಪರ ಸಂಭ್ರಮಿಸುತ್ತಿದ್ದಾರೆ. ಇನ್ನು ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ನಮ್ಮ ಲೆಕ್ಕಚಾರದಂತೆ ಮುನ್ನಡೆಯನ್ನು ಸಾಧಿಸಿದೆ. ನಾವು ಬಿಜೆಪಿಗೆ 65-70 ಬರಬಹುದು ಎಂದು ಕೊಂಡಿದ್ದೆವು. ಅದರಂತೆಯೇ ಟ್ರೆಂಡ್ ಇದೆ. ಜೆಡಿಎಸ್ 25-26 ಬರುತ್ತೆ ಎಂದಿದ್ವಿ. ಅದೇ ರೀತಿ ಇದೆ. ಕಾಂಗ್ರೆಸ್ 120ರ ಮೇಲೆ ಸ್ಥಾನಗಳನ್ನು ತೆಗೆದುಕೊಂಡು ಗೆಲ್ಲುತ್ತೆ. ಇನ್ನು ಜಾಸ್ತಿ ರೌಂಡ್ಸ್​ಗಳು ಬಾಕಿ ಇವೆ. ಹೀಗಾಗಿ ಕಾಂಗ್ರೆಸ್ ಪಕ್ಷ 120ಕ್ಕಿಂತ ಹೆಚ್ಚಿನ ಸ್ಥಾನದಿಂದ ಗೆದ್ದು ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೆ. ಇನ್ನು ವರುಣದಲ್ಲೂ ಲೀಡ್​ ಇದೆ. ಸೋಮಣ್ಣ ಎರಡೂ ಕ್ಷೇತ್ರದಲ್ಲೂ ಸೋಲುತ್ತಾರೆ ಎಂದರು.

ನರೇಂದ್ರ ಮೋದಿ, ಅಮಿತ್ ಶಾ ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಕರ್ನಾಟಕದ ಮತದಾರರ ಮೇಲೆ ಅದು ಯಾವುದೇ ಪರಿಣಾಮಬೀರಲ್ಲ. ಏಕೆಂದರೆ ಜನರು ಬೇಸತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ, ಅವರ ಜನ ವಿರೋಧಿ ನೀತಿ, ಅಭಿವೃದ್ಧಿ ಇಲ್ಲದಿರುವುದರಿಂದ ಬೇಸತ್ತಿದ್ದಾರೆ. ಹೀಗಾಗಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಅದೇ ರೀತಿ ಜನ ತೀರ್ಪು ಕೊಟ್ಟಿದ್ದಾರೆ ಎಂದು ನನಗೆ ಅನಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ