ಕುಣಿಗಲ್​ಗೆ ಆಗಮಿಸಿದ​ ಕಾಂಗ್ರೆಸ್ ಕಾರ್ಯಕರ್ತರ ಕೈಯಲ್ಲಿ ಸೋಮಣ್ಣ ಪ್ರಚಾರ ಪತ್ರಗಳು ಪತ್ತೆ, ಸಿದ್ದರಾಮಯ್ಯ ವಿರುದ್ಧ ಷಡ್ಯಂತರ ನಡೆದಿದ್ಯಾ?

ಸಿದ್ದರಾಮಯ್ಯ ಅವರೇ ಘೋಷಿಸಿರುವಂತೆ ಪ್ರಸಕ್ತ ಚುನಾವಣೆ ಅವರ ಕೊನೆಯ ಚುನಾವಣೆಯಾಗಿದೆ. ಆದರೆ ಇವರನ್ನು ಸೋಲಿಸಲು ಬಿಜೆಪಿ ಪಣತೊಟ್ಟಿದ್ದರೆ, ಇತ್ತ ಕಾಂಗ್ರೆಸ್​ನಲ್ಲೂ ಟಗರು ಮಣಿಸಲು ಒಳಸಂಚು ನಡೆಸುತ್ತಿದ್ದಾರಂತೆ.

ಕುಣಿಗಲ್​ಗೆ ಆಗಮಿಸಿದ​ ಕಾಂಗ್ರೆಸ್ ಕಾರ್ಯಕರ್ತರ ಕೈಯಲ್ಲಿ ಸೋಮಣ್ಣ ಪ್ರಚಾರ ಪತ್ರಗಳು ಪತ್ತೆ, ಸಿದ್ದರಾಮಯ್ಯ ವಿರುದ್ಧ ಷಡ್ಯಂತರ ನಡೆದಿದ್ಯಾ?
ಸಿದ್ದರಾಮಯ್ಯ ಮತ್ತು ಕುಣಿಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ ಕೃಷ್ಣಕುಮಾರ್
Follow us
Rakesh Nayak Manchi
|

Updated on: May 07, 2023 | 5:11 PM

ತುಮಕೂರು: ಸಿದ್ದರಾಮಯ್ಯ (Siddaramaiah) ಅವರೇ ಘೋಷಿಸಿರುವಂತೆ ಪ್ರಸಕ್ತ ಚುನಾವಣೆ (Karnataka Assembly Elections 2023) ಅವರ ಕೊನೆಯ ಚುನಾವಣೆಯಾಗಿದೆ. ಆದರೆ ಇವರನ್ನು ಸೋಲಿಸಲು ಬಿಜೆಪಿ (BJP) ಪಣತೊಟ್ಟಿದ್ದರೆ, ಇತ್ತ ಕಾಂಗ್ರೆಸ್​ನಲ್ಲೂ (Congress) ಟಗರು ಮಣಿಸಲು ಒಳಸಂಚು ನಡೆಯುತ್ತಿದೆಯಾ ಎಂಬ ಪ್ರಶ್ನೆ ಇದೀಗ ಉದ್ಘವವಾಗಿದೆ. ಪ್ರಚಾರಕರ ಕೈಯಲ್ಲಿ ವರುಣಾ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರ ಪ್ರಚಾರದ ಪತ್ರಗಳು ಪತ್ತೆಯಾಗಿವೆ. ಹಾಗಂತ ಕುಣಿಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ ಕೃಷ್ಣಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ದವೇ ಆರೋಪಿಸಿದ ಕೃಷ್ಣಕುಮಾರ್, ಕುಣಿಗಲ್​ನ ಕಗ್ಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಪರ ಆಮಿಷವೊಡ್ಡಲು 200ಕ್ಕೂ ಹೆಚ್ಚು ಜನರು ಬಂದಿದ್ದರು. ಅವರ ಬಳಿ ವಿ.ಸೋಮಣ್ಣಗೆ ಸಂಬಂಧಪಟ್ಟ ಪ್ರಚಾರಪತ್ರಗಳು ಪತ್ತೆಯಾಗಿವೆ. ಅವರು ಬಂದಿದ್ದು ಕಾಂಗ್ರೆಸ್ ಅಭ್ಯರ್ಥಿ ಪರ, ಆದರೆ ಅವರ ಹತ್ರ ಸೋಮಣ್ಣ ಅವರದ್ದು ಯಾಕೆ ಇತ್ತು? ಸಿದ್ದರಾಮಯ್ಯ ಅವರನ್ನ ರಾಜಕೀಯವಾಗಿ ಮುಗಿಸೋಕೆ ಒಳಸಂಚು ಏನಾದ್ರೂ ನಡೆಯುತ್ತಿದೆಯೇ ಅಂತಾ ಅನಿಸಿತು ಎಂದರು.

ಇದನ್ನೂ ಓದಿ: ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿರುವ ಸಿದ್ದರಾಮಯ್ಯ; ಪ್ರಧಾನಿ ಮೋದಿ ವ್ಯಂಗ್ಯ

ಸೋಮಣ್ಣ ಅವರಿಗೆ ಸಂಬಂಧಿಸಿದ ಬ್ಯಾಲೆಟ್ ಪೇಪರ್, ಫ್ಲೆಕ್ಸ್, ಕಾರ್ಡ್​ಗಳು ಕಗ್ಗೆರೆಗೆ ಆಗಮಿಸಿದ್ದ ಕಾಂಗ್ರೆಸ್​ನವರ ಬಳಿ ಇತ್ತು. ಸೋಮಣ್ಣ ಪ್ರಚಾರದ ಕರಪತ್ರಗಳು ಕುಣಿಗಲ್​ಗೆ ಯಾಕೆ ಬಂತು? ಕುಣಿಗಲ್​ನಲ್ಲಿ ಕಾಂಗ್ರೆಸ್ ನಾಯಕರು ಕಡಿಮೆ. ನಮ್ಮ ಅಭ್ಯರ್ಥಿ ಸೋಲುತ್ತಾರೆ ಅಂತಾ ಮನದಟ್ಟು ಆದ ಮೇಲೆ ಕನಕಪುರದಿಂದ ಜನರನ್ನ ಕರೆದುಕೊಂಡು ಬಂದಿದ್ದಾರೆ ಎಂದರು.

ಕಗ್ಗೆರೆಗೆ ಆಗಮಿಸಿದವರಲ್ಲಿ ಯಾರಿಗೂ 18 ವರ್ಷ ತುಂಬಿಲ್ಲ. 700 ಕೂಲಿ ಕೊಡುತ್ತೇವೆ ಅಂತಾ ಕರೆದುಕೊಂಡು ಬಂದರು, ನಮ್ಮನ್ನ ಬಿಟ್ಟುಬಿಡಿ ಅಂತಾ ಕಾಲಿಗೆ ಬೀಳುತ್ತಿದ್ದರು. ಒಂದು ಕಾರು ತುಂಬಾ ವೇಗವಾಗಿ ಹೋಯಿತು, ಅದರಲ್ಲಿ ದುಡ್ಡು ಇತ್ತು ಅನಿಸುತ್ತದೆ ಎಂದು ಕೃಷ್ಣಕುಮಾರ್ ಆರೋಪಿಸಿದರು. ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಬಂಧಿಯಾಗಿದ್ದಾರೆ.

ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಹೊರಜಿಲ್ಲೆಗಳಿಂದ ಬಂದು ಪ್ರಚಾರ

ಕುಣಿಗಲ್ ಕ್ಷೇತ್ರಕ್ಕೆ ಹೊರಜಿಲ್ಲೆಗಳಿಂದ ಬಂದು ಪ್ರಚಾರ ನಡೆಸುತ್ತಿರುವ ಆರೋಪ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ವಿರುದ್ಧ ಕೇಳಿಬಂದಿದೆ. ಎರಡು ಬಸ್​ಗಳಲ್ಲಿ ಕಗ್ಗೆರೆಗೆ ಆಗಮಿಸಿದ 200ಕ್ಕೂ ಹೆಚ್ಚು ಜನರನ್ನು ಬಿಜೆಪಿ ಕಾರ್ಯಕರ್ತರು ಹಿಡಿದಿಟ್ಟಿದ್ದು, ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್, 16 ಬಾಕ್ಸ್​ಗಳು, 50 ಮಾದರಿ ಮತಯಂತ್ರಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮತದಾರರಿಗೆ ಗ್ಯಾರಂಟಿ ಕಾರ್ಡ್ ನೀಡಿ, 1000 ಹಣ ನೀಡುತ್ತಿರುವ ಆರೋಪವೂ ಕೇಳಿಬಂದಿದ್ದು, ಚುನಾವಣಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಅಮೃತ್ತೂರು ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಸೇರಿ 11 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್