AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಬೆಂಬಲಿಗರಿಂದ ಜೀವ ಬೆದರಿಕೆ, ಇಬ್ಬರು ಅರೆಸ್ಟ್

ಚುನಾವಣೆ ಮುಗಿಯುತ್ತಿದ್ದಂತೆ ಬಳ್ಳಾರಿಯಲ್ಲಿ ದ್ವೇಷದ ರಾಜಕಾರಣ ಆರಂಭವಾಗಿದ್ದು, ಶಾಸಕ ನಾಗೇಂದ್ರ ಅವರಿಗೆ ಬಿಜೆಪಿ ಬೆಂಬಲಿಗರು ಜೀವ ಬೆದರಿಕೆ ಹಾಕಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಬಳ್ಳಾರಿ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಬೆಂಬಲಿಗರಿಂದ ಜೀವ ಬೆದರಿಕೆ, ಇಬ್ಬರು ಅರೆಸ್ಟ್
ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಬೆಂಬಲಿಗರಿಂದ ಜೀವ ಬೆದರಿಕೆ
Rakesh Nayak Manchi
|

Updated on: May 14, 2023 | 11:04 PM

Share

ಬಳ್ಳಾರಿ: ಚುನಾವಣೆ ಮುಗಿಯುತ್ತಿದ್ದಂತೆ ಬಳ್ಳಾರಿಯಲ್ಲಿ (Ballari) ದ್ವೇಷದ ರಾಜಕಾರಣ ಆರಂಭವಾಗಿದ್ದು, ಶಾಸಕ ನಾಗೇಂದ್ರ (MLA Nagendra) ಅವರಿಗೆ ಬಿಜೆಪಿ ಬೆಂಬಲಿಗರು ಜೀವ ಬೆದರಿಕೆ ಹಾಕಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಗೆಲುವಿನ ಬಳಿಕ ಶುಭಾಶಯ ಕೋರುವ ನೆಪದಲ್ಲಿ ಎದುರು ಬಂದ ನಾಲ್ವರು ಜೀವ ಬೆದರಿಕೆ ಹಾಕಿದ್ದು, ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪರಾರಿಯಾಗಿದ್ದಾರೆ.

ಮೇ 13ರಂದು ಗೆಲುವು ಸಾಧಿಸಿದ ಬಳಿಕ ಮತ ಎಣಿಕೆ ಕೇಂದ್ರದಿಂದ ರ್ಯಾಲಿಯಲ್ಲಿ ಬರುತ್ತಿದ್ದ ಶಾಸಕ ನಾಗೇಂದ್ರ ಅವರಿಗೆ ಬೈಕ್​ಗಳಲ್ಲಿ ಬಂದ ನಾಲ್ವರು ಎದುರಾಗಿದ್ದಾರೆ. ಗೆದ್ದ ಸಂತೋಷದಲ್ಲಿದ್ದ ನಾಗೇಂದ್ರ ಅವರು ಈ ನಾಲ್ವರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಈ ವೇಳೆ ಬೆದರಿಕೆ ಹಾಕಿದ್ದು, ನಾಲ್ವರ ಬಳಿ ಮಾರಕಾಸ್ತ್ರಗಳನ್ನು ನೋಡಿದ ಶಾಸಕರ ಭದ್ರತಾ ಸಿಬ್ಬಂದಿ ಇಬ್ಬರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಭಟ್ಕಳದಲ್ಲಿ ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

ಬಳ್ಳಾರಿಯ ರಿಮ್ಯಾಂಡ್ ಹೋಂ ಬಳಿ ನಡೆದ ಘಟನೆ ಇದಾಗಿದ್ದು, ರಮೇಶ್ ಮತ್ತು ವೆಂಕಟೇಶ್ ಎಂಬವರನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಬಳ್ಳಾರಿಯ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತಿಬ್ಬರ ಬಂಧನಕ್ಕೆ ತನಿಖೆ ಕೈಗೊಳ್ಳಲಾಗಿದೆ. ಘಟನೆಯ ಬೆನ್ನಲ್ಲೆ ಎಚ್ಚೇತ್ತುಕೊಂಡ ಪೊಲೀಸ್ ಇಲಾಖೆ ಶಾಸಕರಿಗೆ ಎಸ್ಕಾರ್ಟ್ ವ್ಯವಸ್ಥೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ